More

    ಚಿನ್ನಸ್ವಾಮಿ ಗ್ರೌಂಡ್​ನಲ್ಲಿ ಐಪಿಎಲ್ ನಡೆದರೆ ಕಳ್ಳರಿಗೆ ಖುಷಿಯಂತೆ! ಇದಕ್ಕೆ ಕಾರಣ ಇಲ್ಲಿದೆ…

    ಬೆಂಗಳೂರು: ಐಪಿಎಲ್ ಪಂದ್ಯಗಳು ಬಂದರೆ ಅಭಿಮಾನಿಗಳು ಎಷ್ಟು ಖುಷಿ ಆಗುತ್ತಾರೋ, ಅದಕ್ಕಿಂತ ಹೆಚ್ಚಾಗಿ ಕಳ್ಳರು ಖುಷಿಯಾಗುತ್ತಾರೆ. ಏಕೆಂದರೆ ಐಪಿಎಲ್‌ಗೆ ಬರುವಂತಹ ಕ್ರೀಡಾ ಅಭಿಮಾನಿಗಳ ಮೊಬೈಲ್, ದ್ವಿಚಕ್ರ ವಾಹನ ಮತ್ತು ಹೆಲ್ಮೆಟ್ ಖದಿಯಬಹುದೆಂದು.

    ಕ್ರಿಕೆಟ್ ನೋಡಲು ಬಂದ ವೇಳೆ ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಬಿ.ಆರ್ ರಮೇಶ್ ಅವರ ಮೊಬೈಲ್ ಕಳ್ಳತನವಾಗಿದೆ. ಮತ್ತೊಂದು ಪ್ರಕರಣದಲ್ಲಿ ದುಬಾರಿ ಬೆಲೆಯ ಕೆಟಿಎಂ ಬೈಕ್ ಅನ್ನು ಕಳ್ಳರು ಕದೊಯ್ದಿದ್ದಾರೆ. ಐಪಿಎಲ್ ಪಂದ್ಯ ವೀಕ್ಷಿಸಲು ಬರುವ ಕ್ರೀಡಾ ಅಭಿಮಾನಿಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಹಲವು ದೂರುಗಳು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿವೆ.

    ಇದನ್ನೂ ಓದಿ: ಪದಾರ್ಪಣೆ ಪಂದ್ಯದಲ್ಲೇ ವಿಶಿಷ್ಟ ದಾಖಲೆ ಬರೆದ ಅರ್ಜುನ್ ತೆಂಡೂಲ್ಕರ್‌! ಯಾವುದು ಆ ದಾಖಲೆ?

    ಐಟಿ ಅಧಿಕಾರಿ ಮೊಬೈಲ್ ಕಳವು

    ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಬಿ.ಆರ್ ರಮೇಶ್ ಅವರು ಏ.17 ರಂದು ಸಂಜೆ 7 ಗಂಟೆಯ ಸಮಯದಲ್ಲಿ ನಡೆಯುತ್ತಿದ್ದ ಚೆನ್ನೈ ಹಾಗೂ ಆರ್‌ಸಿಬಿ ತಂಡಗಳ ನಡುವಿನ ಪಂದ್ಯಾವಳಿಯನ್ನು ನೋಡಲು ಕ್ರಿಡಾಂಗಣದ ಗೇಟ್ ಸಂಖ್ಯೆ: 7 ರ ಒಳಕ್ಕೆ ಹೋಗುತ್ತಿದ್ದ ವೇಳೆ ಕಳ್ಳರು ಇವರ ಜೇಬಿನಲ್ಲಿದ್ದ ಸುಮಾರು 80 ಸಾವಿರ ಮೌಲ್ಯದ ಸ್ಯಾಮ್‌ಸಂಗ್ ಎಸ್-21 ಮೊಬೈಲ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಬಿ.ಆರ್ ರಮೇಶ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ದುಬಾರಿ ಬೆಲೆಯ ಬೈಕ್ ಕಳವು

    ಎಂ.ಬಿ.ಎ ವಿದ್ಯಾರ್ಥಿ ಹಾಗೂ ವೈಟ್‌ಫೀಲ್ಡ್ ನಿವಾಸಿಯಾಗಿರುವ ಸಂದೀಪ್ ಅವರು ಏ.2 ರಂದು ಆರ್.ಸಿ.ಬಿ ಮತ್ತು ಮುಂಬೈ ಇಂಡಿಯನ್ಸ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಸಂಜೆ 7.30 ರ ಸಮಯದಲ್ಲಿ ಸೆಂಟ್ಸ್ ಮಾರ್ಕ್ ಕ್ರಾಸ್ ರಸ್ತೆಯಲ್ಲಿರುವ ಬೌರಿಂಗ್ ಇನ್ಸ್‌ಟ್ಯೂಟ್ ಮುಂಭಾಗದ ಗೇಟ್‌ನ ಎಡಭಾಗದ ಕಾಂಪೌಂಡ್ ಬಳಿ ನಿಲ್ಲಿಸಿದ್ದ 2.40 ಲಕ್ಷ ಬೆಲೆಯ ಕೆಟಿಎಂ ಡ್ಯೂಕ್ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ಸಂದೀಪ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಇದನ್ನೂ ಓದಿ: ಅನ್‌ಫಾಲೋ ಮಾಡಿದ ಕೊಹ್ಲಿ! ಮುಂದುವರಿದ ಗಂಗೂಲಿ ಜತೆಗಿನ ಮುನಿಸು

    ಕ್ರಿಕೆಟ್ ಕಿಟ್‌ಗಳನ್ನು ಕಳ್ಳತನ

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಬಳಸುವ ಕ್ರಿಕೆಟ್ ಕಿಟ್‌ಗಳನ್ನು ಕಳ್ಳತನ ಮಾಡಿದ್ದ ಪ್ರಕರಣ ಇತ್ತೀಚೆಗೆ ನಡೆದಿತ್ತು.ಈ ಸಂಬಂಧ ಚಳ್ಳಘಟ್ಟದ ರಾಜರಾಜೇಶ್ವರಿ ಬಡಾವಣೆಯ ನಿವಾಸಿ, ವಾಹನದ ಚಾಲಕ ಚೆಲುವರಾಜು(30) ಮತ್ತು ಕೊರಿಯರ್ ಬಾಯ್, ಒಡಿಶಾ ಮೂಲದ ಸುಧಾಂಶು ಕುಮಾರ್ ನಾಯಕ್(30) ಎಂಬುವರನ್ನು ಬಂಧಿಸಿದ್ದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು 17 ಲಕ್ಷ ರೂ. ಬೆಲೆ ಬಾಳುವ ಕ್ರಿಕೆಟ್ ಕಿಟ್‌ಗಳನ್ನು ವಶಪಡಿಸಿಕೊಂಡಿದ್ದರು. ಈ ರೀತಿಯ ಹಲವು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಈ ಸಂಬಂಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts