ಆ.15ರಂದು ಇಸ್ರೋ ಉಪಗ್ರಹ ಉಡಾವಣೆ; ಭೂ ಸರ್ವೆಕ್ಷಣಾ ಉದ್ದೇಶ 3 ಪೇಲೋಡ್ ಕಕ್ಷೆಗೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭೂ ಸರ್ವೆಕ್ಷಣಾ ಉಪಗ್ರಹ ‘ಇಒಎಸ್-08’ವನ್ನು ಎಸ್​ಎಸ್​ಎಲ್​ವಿ-ಡಿ3 ಮೂಲಕ ಆಗಸ್ಟ್ 15ರಂದು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಿದೆ.

ಇದನ್ನೂ ಓದಿ: ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್‌ಗೆ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ

ಮೈಕ್ರೋ ಸೆಟಲೈಟ್ ವಿನ್ಯಾಸ-ಅಭಿವೃದ್ಧಿ, ಮೈಕ್ರೋ ಸೆಟಲೈಟ್ ಬಸ್​ಗೆ ಹೊಂದಿಕೆ ಆಗುವ ಪೇಲೋಡ್ ಉಪಕರಣ ರಚನೆ, ಭವಿಷ್ಯದ ಉಪಗ್ರಹ ಕಾರ್ಯಾಚರಣೆಗಳಿಗೆ ಅಗತ್ಯ ಇರುವ ತಂತ್ರಜ್ಞಾನ ಸಂಯೋಜನೆ ಈ ಇಒಎಸ್-08 ಪ್ರಾಥಮಿಕ ಉದ್ದೇಶವಾಗಿದೆ ಎಂದು ಇಸ್ರೋ ಹೇಳಿದೆ. ಎಲೆಕೊ್ಟ್ರೕ ಆಪ್ಟಿಕಲ್ ಇನ್​ಫ್ರಾರೆಡ್ (ಇಒಐಆರ್), ಗ್ಲೋಬಲ್ ನೇವಿಗೇಷನ್ ಸೆಟಲೈಟ್ ಸಿಸ್ಟಮ್​ರಿಫ್ಲೆಕ್ಟೊಮೆಟ್ರಿ (ಜಿಎನ್​ಎಸ್​ಎಸ್-ಆರ್) ಮತ್ತು ಎಸ್​ಐಸಿ ಯುವಿ ಡೋಸಿಮೀಟರ್ ಎಂಬ ಮೂರು ಪೇಲೋಡ್​ಗಳನ್ನು ಈ ಉಪಗ್ರಹ ಹೊಂದಿದೆ.

ಒಂದು ವರ್ಷದ ಜೀವಿತಾವಧಿಯ ಈ ಉಪಗ್ರಹ ಅಂದಾಜು 175.5 ಕೆ.ಜಿ. ತೂಕ ಹಾಗೂ 420 ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನೂ ಹೊಂದಿದೆ ಎಂದೂ ಇಸ್ರೋ ತಿಳಿಸಿದೆ. ಇಒಐಆರ್ ಪೇಲೋಡ್ ಪ್ರಾಕೃತಿಕ, ಅಗ್ನಿ ಮತ್ತು ಕೈಗಾರಿಕೆ ಇಲ್ಲವೇ ವಿದ್ಯುತ್ ಸ್ಥಾವರಗಳಲ್ಲಿನ ಅವಘಡ ಸಂದರ್ಭದಲ್ಲಿ ಹಗಲು-ರಾತ್ರಿ ಚಿತ್ರ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಬ್ರೆಜಿಲ್​ ವಿಮಾನ ದುರಂತ: ಮೃತರ ಸಂಖ್ಯೆ 62 ಅಲ್ಲ 63 ಆಗಬೇಕಿತ್ತು! ಕಣ್ಣೀರಿಟ್ಟ ಬದುಕುಳಿದ ಪ್ರಯಾಣಿಕ

ಸಮುದ್ರ ಮೇಲ್ಮೈ ಗಾಳಿ ವಿಶ್ಲೇಷಣೆ, ಮಣ್ಣಿನ ತೇವಾಂಶ ಅಂದಾಜು, ಹಿಮಾಲಯ ಪ್ರದೇಶದ ಕ್ರಯೋಸ್ಪಿಯರ್ ಅಧ್ಯಯನ, ಪ್ರವಾಹ ಮುನ್ಸೂಚನೆ ಗ್ರಹಣ ಮುಂತಾದ ತಂತ್ರಾಂಶಗಳ ರಿಮೋಟ್ ಸೆನ್ಸಿಂಗ್ ಸಾಮರ್ಥ್ಯ ಹೊಂದಿದೆ. ಗಾಮಾ ವಿಕಿರಣಗಳ ಹೈ-ಡೋಸ್ ಅಲಾಮ್ರ್ ಸೆನ್ಸಾರ್ ಆಗಿ ಹಾಗೂ ಗಗನ್​ಯಾನ್ ಮಿಷನ್​ನ ಕ್ರ್ಯೂ ಮಾಡೆಲ್ ವ್ಯೂಪೋರ್ಟ್​ನ ಅತಿನೇರಳೆ ವಿಕಿರಣದ ಮೇಲ್ವಿಚಾರಣೆ ಮೇಲೆ ಎಸ್​ಐಸಿ ಯುವಿ ಡೋಸಿಮೀಟರ್ ಪೇಲೋಡ್ ನಿಗಾ ವಹಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಬ್ರೆಜಿಲ್​ ವಿಮಾನ ದುರಂತ: ಮೃತರ ಸಂಖ್ಯೆ 62 ಅಲ್ಲ 63 ಆಗಬೇಕಿತ್ತು! ಕಣ್ಣೀರಿಟ್ಟ ಬದುಕುಳಿದ ಪ್ರಯಾಣಿಕ

ಅನುಮಾನ ಬೇಡ ಇದು ಅವರದ್ದೇ ಕೈವಾಡ: ಶೇಖ್ ಹಸೀನಾ ಪುತ್ರ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…