More

    ಆರ್​ಸಿಬಿಗೆ ಈ ರೀತಿ ಮೋಸ ಮಾಡ್ತೀರಾ? ಮಾಕ್ಸಿ ದ್ರೋಹ ಬಯಲು, ಆಕ್ರೋಶ ಹೊರಹಾಕಿದ ಅಭಿಮಾನಿಗಳು​

    ಬೆಂಗಳೂರು: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡ ತನ್ನ ಕಳಪೆ ಪ್ರದರ್ಶನಕ್ಕಾಗಿ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಈ ಸೀಸನ್​ನ ಎರಡನೇ ಪಂದ್ಯದಲ್ಲಿ ಮಾತ್ರ ಆರ್‌ಸಿಬಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ನಂತರ, ಆರ್​ಸಿಬಿ ಪಂಜಾಬ್ ವಿರುದ್ಧ ಗೆದ್ದಿತು. ಆ ಬಳಿಕ ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಆರ್‌ಸಿಬಿ ಇದುವರೆಗೆ 7 ಪಂದ್ಯಗಳನ್ನು ಆಡಿದ್ದು, ಒಂದು ಗೆಲುವು ಮತ್ತು ಆರು ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಈ ಬಾರಿಯೂ ಆರ್​ಸಿಬಿ ಟ್ರೋಫಿ ಗೆಲುವಿನ ಭರವಸೆಯನ್ನು ಅಭಿಮಾನಿಗಳು ಕಳೆದುಕೊಂಡಿದ್ದಾರೆ.

    ನಿರಂತರ ಸೋಲುಗಳಿಂದಾಗಿ ಎಸ್​ಆರ್​ಎಚ್​ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮೊಹಮ್ಮದ್ ಸಿರಾಜ್​ರಂತಹ ಸ್ಟಾರ್ ಆಟಗಾರರನ್ನು ಕೈ ಬಿಟ್ಟು ಬೇರೆ ಆಟಗಾರರಿಗೆ ಅವಕಾಶ ನೀಡಿದರು ಆರ್​ಸಿಬಿಯ ಜಾತಕದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಬದಲಾಗಿ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಸ್ಕೋರ್​ ಅನ್ನು ಆರ್​ಸಿಬಿ, ಎಸ್​ಆರ್​ಎಚ್​ಗೆ ಬಿಟ್ಟುಕೊಟ್ಟಿತು.

    ಎಸ್​ಆರ್​ಎಚ್ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಕೈಬಿಡಲಾಗಿತ್ತು. ಉತ್ತಮ ಫಾರ್ಮ್​ನಲ್ಲಿ ಇಲ್ಲದ ಕಾರಣ ಸ್ವತಃ ಮ್ಯಾಕ್ಸ್​ವೆಲ್​ ಕೇಳಿಕೊಂಡಿದ್ದರಿಂದ ಕೈಬಿಡಲಾಗಿತ್ತು ಎಂದು ಸುದ್ದಿಯಾಗಿತ್ತು. ಮ್ಯಾಕ್ಸ್​ವೆಲ್ ತಂಡಕ್ಕಾಗಿ ಯೋಚಿಸಿ ತಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಮತ್ತು ಆರ್​ಸಿಬಿ ಅಭಿಮಾನಿಗಳು ಪ್ರಶಂಸೆಯ ಸುರಿಮಳೆಗೈದಿದ್ದರು. ಆದರೆ, ಮ್ಯಾಕ್ಸ್​ವೆಲ್ ಗೈರುಹಾಜರಿಯ ಹಿಂದೆ ಬೇರೆಯೇ ಕಾರಣವಿದೆ ಎಂಬ ವರದಿಗಳಿವೆ.

    ಜೂನ್​ 1ರಿಂದ ಟಿ20 ವಿಶ್ವಕಪ್​ ಆರಂಭವಾಗಲಿದೆ. ಆಡಿದರೂ, ಆಡದೇ ಸುಮ್ಮನಿದ್ದರೂ ಹೇಗೋ ಹಣ ಬಂದೇ ಬರುತ್ತದೆ. ಬೆಂಚ್​ ಕಾಯುವ ನೆಪದಲ್ಲಿ ವಿಶ್ರಾಂತಿ ತೆಗೆದುಕೊಂಡು ವಿಶ್ವಕಪ್​ಗೆ ಮ್ಯಾಕ್ಸ್​ವೆಲ್​ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಮಾನಸಿಕ ಹಾಗೂ ದೈಹಿಕ ವಿಶ್ರಾಂತಿಗಾಗಿ ಮ್ಯಾಕ್ಸ್​ವೆಲ್​ ಮನವಿ ಮಾಡಿದ್ದಾರೆಂದು ತಿಳಿದುಬಂದಿ. ಇದನ್ನು ತಿಳಿದ ಆರ್‌ಸಿಬಿ ಅಭಿಮಾನಿಗಳು ಮ್ಯಾಕ್ಸ್‌ವೆಲ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಆರ್​ಸಿಬಿ ಗೆಲ್ಲುತ್ತೆ ಅಂತ ನಂಬಿದ್ರೆ ಈ ರೀತಿ ಮೋಸ ಮಾಡ್ತೀರಾ ಅಂತ ಅಭಿಮಾನಿಗಳು ಸಿಟ್ಟಾಗಿದ್ದಾರೆ. (ಏಜೆನ್ಸೀಸ್​)

    ಯಾವಾಗ ವರ್ಜಿನಿಟಿ ಕಳೆದುಕೊಂಡೆ? ಮಲೈಕಾ ಕೇಳಿದ ಪ್ರಶ್ನೆಗೆ ಪುತ್ರ ಅರ್ಹಾನ್​ ಕೊಟ್ಟ ಉತ್ತರ ವೈರಲ್​

    ಮದುವೆ ಆದಾಗಲೇ ಆ ಕೆಟ್ಟ ಅನುಭವ ಎದುರಿಸಿದ್ದೆ! ನಟಿ ಕಸ್ತೂರಿ ಶಂಕರ್​ ಓಪನ್​ ಟಾಕ್​

    ಇದನ್ನು ತಕ್ಷಣವೇ ನಿಲ್ಲಿಸಿ… ಐಪಿಎಲ್​ ತಂಡಗಳು ಮತ್ತು ಆಟಗಾರರಿಗೆ ಖಡಕ್​ ಎಚ್ಚರಿಕೆ ನೀಡಿದ ಬಿಸಿಸಿಐ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts