More

    ಮಂಗಳೂರು- ರಾಮೇಶ್ವರ ರೈಲಿಗೆ ಸಚಿವಾಲಯದ ಅನುಮೋದನೆ

    ಮಂಗಳೂರು: ತಮಿಳುನಾಡಿನ ಪ್ರಧಾನ ಪ್ರವಾಸೋದ್ಯಮ ತಾಣ ರಾಮೇಶ್ವರ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಹೊಸ ಸಾಪ್ತಾಹಿಕ ರೈಲು ಆರಂಭಿಸಲು ಕೇಂದ್ರ ರೈಲ್ವೆ ಸಚಿವಾಲಯವು ಮಾರ್ಚ್ 15 ರಂದು ಅನುಮೋದನೆ ನೀಡಿದೆ.
    ಶನಿವಾರ ರಾತ್ರಿ 7.30 ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು- ರಾಮೇಶ್ವರ ಎಕ್ಸ್‌ಪ್ರೆಸ್ (16622/ 16621) ಮರುದಿನ ಭಾನುವಾರ ಬೆಳಗ್ಗೆ 11.45 ಕ್ಕೆ ರಾಮೇಶ್ವರ ತಲುಪಲಿದೆ.
    ಭಾನುವಾರ ಮಧ್ಯಾಹ್ನ 2 ಗಂಟೆಗೆ ರಾಮೇಶ್ವರದಿಂದ ಹೊರಡುವ ಈ ರೈಲು ಮರುದಿನ ಸೋಮವಾರ ಮುಂಜಾನೆ 5.50 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
    ಕಾಸರಗೋಡು, ಕಣ್ಣೂರು, ಕೋಝಿಕೋಡು, ಶೊರ್ನೂರು, ಪಾಲಕ್ಕಾಡು, ಪೊಲ್ಲಾಚಿ, ಪಳನಿ, ಮಧುರೈ ಮುಂತಾದೆಡೆ ರೈಲಿಗೆ ನಿಲುಗಡೆ ಇದೆ.
    ಮಂಗಳೂರು ಮತ್ತು ರಾಮೇಶ್ವರ ನಡುವೆ ರೈಲು ಆರಂಭಿಸಲು ಕಳೆದ ಐದು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘ ಈ ಕುರಿತು ದಕ್ಷಿಣ ಕನ್ನಡ ಸಂಸದರ ಮೂಲಕ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿತ್ತು. 2022 ರಲ್ಲಿ ನಡೆದ ರೈಲ್ವೆ ವೇಳಾಪಟ್ಟಿ ಸಮ್ಮೇಳನದಲ್ಲಿ ಮಂಗಳೂರಿನಿಂದ ತಮಿಳುನಾಡಿನ ರಾಮೇಶ್ವರ ಮತ್ತು ಗುಜರಾತಿನ ಭಾವನಗರ ಎರಡು ಕಡೆ ರೈಲು ಆರಂಭಿಸಲು ಒಪ್ಪಿಗೆ ದೊರೆತ್ತಿತ್ತು ಎಂದ ರೈಲ್ವೆ ಪಾಲಕ್ಕಾಡ್ ವಿಭಾಗದ ಸಲಹಾ ಸಮಿತಿ ಸದಸ್ಯ ಹನುಮಂತ ಕಾಮತ್ ತಿಳಿಸಿದ್ದಾರೆ.
    ರಾಮೇಶ್ವರ, ಮಧುರೈ ಮತ್ತು ಮಂಗಳೂರು ದೇಶದ ಪ್ರಮುಖ ಮೂರು ಪ್ರವಾಸೋದ್ಯಮ ಕೇಂದ್ರಗಳನ್ನು ಸಂಪರ್ಕಿಸುವ ಈ ರೈಲು ಕರಾವಳಿಯ ಜನರಿಗೆ ಮುಖ್ಯವಾಗಿದೆ ಎನ್ನುವ ಅಭಿಪ್ರಾಯವನ್ನು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘದ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts