More

    5 ಆಟಗಾರರ ತಂಡ ಆರ್​ಸಿಬಿ!

    ಬೆಂಗಳೂರು: ಆರ್​ಸಿಬಿ ತಂಡವೆಂದರೆ ಈ ಬಾರಿ ಕೇವಲ 5 ಆಟಗಾರರ ತಂಡದಂತಿದೆ! ಬ್ಯಾಟಿಂಗ್​ನಲ್ಲಿ ಫಾಫ್ ಡು ಪ್ಲೆಸಿಸ್​ (406 ರನ್​), ವಿರಾಟ್​ ಕೊಹ್ಲಿ (279), ಗ್ಲೆನ್​ ಮ್ಯಾಕ್ಸ್​ವೆಲ್​ (253), ಬೌಲಿಂಗ್​ನಲ್ಲಿ ಮೊಹಮದ್​ ಸಿರಾಜ್​ (13 ವಿಕೆಟ್​), ಹರ್ಷಲ್​ ಪಟೇಲ್​ (10) ಬಿಟ್ಟರೆ ಬೇರೆ ಯಾರನ್ನೂ ನೆಚ್ಚಿಕೊಳ್ಳುವಂತಿಲ್ಲ.

    ಕಳೆದ ಆವೃತ್ತಿಯಲ್ಲಿ ಫಿನಿಷರ್​ ಆಗಿ ಮಿಂಚಿದ್ದ ದಿನೇಶ್​ ಕಾರ್ತಿಕ್​ ಈ ಬಾರಿ 7 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 66 ರನ್​. ಶಾಬಾಜ್​ ಅಹ್ಮದ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಉಪಯುಕ್ತರೆನಿಸಿಲ್ಲ. ಮಹಿಪಾಲ್​ ಲೊಮ್ರೊರ್, ಸುಯಶ್​ ಪ್ರಭುದೇಸಾಯಿ ಗೆಲುವಿಗೆ ನೆರವಾಗುತ್ತಿಲ್ಲ. ಕನ್ನಡಿಗ ವೈಶಾಕ್​ ವಿಜಯ್​ಕುಮಾರ್​ ಯಶಸ್ವಿ ಪದಾರ್ಪಣೆಯ ಬಳಿಕ ದುಬಾರಿ ಆಗಿದ್ದಾರೆ. ಹೀಗಾಗಿ ಪ್ರಮುಖ ಐವರು ಆಟಗಾರರಿಗೆ ಇತರರಿಂದ ಸೂಕ್ತ ಬೆಂಬಲ ಲಭಿಸಿದರಷ್ಟೇ ಬಲಿಷ್ಠ ನಿರ್ವಹಣೆ ಸಾಧ್ಯವೆನಿಸಿದೆ.

    ಇದನ್ನೂ ಓದಿ: ಕೊಹ್ಲಿಯನ್ನು ಹಿಂದಿಕ್ಕಿದ ರಾಹುಲ್; ವೇಗವಾಗಿ 7 ಸಾವಿರ ರನ್ ಕಂಪ್ಲೀಟ್

    ಹ್ಯಾಸಲ್​ವುಡ್​ ಫಿಟ್​?

    ಆಸೀಸ್​ ವೇಗಿ ಜೋಶ್​ ಹ್ಯಾಸಲ್​ವುಡ್​ ಗಾಯದಿಂದ ಬಹುತೇಕ ಚೇತರಿಸಿಕೊಂಡಿದ್ದು, ಶೇ. 100 ಫಿಟ್​ ಆಗಿದ್ದಾರೆ ಎನ್ನಲಾಗಿದೆ. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಹ್ಯಾಸಲ್​ವುಡ್​ ಕಣಕ್ಕಿಳಿದರೆ ಆರ್​ಸಿಬಿ ಬೌಲಿಂಗ್​ ವಿಭಾಗಕ್ಕೆ ಹೆಚ್ಚಿನ ಬಲ ಸಿಗಲಿದೆ. ಹ್ಯಾಸಲ್​ವುಡ್​ ಕಳೆದ ಆವೃತ್ತಿಯಲ್ಲಿ ಆಡಿದ್ದ 12 ಪಂದ್ಯಗಳಲ್ಲಿ 20 ವಿಕೆಟ್​ ಕಬಳಿಸಿ ಆರ್​ಸಿಬಿ ಪ್ಲೇಆಫ್​​ ತಲುಪಲು ನೆರವಾಗಿದ್ದರು.

    ಆರ್​​ಸಿಬಿಗೆ ಇಂಪ್ಯಾಕ್ಟ್​ ಲಾಭ

    ಕಾಯಂ ನಾಯಕ ಫಾಫ್ ಡು ಪ್ಲೆಸಿಸ್ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ನಡುವೆಯೂ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅನುಕೂಲದಿಂದಾಗಿ ಅವರು ಕನಿಷ್ಟ ಬ್ಯಾಟಿಂಗ್ ಮಾಡುವಂತಾಗಿದೆ. ಇಲ್ಲದಿದ್ದರೆ ಆರ್​ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಹೊಡೆತ ಬೀಳುತ್ತಿತ್ತು. 400 ಪ್ಲಸ್ ರನ್ ಸಿಡಿಸಿ ಆರೆಂಜ್ ಕ್ಯಾಪ್ ಕೂಡ ಹೊಂದಿರುವ ಪ್ಲೆಸಿಸ್, ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಬ್ಯಾಟಿಂಗ್ ಮಾತ್ರ ಮಾಡಲಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts