ಪ್ಯಾರಿಸ್‌ನಲ್ಲಿ ಮರುಕಳಿಸಿದ ಗತವೈಭವದ ನೆನಪು: ಹೃದಯ ಗೆದ್ದ ಹರ್ಮಾನ್‌ಪ್ರೀತ್

ಬೆಂಗಳೂರು: ಹಾಕಿ ಕ್ರೀಡೆಯ ಜನಕ ಎಂದೇ ಕರೆಸಿಕೊಳ್ಳುವ ಭಾರತ, ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ತಂಡ ಎಂಬ ಬಿರುದು ಹೊಂದಿದ್ದು, 52 ವರ್ಷಗಳ ಬಳಿಕ ಸತತ 2ನೇ ಒಲಿಂಪಿಕ್ಸ್ ಪದಕ ಗೆದ್ದ ಸಾಧನೆ ಮಾಡಿದೆ. 1984 ಮ್ಯೂನಿಚ್ ಗೇಮ್ಸ್‌ನಿಂದ 2020ರ ಟೋಕಿಯೋ ಒಲಿಂಪಿಕ್ಸ್‌ವರೆಗೆ 41 ವರ್ಷ ಭಾರತ ಪೋಡಿಯಂ ಏರಲು ವಿಲಗೊಂಡಿತ್ತು. ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಭಾರತ ತನ್ನ ಗತವೈಭವ ಕಳೆದುಕೊಂಡಿತು. ಆದರೆ ಟೋಕಿಯೊ ಗೇಮ್ಸ್‌ನಲ್ಲಿ ಗೆದ್ದ ಕಂಚಿನ ಭಾರತೀಯ ಹಾಕಿ ಲೋಕಕ್ಕೆ ಮತ್ತೆ ಹೊಳಪು ನೀಡಿತು. ಇದರ ಲವಾಗಿ ಪುರುಷರ ಹಾಕಿ ತಂಡ ಪ್ಯಾರಿಸ್‌ನಲ್ಲೂ ತನ್ನ ಪದಕ ಬೇಟೆ ಮುಂದುವರಿಸಿದೆ. ಈ ಸಾಧನೆಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಶ್ರೇಯ ನಾಯಕ ಹರ್ಮಾನ್‌ಪ್ರೀತ್ ಸಿಂಗ್ ಅವರಿಗೆ ಸಲ್ಲಲಿದೆ. ಲೀಗ್‌ನಿಂದ ಪ್ಲೇಆ್ವರೆಗೂ ಪ್ರತಿ ಪಂದ್ಯದಲ್ಲಿ ಭಾರತ ಪರ ಗೋಲು ಸಿಡಿಸಿದ ಪಂಜಾಬ್‌ನ ಹರ್ಮಾನ್‌ಪ್ರೀತ್ ಕೂಟದ ಗರಿಷ್ಠ ಗೋಲು ಸ್ಕೋರರ್ ಎನಿಸಿದ್ದಾರೆ.

ಪಂಜಾಬ್‌ನ ಅಮೃತಸರದ ಬಡರೈತನ ಪುತ್ರ ಹರ್ಮಾನ್‌ಪ್ರೀತ್ ಸಿಂಗ್. 2015ರಲ್ಲಿ ಅಂತಾರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದರೂ ತಂಡದಲ್ಲಿ ಕಾಯಂ ಸ್ಥಾನ ಹೊಂದಿರಲಿಲ್ಲ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಜಾಗತಿಕ ಕೂಟದಲ್ಲಿ ಕಾಣಿಸಿಕೊಂಡ ಹರ್ಮಾನ್‌ಪ್ರೀತ್, ಭಾರತ ತಂಡದ ನೀರಸ ನಿರ್ವಹಣೆಗೆ ಬಲಿಪಶು ಎನಿಸಿದರು. ಅದೇ ವರ್ಷ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೇರಿ ಇನ್ನು ಮೂರು-ನಾಲ್ಕು ಸರಣಿಯಿಂದ ಅವರನ್ನು ಕೈ ಬಿಡಲಾಯಿತು. ಜೂನಿಯರ್ ವಿಶ್ವಕಪ್‌ನಲ್ಲಿ ಅಮೋಘ ನಿರ್ವಹಣೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಲ್ಪಿಸಿತು. ನಿಧಾನವಾಗಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಡ್ರಾೃಗ್ ಫ್ಲಿಕರ್ ಹರ್ಮಾನ್‌ಪ್ರೀತ್ ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ಆಗಿ ರೂಪುಗೊಂಡರು. 2021-22ರ ಎ್ಐಎಚ್ ಪ್ರೊ ಹಾಕಿ ಲೀಗ್‌ನಲ್ಲಿ 18 ಗೋಲು ಬಾರಿಸಿದ ಹರ್ಮಾನ್‌ಪ್ರೀತ್, 2023ರಲ್ಲಿ ಭಾರತ ತಂಡದ ನಾಯಕನಾಗಿ ಆಯ್ಕೆಗೊಂಡರು. ಆದರೆ ಆರಂಭದಲ್ಲೇ ಅದೃಷ್ಟ ಕೈ ಕೊಟ್ಟಿತು. ತವರಿನಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಭಾರತ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಈ ಸೋಲು ಮುಂದೆ ಹರ್ಮಾನ್‌ಪ್ರೀತ್ ವೃತ್ತಿ ಬದುಕಿಗೆ ಹೊಸ ತಿರುವು ನೀಡಿತು

. ಹಾಂಗ್‌ರೆೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದ ಪರ 13 ಗೋಲು ಬಾರಿಸಿದ ಹರ್ಮಾನ್‌ಪ್ರೀತ್, 2023ರ ಏಷ್ಯನ್ ಚಾಂಪಿಯನ್ ಟ್ರೋಫಿಯನ್ನು ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು. 2016ರ ರಿಯೋದಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡ ಹರ್ಮಾನ್‌ಪ್ರೀತ್, 2021ರ ಟೋಕಿಯೊದಲ್ಲೂ ಭಾರತ ತಂಡದ ಭಾಗವಾಗಿದ್ದರು. ಪ್ಯಾರಿಸ್ ಕೂಟ ಹರ್ಮಾನ್‌ಪ್ರೀತ್ ಪಾಲಿಗೆ ಮೂರನೇ ಕೂಟ ಎನಿಸಿತ್ತು. ಹರ್ಮಾನ್‌ಪ್ರೀತ್ ಕ್ರೀಡಾಂಗಣದಲ್ಲಿ ತೋರುವ ಆಕ್ರಮಣಕಾರಿ ಸಂಭ್ರಮ ಟೀಮ್ ಇಂಡಿಯಾ ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ನೆನಪಿಸುತ್ತದೆ. ತಂಡದ ರಕ್ಷಣಾ ವಿಭಾಗದಲ್ಲಿ ಎದುರಾಳಿ ಓಟಕ್ಕೆ ಬ್ರೇಕ್ ಹಾಕುವ ಹರ್ಮಾನ್‌ಪ್ರೀತ್, ಪೆನಾಲ್ಟಿ ಕಾರ್ನರ್‌ನಲ್ಲಿ ಅಷ್ಟೇ ವೇಗವಾಗಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸುತ್ತಿದ್ದರು. ಹಾಲಿ ಪ್ಯಾರಿಸ್ ಕೂಟದಲ್ಲಿ ದಾಖಲಿಸಿದ 10 ವೈಯಕ್ತಿಕ ಗೋಲುಗಳ ಪೈಕಿ 7 ಪೆನಾಲ್ಟಿ ಕಾರ್ನರ್, 3 ಪೆನಾಲ್ಟಿ ಸ್ಟ್ರೋಕ್.

ಗೋಲುಗಳ ಸರದಾರ: 2023ರ ಜನವರಿಯಲ್ಲಿ ಒಡಿಶಾದ ಭುವನೇಶ್ವರದಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡ ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ ಮುಗ್ಗರಿಸಿತು. ನಾಯಕನಾಗಿದ್ದ ಹರ್ಮಾನ್‌ಪ್ರೀತ್ ಸಿಂಗ್ ಕೇವಲ 4 ಗೋಲು ದಾಖಲಿಸಿದರು. ಆದರೆ ಪ್ಯಾರಿಸ್‌ನಲ್ಲಿ ಕೂಟದ ಗರಿಷ್ಠ ಸ್ಕೋರರ್ ಎನಿಸಿದ ಹರ್ಮಾನ್‌ಪ್ರೀತ್ ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ಎಂಬುದನ್ನು ಮತ್ತೆ ಸಾಬೀತುಪಡಿಸಿದರು. ಜತೆಗೆ ಒಲಿಂಪಿಕ್ಸ್‌ನಲ್ಲಿ ಗರಿಷ್ಠ ಗೋಲು ದಾಖಲಿಸಿದ 2ನೇ ಭಾರತೀಯ ಎನಿಸಿದರು. ಹಾಲಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ದೊರೆತ 53 ಪೆನಾಲ್ಟಿ ಕಾರ್ನರ್‌ನಲ್ಲಿ 41 ಅವಕಾಶಗಳನ್ನು ಹರ್ಮಾನ್‌ಪ್ರೀತ್ ಪಡೆದರು. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಐರ್ಲೆಂಡ್ ಎದುರು ತಲಾ ಎರಡು ಗೋಲು ಸಿಡಿಸಿದ ಹರ್ಮಾನ್‌ಪ್ರೀತ್, ಅರ್ಜೆಂಟೀನಾ, ಗ್ರೇಟ್ ಬ್ರಿಟನ್, ಜರ್ಮನಿ ಹಾಗೂ ಸ್ಪೇನ್ ಎದುರು ತಲಾ ಒಂದು ಗೋಲು ಸಿಡಿಸಿದರು. ಪಂಜಾಬ್‌ನ ಸರ್‌ಪಂಚ್ ಎಂದೇ ಕರೆಯಿಸಿಕೊಳ್ಳುವ ಹರ್ಮಾನ್‌ಪ್ರೀತ್ ೈನಲ್‌ನಲ್ಲಿ 3 ನಿಮಿಷಗಳಲ್ಲಿ ದೊರೆತ 2 ಪೆನಾಲ್ಟಿ ಕಾರ್ನರ್ ಅನ್ನು ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿ ಗೆಲುವಿನ ಹೀರೋ ಆಗಿ ಮಿಂಚಿದರು. ಪಂದ್ಯದ ಬಳಿಕ ಗೆಲುವಿನ ಶ್ರೇಯಸ್ಸು ಶ್ರೀಜೇಶ್ ಅವರಿಗೆ ನೀಡಿ ಮೈದಾನದಲ್ಲಿ ಹೊತ್ತು ಸಾಗಿದ ರೀತಿ ನಿಜವಾದ ನಾಯಕ ಎಂಬುದನ್ನು ಸಾಬೀತುಪಡಿಸಿತು.

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…