ಬ್ರೆಜಿಲ್: ಇಲ್ಲಿನ ಸಾವೊ ಪಾಲೊ ವಿನ್ಹೆಡೊದಲ್ಲಿ 62 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡಿದ್ದು, ದುರಂತದಲ್ಲಿ ಯಾರೊಬ್ಬರು ಕೂಡ ಬದುಕುಳಿದಿಲ್ಲ. ಪ್ರಯಾಣಿಸುತ್ತಿದ್ದ 62 ಜನರು ಕೂಡ ದುರ್ಮರಣ ಹೊಂದಿದ್ದಾರೆ. ಆದ್ರೆ, ಒಬ್ಬ ವ್ಯಕ್ತಿ ಮಾತ್ರ ಏರ್ಪೋರ್ಟ್ನಲ್ಲಿ ದುರಂತಕ್ಕೀಡಾದ ವಿಮಾನ ಹತ್ತದೆ ಇದೀಗ ತನ್ನ ಜೀವವನ್ನು ಉಳಿಸಿಕೊಂಡ ವಿಷಯ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇದನ್ನೂ ಓದಿ: ಹುಷಾರಾಗಿರು.. ಅವನು ದುಬೈನಲ್ಲಿ ನಿನ್ನನ್ನು ಮಾರುತ್ತಾನೆ ಎಂದಿದ್ರು: ಹಳೆಯ ಘಟನೆ ನೆನೆದ ತಾಪ್ಸಿ ಪನ್ನು
ವಿಮಾನ ಟೇಕ್ಆಫ್ ಆಗಲು ಕೆಲವು ನಿಮಿಷಗಳ ಹಿಂದೆ ಏರ್ಪೋರ್ಟ್ಗೆ ತಡವಾಗಿ ಬಂದ ಪ್ರಯಾಣಿಕ, ವಿಮಾನ ಸಿಬ್ಬಂದಿಗೆ ತನ್ನನ್ನು ಹೋಗಲು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದ್ರೆ, ಸೆಕ್ಯೂರಿಟಿ ಮಾತ್ರ ನೀವು ಹೋಗುವಂತಿಲ್ಲ, ಇಲ್ಲೇ ನಿಲ್ಲಿ ಎಂದು ಅವರನ್ನು ತಡೆದಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಪ್ರಯಾಣಿಕ, ನೀವು ಯಾರು ನನ್ನನ್ನು ತಡೆಯಲು, ನನಗೆ ತಡವಾಗ್ತಿದೆ ಬಿಡಿ ಒಳಗೆ ಎಂದು ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದಾರೆ. ಆದ್ರೆ, ವಿಮಾನ ಪತನಗೊಂಡ ಸುದ್ದಿ ಕೇಳಿದ ತಕ್ಷಣವೇ ತನ್ನನ್ನು ಹೋಗದಂತೆ ತಡೆದ ವ್ಯಕ್ತಿಗೆ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ.
ಇನ್ನು ಘಟನೆಯನ್ನು ವಿವರಿಸಿದ ಪ್ರಯಾಣಿಕ, “ನಾನು ತಡವಾಗಿ ಏರ್ಪೋರ್ಟ್ಗೆ ಬಂದೆ ಎಂಬ ಒಂದೇ ಒಂದು ಕಾರಣಕ್ಕೆ ಏರ್ಲೈನ್ಸ್ ಸಿಬ್ಬಂದಿ ನನ್ನ ಒಳಗೆ ಬಿಡಲಿಲ್ಲ. ನಾನು ಗೇಟ್ ಬಳಿಯೇ ನಿಂತು, ಅವರೊಂದಿಗೆ ವಾಗ್ವಾದ ನಡೆಸಿದೆ. ಎಷ್ಟು ಮನವಿ ಮಾಡಿದ್ರೂ ನನ್ನನ್ನು ವಿಮಾನ ಹತ್ತಲು ಬಿಡದೆ, ಹೊರಕಳುಹಿಸಿದರು. ಆದ್ರೆ, ವಿಮಾನ ಪತನಗೊಂಡ ಸುದ್ದಿ ಕೇಳಿದಾಗ ಒಂದು ನಿಮಿಷ ಭಾರೀ ಅಚ್ಚರಿಗೆ ಒಳಗಾದೆ. ಸಿಬ್ಬಂದಿ ದೇವರ ರೂಪದಲ್ಲಿ ಬಂದು ನನ್ನ ಜೀವ ಉಳಿಸಿದರು” ಎಂದು ಭಾವುಕರಾಗಿ ಹೇಳಿದರು. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).