ಪುಟಾಣಿಗಳ ರಕ್ಷಣೆಗೆ ಧಾವಿಸಿದ ನಟ ಶಶಿಕುಮಾರ್

Shashi
Published on

ಬೆಂಗಳೂರು: ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ಪದ್ಮಾವತಿ ಎಂಬುವವರು ನಿರ್ಮಿಸುತ್ತಿರುವ ಪ್ರಚಂಡ ಪುಟಾಣಿಗಳು ಚಿತ್ರದ ಚಿತ್ರೀಕರಣ ಮುಕ್ತಾಯಗೊ೦ಡಿದೆ. ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳನ್ನು ನಿಧಿಗಾಗಿ ಬಲಿಕೊಡುವಾಗ, ಅಲ್ಲಿಗೆ ಬರುವ ಹಿರಿಯ ನಟ ಶಶಿಕುಮಾರ್, ಅಮಾಯಕರನ್ನು ಕಾಪಾಡಲು ಯುಗಯುಗದಲ್ಲೂ ನಾನು ಅವತಾರವೆತ್ತುತ್ತಲೇ ಬಂದಿದ್ದೇನೆ. ಇನ್ನು ಅವತಾರಗಳಿಲ್ಲ, ಸಂಹಾರವೇ ಎನ್ನುತ್ತ ಖಳನಟರಾದ ಬಲರಾಮ್ ಪಂಚಾಲ್, ಕೋಲಾರ್ ಬಾಲು, ನಿಡುವಳ್ಳಿ ರೇವಣ್ಣ, ಗುರು ಪ್ರಸನ್ನ ಮೊದಲಾದವರನ್ನು ಸೆದೆಬಡಿಯುವ ಸಾಹಸ ದೃಶ್ಯಗಳ ಮುಕ್ತಾಯದೊಂದಿಗೆ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಯಿತು.


ಕೋಲಾರ, ಚಿಂತಾಮಣಿ, ಅಂತರಗಂಗೆ, ಕೈಲಾಸಗಿರಿ ಮೊದಲಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡ ಪ್ರಚಂಡ ಪುಟಾಣಿಗಳು ಚಿತ್ರದಲ್ಲಿ ಹಿರಿಯ ಕಲಾವಿದರು ಸೇರಿ, ಬಾಲ ಕಲಾವಿದರು ಸೇರಿ ಅನಾಥಾಶ್ರಮದ 50 ಮಂದಿ ಬುದ್ಧಿಮಾಂದ್ಯ ಮಕ್ಕಳು ಪಾಲ್ಗೊಂಡಿದ್ದರು.

ವಿನು ಮನಸು ಸಂಗೀತವಿರುವ ಪ್ರಚಂಡ ಪುಟಾಣಿಗಳು ಚಿತ್ರಕ್ಕೆ ಸುರೇಶ್ ಕಂಬಳಿ ಸಾಹಿತ್ಯ, ರಾಜೀವ್ ಕೃಷ್ಣರವರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ನೃತ್ಯ, ಸಾಹಸ, ಹಾಗೂ ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಕೋಲಾರ್ ಸುಮಂತ್ ಸ್ಥಿರಚಿತ್ರಣ, ಸುನಿಲ್ ಕುಮಾರ್ ನಿರ್ಮಾಣ ನಿರ್ವಹಣೆ ಇರುವ ಚಿತ್ರದ ಎಡಿಟಿಂಗ್ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ಥಿಯೇಟರ್​ಗಳು ತೆರೆದ ತಕ್ಷಣವೇ ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net