More

    IPL 2023 | ಡಿಸ್ನಿ ಸ್ಟಾರ್ ಮೂಲಕ 471 ಮಿಲಿಯನ್ ಜನರಿಂದ ಐಪಿಎಲ್ ವೀಕ್ಷಣೆ

    ನವದೆಹಲಿ: ಐಪಿಎಲ್ ಸೀಸನ್ 16ರ 57 ಲೀಗ್ ಪಂದ್ಯಗಳನ್ನು 471.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಡಿಸ್ನಿ ಸ್ಟಾರ್ ದೃಢಪಡಿಸಿದೆ. ಟೂರ್ನಿಯ 6ನೇ ಸುತ್ತಿನ ಪಂದ್ಯಗಳ ಸಮಯದಲ್ಲಿ 20.5 ಮಿಲಿಯನ್ ಹೊಸ ವೀಕ್ಷಕರು ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದ್ದಾರೆ ಎಂದು ಲೀನಿಯರ್ ಟಿವಿ ಬ್ರಾಡ್‌ಕಾಸ್ಟರ್ ಬಹಿರಂಗಪಡಿಸಿದೆ. ಇದನ್ನು ‘ರೈವಲ್ರಿ ವೀಕ್’ ಎಂದು ಕರೆಯಲಾಗುತ್ತದೆ.

    ವಾರಾಂತ್ಯದಲ್ಲಿ ವೀಕ್ಷಣೆಯನ್ನು ತಿಳಿದುಕೊಳ್ಳಲು ಡಿಸ್ನಿ ಸ್ಟಾರ್ ಮುಂದಾಗಿದ್ದು, ಇದಕ್ಕಾಗಿ ಉತ್ತರ ಮತ್ತು ದಕ್ಷಿಣದ ತಂಡಗಳನ್ನಾಗಿ ವರ್ಗೀಕರಿಸಿ ಮ್ಯಾಚ್​​ಅಪ್​ಗಳನ್ನು ಮಾಡಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರೋಗ್ರಾಮಿಂಗ್ ನೆಟ್​​ವರ್ಕ್ ಅಭಿವೃದ್ಧಿ ಪಡಿಸಿದೆ. ಜತೆಗೆ ಮೆಟಾ ಸಂಸ್ಥೆಯಿಂದ ಕಂಟೆಂಟ್ ರಚನೆಕಾರರನ್ನು ಡಿಸ್ನಿ ಸ್ಟಾರ್ ನೇಮಿಸಿ, ವೀಕ್ಷಕರು ಹೆಚ್ಚು ಸಮಯ ಸೆಳೆಯುವಂತೆ ಮಾಡಿದೆ.

    ಇದನ್ನೂ ಓದಿ: IPL 2023 | ದಾಖಲೆ ಬರೆದ ಸ್ಟಾರ್ ಸ್ಪೋರ್ಟ್ಸ್; ಅತಿ ಹೆಚ್ಚು ವೀಕ್ಷಣೆ ಪಡೆದ ಟಾಪ್-10 ಪಂದ್ಯಗಳ ಪಟ್ಟಿ ಇಂತಿದೆ…

    ಹೆಚ್ಚು ವೀಕ್ಷಣೆ ಪಡೆದ ಆರ್​ಸಿಬಿ-ಮುಂಬೈ ನಡುವಣ ಪಂದ್ಯ

    ಏಳು ವಾರಗಳ ಕಾಲ ಬಹುತೇಕ ಪಂದ್ಯಗಳು ಏಕಕಾಲಿಕವಾಗಿ 30 ಮಿಲಿಯನ್‌ನ ಗರಿಷ್ಠ ವೀಕ್ಷಕರನ್ನು ದಾಟಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆದ್ದುಕೊಂಡಿತು. ಈ ಪಂದ್ಯದ ಅಂತಿಮ ಘಟ್ಟವನ್ನು ಬರೋಬ್ಬರಿ 4 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಐಪಿಎಲ್ ಋತುವಿನ ಮೊದಲ 57 ಪಂದ್ಯಗಳಲ್ಲಿ 36 ಪಂದ್ಯಗಳನ್ನು ಗರಿಷ್ಠ 3 ಕೋಟಿ ವೀಕ್ಷಕರನ್ನು ಪಡೆದುಕೊಂಡಿದೆ. ಕಳೆದ ವರ್ಷದ ಆವೃತ್ತಿಗೆ ಹೋಲಿಸಿದರೆ ಡಿಸ್ನಿ ಸ್ಟಾರ್​ನ ಈ ಸೀಸನ್​ನ 6ನೇ ವಾರದ ರೇಟಿಂಗ್‌ಗಳಲ್ಲಿ ವರ್ಷದಿಂದ ವರ್ಷಕ್ಕೆ (YoY) 44 ಶೇ.ಕ್ಕೂ ಹೆಚ್ಚಿನ ಬೆಳವಣಿಗೆ ಕಂಡಿದೆ.

    ಸದ್ಯ ಟೂರ್ನಿಯಲ್ಲಿ ಪ್ಲೇ-ಆಫ್ ಸುತ್ತಿಗೇರಲು ಐದು ತಂಡಗಳ ನಡುವೆ ಪೈಪೋಟಿ ನಡೆಯುತ್ತಿರುವ ಹೊತ್ತಿನಲ್ಲಿ, ಇದೀಗ ಸ್ಟಾರ್ ನೆಟ್‌ವರ್ಕ್ ‘ರೇಸ್ ಟು ದಿ ಪ್ಲೇ-ಆಫ್ಸ್’ ವಿಷಯದಲ್ಲಿ ಸರಣಿಯನ್ನು ಆಯೋಜಿಸಲು ತಯಾರಿ ನಡೆಸುತ್ತಿದೆ. IPLನ ಡಿಜಿಟಲ್ ಹಕ್ಕುಗಳ ಪಾಲುದಾರ Viacom18, ಈ ಋತುವಿನ ಮೊದಲ ಐದು ವಾರಗಳಲ್ಲಿ JioCinema ಉಚಿತ ಸ್ಟ್ರೀಮ್‌ಗಳಲ್ಲಿ 13 ಶತಕೋಟಿಗೂ ಹೆಚ್ಚು ವೀಕ್ಷಣೆ ಗಳಿಸಿದೆ ಎಂದು ಬಹಿರಂಗಪಡಿಸಿದ ದಿನಗಳ ನಂತರ ಡಿಸ್ನಿ ಸ್ಟಾರ್​ನ ಅಂಕಿ-ಅಂಶಗಳು ಹೊರಬಿದ್ದಿವೆ.

    ಇದನ್ನೂ ಓದಿ: IPL 2023 | ಸಾರ್ವಕಾಲಿಕ ದಾಖಲೆ ಬರೆದ ಸ್ಟಾರ್ ಸ್ಪೋರ್ಟ್; 41.1 ಕೋಟಿ ಜನ ವೀಕ್ಷಕರು, 31600 ಕೋಟಿ ನಿಮಿಷ ವೀಕ್ಷಣೆ

    10 ಸೆಕೆಂಡಿನ ಜಾಹೀರಾತಿಗೆ 24 ಲಕ್ಷ ರೂ.!

    ಈ ಋತುವಿನ ದಾಖಲೆಯ ವೀಕ್ಷಕರ ಸಂಖ್ಯೆಯು ಸ್ಪರ್ಧೆ ದೇಶೀಯ ಟಿವಿ ಪ್ರಸಾರ ಹಕ್ಕುಗಳಿಂದ ಬರೋಬ್ಬರಿ 23,575 ಕೋಟಿ (US$3.02 ಶತಕೋಟಿ) ಆದಾಯ ಗಳಿಸಲು ಸಾಧ್ಯವಾಗಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಆಯ್ದ ಕೆಲವು ಪಂದ್ಯಗಳನ್ನು ಫ್ರೀ-ಟು-ಏರ್ (ಎಫ್‌ಟಿಎ) ಪ್ರಸಾರಗೊಳಿಸಲು ನಿರ್ಧರಿಸಿದೆ. ಈ ಮೂಲಕ ವೀಕ್ಷಕರನ್ನು ಮತ್ತಷ್ಟು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.

    ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಂದ ಸ್ಟಾರ್​ ನೆಟ್​​ವರ್ಕ್​​ನ ಜಾಹೀರಾತಿನ ಆದಾಯಕ್ಕೆ ಸಹಕಾರಿಯಾಬಹುದು. ಅದರಲ್ಲೂ ಮುಂದಿನ ದಿನಗಳಲ್ಲಿ ನಡೆಯಲಿರುವ ಪ್ಲೇ-ಆಫ್ ಪಂದ್ಯಗಳ ಸಂದರ್ಭದಲ್ಲಿ 10 ಸೆಕೆಂಡಿನ ಜಾಹೀರಾತಿಗೆ 24 ಲಕ್ಷ ರೂ. ನೀಡಬೇಕಾಗಬಹುದು ಎಂದು Exchange4Media ವರದಿ ಮಾಡಿದೆ. ಮುಂಬರುವ ಪಂದ್ಯಗಳ ಮುಕ್ತಾಯದ ಹಂತದ ವೇಳೆಗೆ ವೀಕ್ಷಕರ ಸಂಖ್ಯೆಯು ಇನ್ನಷ್ಟು ಏರಿಕೆ ಹೊಂದಬಹುದು ಎಂದು ಸ್ಟಾರ್ ಸ್ಪೋರ್ಟ್ಸ್ ಅಂದಾಜಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts