More

    IPL 2023 | ದಾಖಲೆ ಬರೆದ ಸ್ಟಾರ್ ಸ್ಪೋರ್ಟ್ಸ್; ಅತಿ ಹೆಚ್ಚು ವೀಕ್ಷಣೆ ಪಡೆದ ಟಾಪ್-10 ಪಂದ್ಯಗಳ ಪಟ್ಟಿ ಇಂತಿದೆ…

    ನವದೆಹಲಿ: 16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೊದಲಾರ್ಧ ಮುಗಿದಿದ್ದು, ದ್ವಿತೀಯಾರ್ಧದ ಪಂದ್ಯಗಳು ನಡೆಯುತ್ತಿವೆ. ದಿನದಿಂದ ದಿನಕ್ಕೆ ಐಪಿಎಲ್​ ಪಂದ್ಯಗಳ ರೋಚಕತೆ ಹೆಚ್ಚುತ್ತಿವೆ. ಪಂದ್ಯ ವೀಕ್ಷಿಸುತ್ತಿರುವ ಕ್ರಿಕೆಟ್ ಪ್ರಿಯರ ಸಂಖ್ಯೆಯೂ ಹೆಚ್ಚುತ್ತಿವೆ. ಇದೀಗ ಐಪಿಎಲ್ ಪ್ರಸಾರದ ಟಿವಿ ಹಕ್ಕು ಹೊಂದಿರುವ ಸ್ಟಾರ್​ ಸ್ಫೋರ್ಟ್ಸ್ ಅಂಕಿ-ಅಂಶಗಳನ್ನು ಪ್ರಕಟಿಸಿದೆ.

    ಮೊದಲ ಹಂತದ 38 ಪಂದ್ಯಗಳಲ್ಲಿ 26 ಪಂದ್ಯಗಳನ್ನು 3 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಹೆಚ್ಚಿನ ಕ್ರಿಕೆಟ್ ಪ್ರಿಯರನ್ನು ತನ್ನತ್ತ ಸೆಳೆದುಕೊಂಡಿದೆ. ಅದರಲ್ಲೂ ಪ್ರತಿ ಪಂದ್ಯಗಳ ಕೊನೆಯ ಓವರ್​ಗಳನ್ನು ಹೆಚ್ಚಿನ ಜನರು ಸ್ಟಾರ್ ಸ್ಪೋರ್ಟ್ಸ್ ಮೂಲಕ ವೀಕ್ಷಿಸುತ್ತಿದ್ದಾರೆ. ಅತೀ ಹೆಚ್ಚು ವೀಕ್ಷಣೆ ಪಡೆದುಕೊಂಡ ಟಾಪ್-10 ಪಂದ್ಯಗಳ ಅಂಕಿಅಂಶಗಳು ಇಂತಿವೆ.

    ಇದನ್ನೂ ಓದಿ: 5 ಆಟಗಾರರ ತಂಡ ಆರ್​ಸಿಬಿ!

    ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್

    ಐಪಿಎಲ್ 16ನೇ ಆವೃತ್ತಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಮೂಲಕ ಆರಂಭಗೊಂಡಿತು. ಇದೀಗ ಈ ಪಂದ್ಯವನ್ನು ಬರೋಬ್ಬರಿ 5.6 ಕೋಟಿ ಜನರು ವೀಕ್ಷಿಸಿದ್ದಾರೆ ಎಂದು ಸ್ಟಾರ್ ಸ್ಫೋರ್ಟ್ಸ್ ಹೇಳಿಕೊಂಡಿದೆ. ಇದು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ವೀಕ್ಷಣೆ ಪಡೆದ ಪಂದ್ಯವಾಗಿದೆ.

    ಸಿಎಸ್​ಕೆ vs ಆರ್​ಸಿಬಿ

    ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವಿನ ಪಂದ್ಯವನ್ನು 5.2 ಕೋಟಿ ಜನರು ವೀಕ್ಷಿಸಿದ್ದಾರೆ. ಪ್ರತಿ ಬಾರಿ ಐಪಿಎಲ್​ನಲ್ಲಿ ಸಿಎಸ್​ಕೆ ಹಾಗೂ ಆರ್​ಸಿಬಿ ನಡುವಣ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ. ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಈ ಎರಡು ತಂಡಗಳು ಹೊಂದಿವೆ. ಹೀಗಾಗಿ ಯಾವ ತಂಡ ಗೆಲ್ಲುತ್ತದೆ ಎಂಬ ನೀರಿಕ್ಷೆಯೂ ಹೆಚ್ಚಿರುತ್ತದೆ.

    ಇದನ್ನೂ ಓದಿ: ಎರಡು ಬಾರಿ ಕ್ಷಮೆ ಕೇಳಿದ್ದೇನೆ ಎಂದ ಆರ್​ಸಿಬಿ ತಂಡದ ಸ್ಟಾರ್ ವೇಗಿ!

    ಸಿಎಸ್​​ಕೆ vs ಕೆಕೆಆರ್

    ಅತೀ ಹೆಚ್ಚು ವೀಕ್ಷಣೆ ಪಡೆದ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತಾ ನೈಟ್ ರೈಡರ್ಸ್​ ನಡುವಿನ ಸೀಸನ್​ನ 33ನೇ ಪಂದ್ಯವನ್ನು 5.1 ಕೋಟಿ ಜನರು ಸ್ಟಾರ್​​ ಸ್ಪೋರ್ಟ್ಸ್ ಮೂಲಕ ವೀಕ್ಷಿಸಿದ್ದಾರೆ.

    ಅಂತೆಯೇ ಈ ಬಾರಿಯ ಐಪಿಎಲ್​ನ 6ನೇ ಪಂದ್ಯ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಲಖ್ನೋ ಸೂಪರ್ ಜೈಂಟ್ಸ್​ ನಡುವೆ ನಡೆದಿತ್ತು. ಈ ಪಂದ್ಯವನ್ನು 5 ಕೋಟಿ ಜನರು ಸ್ಟಾರ್ ಸ್ಪೋರ್ಟ್ಸ್ ಮುಖಾಂತರ ವೀಕ್ಷಣೆ ನಡೆಸಿದ್ದಾರೆ. ಕ್ರಮವಾಗಿ ಆರ್​ಸಿಬಿ ಮತ್ತು ಮುಂಬೈ ನಡುವಣ ಐಪಿಎಲ್​ನ 5ನೇ ಪಂದ್ಯವನ್ನು 4.6 ಕೋಟಿ ಜನರು ವೀಕ್ಷಿಸಿದ್ದಾರೆ.

    4 ಕೋಟಿಗೂ ಅಧಿಕ ಜನರಿಂದ ವೀಕ್ಷಣೆ

    ಈ ಬಾರಿಯ ಟೂರ್ನಿಯಲ್ಲಿ 12ನೇ ಪಂದ್ಯ ಸಿಎಸ್​ಕೆ ಹಾಗೂ ಮುಂಬೈ ತಂಡಗಳ ನಡುವೆ ನಡೆದಿತ್ತು. ಬಲಿಷ್ಠ ಎರಡು ತಂಡಗಳ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಮುಖಾಂತರ 4.5 ಕೋಟಿ ಜನರು ಕಣ್ತುಂಬಿಕೊಂಡಿದ್ದಾರೆ. ಅಂತೆಯೇ ಸೀಸನ್​ನ 9ನೇ ಪಂದ್ಯ ಕೆಕೆಆರ್ ಹಾಗೂ ಆರ್​ಸಿಬಿ ನಡುವೆ ನಡೆದಿದ್ದು, ಈ ಪಂದ್ಯವನ್ನು 4.5 ಕೋಟಿ ಜನರು ನೋಡಿದ್ದಾರೆ.

    ಇದನ್ನೂ ಓದಿ: ಅನ್‌ಫಾಲೋ ಮಾಡಿದ ಕೊಹ್ಲಿ! ಮುಂದುವರಿದ ಗಂಗೂಲಿ ಜತೆಗಿನ ಮುನಿಸು

    ಸೀಸನ್​ 16ರ 14ನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ಸನ್​ ರೈಸರ್ಸ್ ಹೈದರಾಬಾದ್ ನಡುವೆ ನಡೆದಿದ್ದು, 4.3 ಕೋಟಿ ಜನರು ಸ್ಟಾರ್ ಸ್ಪೋರ್ಟ್ಸ್ ಮೂಲಕ ಕಣ್ತುಂಬಿಕೊಂಡಿದ್ದಾರೆ. ಅಂತೆಯೇ ಆರ್​ಸಿಬಿ ಹಾಗೂ ಕೆಕೆಆರ್ ನಡುವಿನ ಟೂರ್ನಿಯ 36ನೇ ಪಂದ್ಯ 4.1 ಕೋಟಿ ಜನರಿಂದ ವೀಕ್ಷಣೆ ಪಡೆದುಕೊಂಡಿದೆ. ಜತೆಗೆ ಸೀಸನ್​ನ 15 ಪಂದ್ಯ ಆರ್​ಸಿಬಿ ಹಾಗೂ ಎಲ್​ಎಸ್​ಜಿ ನಡುವೆ ನಡೆದಿದ್ದು, ಸ್ಟಾರ್ ಸ್ಪೋರ್ಟ್ಸ್ ಮೂಲಕ 4 ಕೋಟಿ ಜನರು ವೀಕ್ಷಣೆ ನಡೆಸಿದ್ದಾರೆ.

    IPL 2023 | ದಾಖಲೆ ಬರೆದ ಸ್ಟಾರ್ ಸ್ಪೋರ್ಟ್ಸ್; ಅತಿ ಹೆಚ್ಚು ವೀಕ್ಷಣೆ ಪಡೆದ ಟಾಪ್-10 ಪಂದ್ಯಗಳ ಪಟ್ಟಿ ಇಂತಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts