ಲಾಹೋರ್: ಟಿ20 ವಿಶ್ವಕಪ್ 2024ರ ಟೂರ್ನಿಯ ಮೊದಲ ಹಂತದಲ್ಲೇ ಗೇಟ್ ಪಾಸ್ ಪಡೆದ ಪಾಕಿಸ್ತಾನ, ಟೂರ್ನಿಯ ಪೂರ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ವ್ಯಾಪಕ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿತ್ತು. ಪಾಕ್ ತಂಡದಲ್ಲಿ ಯಾವುದೂ ಸರಿಯಿಲ್ಲ ಎಂದು ದೂಷಿಸಿದ್ದ ಮಾಜಿ ಆಟಗಾರರು, ಸ್ವತಃ ತಮ್ಮದೇ ಕ್ಯಾಪ್ಟನ್ ಬಾಬರ್ ಅಜಂರ ನಾಯಕತ್ವದ ವಿರುದ್ಧವೂ ಕಿಡಿಕಾರಿದ್ದರು. ಇನ್ನು ಚಾಂಪಿಯನ್ಸ್ ಟ್ರೋಫಿ 2025ರ ಅತಿಥ್ಯ ವಹಿಸಿರುವ ಪಾಕಿಸ್ತಾನ, ಭಾರತ ತಂಡವನ್ನು ತಮ್ಮ ನೆಲಕ್ಕೆ ಕರೆಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದೆ. ಇದ್ಯಾವುದಕ್ಕೂ ಬಗ್ಗದ ಬಿಸಿಸಿಐ ಮತ್ತು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ವಿರುದ್ಧ ತೀವ್ರ ಕಿಡಿಕಾರುತ್ತಿರುವ ಪಾಕ್ ಮಾಜಿ ಆಟಗಾರರು, ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮರನ್ನು ಪ್ರಚೋದಿಸುತ್ತಿದ್ದಾರೆ.
ಇದನ್ನೂ ಓದಿ: ಜನತಾ ನ್ಯಾಯಾಲಯದಲ್ಲಿ ಜಂಗಿಕುಸ್ತಿ: ಅರಮನೆ ನಗರಿಯಲ್ಲಿ ಕೈ ಜನಾಂದೋಲನ, ಇಂದು ದೋಸ್ತಿ ಪಾದಯಾತ್ರೆ ಸಮಾರೋಪ
ಚಾಂಪಿಯನ್ಸ್ ಟ್ರೋಫಿ ಈ ಬಾರಿ ಪಾಕಿಸ್ತಾನದಲ್ಲಿ ನಡೆಯಲಿದೆ ಎಂಬ ಸುದ್ದಿ ಹೊರಬಿದ್ದ ದಿನದಿಂದಲೂ ದೊಡ್ಡ ವಿವಾದವೇ ಭುಗಿಲೆದ್ದಿದೆ. 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಸದ್ಯ ಸಿಕ್ಕಾಪಟ್ಟೆ ವಿವಾದಳಿಂದಲೇ ಸದ್ದು ಮಾಡುತ್ತಿದ್ದು, ಪಾಕ್ ಮಾಜಿ ಆಟಗಾರರ ಹೇಳಿಕೆಗೆ ಟೀಮ್ ಇಂಡಿಯಾ ಕಿಂಚಿತ್ತು ಆದ್ಯತೆ ನೀಡುತ್ತಿಲ್ಲ ಎಂಬುದೇ ಸದ್ಯ ಇಷ್ಟೆಲ್ಲಾ ಹೇಳಿಕೆಗಳಿಗೆ ಕಾರಣ. ಇದೀಗ ತೀವ್ರ ಕೆರಳಿರುವ ಪಾಕಿಸ್ತಾನದ ಮಾಜಿ ಆಟಗಾರರು, ಭಾರತ ತಮ್ಮ ನೆಲಕ್ಕೆ ಆಗಮಿಸದೆ ಹೋದರೆ ಏನು ಮಾಡೋದು? ಎಂಬ ಚಿಂತೆಯಲ್ಲಿ ಮುಳಗಿದೆ. ಕಳೆದ ಕೆಲವು ದಿನಗಳಿಂದ ಒಬ್ಬರಂತೆ ಒಬ್ಬರು ಒಂದೊಂದು ರೀತಿ ಪ್ರಚೋದನಕಾರಿ ಹೇಳಿಕೆ ಕೊಡುತ್ತಿದ್ದರು. ಈ ಸಾಲಿಗೆ ಮಾಜಿ ಪಾಕಿಸ್ತಾನ ಆಟಗಾರ ತನ್ವಿರ್ ಅಹಮ್ಮದ್ ಕೂಡ ಸೇರ್ಪಡೆಗೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಸೋತ ರೋಹಿತ್ ಶರ್ಮ ಪಡೆಯನ್ನು ಗುರಿಯಾಗಿಸಿಕೊಂಡ ತನ್ವಿರ್, ನಂಬರ್ ಒನ್ ರ್ಯಾಂಕ್ ಟೀಮ್ ಎನಿಸಿಕೊಂಡಿದ್ದ ಭಾರತ 2-0 ಅಂತರದಿಂದ ಸರಣಿ ಸೋತಿದ್ದು ಆಶ್ಚರ್ಯ. ನಮಗೆ ಸಲಹೆ ಕೊಡುವ ಮುನ್ನ ನಿಮ್ಮ ಪ್ರದರ್ಶನಗಳ ಬಗ್ಗೆ ಸರಿಯಾಗಿ ಅರಿತುಕೊಳ್ಳಿ. ಸುಖಾಸುಮ್ಮನೆ ಹೇಳೋದಲ್ಲ. ರೋಹಿತ್, ವಿರಾಟ್ ಕೊಹ್ಲಿ ಮತ್ತು ಜಸ್ಪ್ರಿತ್ ಬುಮ್ರಾ ತಂಡದಲ್ಲಿ ಇಲ್ಲ ಅಂದ್ರೆ ಖಂಡಿತ ಟೀಮ್ ಇಂಡಿಯಾ ನಮ್ಮನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ತನ್ವಿರ್ ತೀವ್ರವಾಗಿ ಭಾರತ ತಂಡವನ್ನು ಟೀಕಿಸಿದ್ದಾರೆ.
ಪ್ಯಾರಿಸ್‌ನಲ್ಲಿ ಮರುಕಳಿಸಿದ ಗತವೈಭವದ ನೆನಪು: ಹೃದಯ ಗೆದ್ದ ಹರ್ಮಾನ್‌ಪ್ರೀತ್