More

    ಹೆಚ್ವು ಮತ ತಂದುಕೊಟ್ಟವರಿಗೆ ಸಚಿವ ಸ್ಥಾನ?

    ಹೊಸಪೇಟೆ: ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಹೊಸ ತಂತ್ರ ಹೆಣೆದಿದ್ದು, ಪಕ್ಷದ ಶಾಸಕರಿಗೆ ವೋಟ್ ಟಾರ್ಗೆಟ್ ನೀಡಿದೆ. ಅಲ್ಲದೇ ಪ್ರತಿವಿಧಾನ ಕಾಂಗ್ರೆಸ್ ಅತಿ ಹೆಚ್ಚು ಮತಗಳ ಕೊಡಿಸುವ ಶಾಸಕನಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿದೆ ಎನ್ನಲಾಗಿದೆ.

    ಕಳೆದ ಒಂದು ವರ್ಷದಿಂದ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯಲ್ಲಿ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿದೆ. ವಿಜಯನಗರ ಜಿಲ್ಲೆ ಸಚಿವ ಸ್ಥಾನದಿಂದ ವಂಚಿಸಿತು. ಅದರಿಂದ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗೆ ಹಿನ್ನಡೆ ಆಗಬಹುದೆಂದು ಮನಗೊಂಡ ಕಾಂಗ್ರೆಸ್ ಹೈಕಮಾಂಡ್, ಅತಿ ಹೆಚ್ಚು ಮತಗಳನ್ನು ಕೊಡಿಸಿ, ಅಭ್ಯರ್ಥಿ ಗೆಲುವಿಗೆ ಕಾರಣರಾಗುವ ಶಾಸಕನಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರಾಜ್ಯದಲ್ಲಿ ಜಾರಿಯಾದ ಗ್ಯಾರಂಟಿ ಯೋಜನೆಗಳು ದೇಶದಲ್ಲಿ ಭಾರೀ ಸದ್ದು ಮಾಡಿದ್ದು, ಇದನ್ನೆ ಬಂಡವಾಳ ಮಾಡಿಕೊಂಡ ಕಾಂಗ್ರೆಸ್, ಗಣಿನಾಡಿನಲ್ಲಿ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಪ್ರದರ್ಶನ ತೋರಲು ಶಾಸಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಬಿಜೆಪಿಯನ್ನು ಈ ಚುನಾವಣೆಯಲ್ಲಿ ಮಣಿಸೋದು ಹೇಗೆ, ಅಭ್ಯರ್ಥಿಗಳನ್ನು ಗೆಲ್ಲಿಸೋದು ಹೇಗೆ ಎಂದು ತಲೆ ಕೆಡಿಸಿಕೊಂಡ ಕಾಂಗ್ರೆಸ್ ನಾಯಕರು ಇದಕ್ಕೆ ಹುಡುಕಿದ ಹೊಸ ಉಪಾಯವಾಗಿದೆ. ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಬಿ.ನಾಗೇಂದ್ರಗೆ ಮಂತ್ರಿ ಸ್ಥಾನ, ಶಾಸಕ ಜೆ.ಎನ್.ಗಣೇಶನಿಗೆ ನಿಗಮ ಮಂಡಳಿ ಸ್ಥಾನ ಸಿಕ್ಕಿದೆ. ಇನ್ನೂ ಮಾಜಿಶಾಸಕ ಎಲ್.ಭೀಮಾನಾಯ್ಕಗೆ ಕೆಎಂಎಫ್ ಅಧ್ಯಕ್ಚ ಸ್ಥಾನ ಬಿಟ್ಟರೆ, ವಿಜಯನಗರ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾಗಿದೆ. ಯಾವ ಶಾಸಕರು ಹೆಚ್ಚು ಮತ ಕೊಡಿಸಿದ್ದರು ಅವರಿಗೆ ಸಚಿವ ಸ್ಥಾನ ನೀಡುವುದಾಗಿ ತಂತ್ರ ರೂಪಿಸಿದೆ.

    ಆರಂಭದಲ್ಲಿ ಸಚಿವರನ್ನೇ ಚುನಾವಣಾ ಅಖಾಡಕ್ಕಿಳಿಸಲು ಹೈಕಮಾಂಡ್ ಪ್ಲ್ಯಾನ್ ಮಾಡಿತ್ತು. ಆದರೆ, ತಮ್ಮ ಸಚಿವಗಿರಿ ಎಲ್ಲಿ ಕಳೆದುಕೊಳ್ಳಬೇಕಾಗುತ್ತೋ ಎಂದು ಸಚಿವ ಬಿ.ನಾಗೇಂದ್ರ ಹಿಂದೇಟು ಹಾಕಿದರು. ಬೇರೆಯವರಿಗೆ ಟಿಕೆಟ್ ನೀಡುವುದಕ್ಕಿಂತ ಶಾಸಕ ಈ.ತುಕಾರಾಮ್ ವರಿಗೆ ಮನವೋಲಿಸಿ ಕಣಕ್ಕೆ ಇಳಿಸಿದ್ದು, ಗೆಲ್ಲಿಸುವ ಜವಾಬ್ದಾರಿ ಶಾಸಕರಿಗೆ ವಹಿಸಿದೆ.

    ಸ್ಥಳೀಯ ಸಂಸ್ಥೆಗಳ ಸದಸ್ಯರಿಗೂ ಒತ್ತಡ

    ಕಾಂಗ್ರೆಸ್ ಈಗ ಪ್ರತಿಸ್ಪರ್ಧಿಗಿಂತ ಹೆಚ್ಚು ಮತ ಪಡೆಯಲು ಪಕ್ಷದ ಶಾಸಕರು, ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಟಾರ್ಗೆಟ್ ನೀಡುತ್ತಿವೆ. ಇದು ಕಳೆದ ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅತಿ ಹೆಚ್ಚು ಮತ ಪಡೆದ ಸದಸ್ಯರಿಗೆ ಸವಾಲಾಗಿದೆ. ಗೆಲ್ಲಲು ಪಕ್ಷಗಳು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮವನ್ನೇ ಹೆಚ್ಚು ನಂಬಿಕೊAಡಿವೆ. ಹೀಗಾಗಿ ಈ ಹಿಂದಿನ ಚುನಾವಣೆಗಳಲ್ಲಿ ಶಾಸಕರು, ಸ್ಥಳೀಯ ಸಂಸ್ಥೆ ಸದಸ್ಯರು ಎಷ್ಟು ಮತಗಳನ್ನು ಪಡೆದು ಗೆದ್ದಿದ್ದರು ಎಂಬ ಲೆಕ್ಕ ಹಾಕಿ ಅಷ್ಟೇ ಮತಗಳನ್ನು ಪ್ರಸ್ತುತ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಕೊಡಿಸಬೇಕೆಂಬ ಗುರಿ ನಿಗದಿಗೊಳಿಸಲಾಗುತ್ತಿದೆ. ಸೋತ ಅಭ್ಯರ್ಥಿಗಳು ತಾವು ಪಡೆದ ಮತಗಳೊಟ್ಟಿಗೆ ಇನ್ನಷ್ಟು ಹೆಚ್ಚು ಮತಗಳನ್ನು ಸೇರಿಸಲು ಸೂಚಿಸಲಾಗುತ್ತಿದೆ.

    ಜೆಡಿಎಸ್ ಮತಗಳ ಮೇಲೆ ಕಣ್ಣು

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದಿರುವ ಕಾಂಗ್ರೆಸ್ ನಮಗೆ ಶಾಸಕರೇ ದೊಡ್ಡ ಬಲ ಎನ್ನುತ್ತಿದೆ. ಆದರೆ, ಬಿಜೆಪಿ ಒಂದೇ ಒಂದು ಸ್ಥಾನ ಗೆದ್ದಿದ್ದರೂ ಇಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ನಮಗೆ ಲಾಭ ತಂದುಕೊಡಲಿದೆ ಎಂಬ ಆಲೋಚನೆಯಲ್ಲಿದೆ. ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ಹಗರಿಬೊಮ್ಮನಹಳ್ಳಿ ಪ್ರಭಾವ ಉಳಿಸಿಕೊಂಡಿದೆ. ಒಟ್ಟಾರೆ ಜೆಡಿಎಸ್ ಬಿಜೆಪಿ ಒಟ್ಟು 2 ಕ್ಷೇತ್ರಗಳಲ್ಲಿವೆ. ಜೆಡಿಎಸ್ ಅಭ್ಯರ್ಥಿಗಳು ಪಡೆದ ಮತಗಳೂ ಬಿಜೆಪಿಗೆ ಬರಲಿವೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ. ಆದರೆ, ಇವು ಜಾತ್ಯತೀತ ಮತಗಳಾಗಿದ್ದರಿಂದ ನಮಗೇ ಪ್ಲಸ್ ಆಗಲಿದೆ ಎಂಬ ವಾದದಲ್ಲಿ ಕಾಂಗ್ರೆಸ್ ಇದೆ. ಸ್ಥಳೀಯ ಯ ಸಂಸ್ಥೆ ಚುನಾವಣೆಯಲ್ಲಿ ಪಡೆದ ಮತಗಳ ಹಂಚಿಕೆಯನ್ನೂ ಇದೇ ರೀತಿ ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಜೆಡಿಎಸ್ ಬೆಂಬಲಿತ ಮತದಾರರ ನಿಲುವು ಎತ್ತ ಎಂಬುದು ಪ್ರಾಮುಖ್ಯತೆ ಪಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts