More

    ಆರ್​ಸಿಬಿ ಪ್ಲೇ ಆಫ್​​ ಹಾದಿ ಮತ್ತಷ್ಟು ಕಠಿಣ

    ದೆಹಲಿ: ಐಪಿಎಲ್​ 16ನೇ ಆವೃತ್ತಿಯಲ್ಲಿ ಆರ್​ಸಿಬಿ ತಂಡದ ಹಾದಿ ಕಠಿಣವಾಗಿದ್ದು, ಈಗಾಗಲೇ ಒಟ್ಟು 10 ಪಂದ್ಯಗಳನ್ನು ಆಡಿದೆ. ಈ ಪೈಕಿ ಕೇವಲ 5 ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ 10 ಅಂಕಗಳನ್ನು ಗಳಿಸಿದೆ. ಪ್ಲೇಆಫ್​ ಪ್ರವೇಶಿಸ ಬೇಕಾದರೆ ಬೆಂಗಳೂರು ಉಳಿದ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ. ಹೀಗಾದರೆ ಮಾತ್ರ ಆರ್​ಸಿಬಿ ತಂಡ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳಲಿದೆ.


    ಸದ್ಯ 5 ಪಂದ್ಯಗಳನ್ನು ಗೆದ್ದು 10 ಅಂಕಗಳಿಸಿರುವ ಆರ್​ಸಿಬಿ, ಉಳಿದಿರುವ ನಾಲ್ಕು ಪಂದ್ಯಗಳನ್ನು ಗೆದ್ದರೆ ಮಾತ್ರ 18 ಅಂಕಗಳ ಮೂಲಕ ಪ್ಲೇಆಫ್​ ಪ್ರವೇಶಿಸಬಹುದಾಗಿದೆ. ನಾಲ್ಕು ಪಂದ್ಯಗಳ ಪೈಕಿ ಕೇವಲ ಒಂದೇ ಒಂದು ಪಂದ್ಯವನ್ನು ಸೋತರೂ ಸಹ ಆರ್​ಸಿಬಿಗೆ ಮುಳುವಾಗಬಹುದು. ಏಕೆಂದರೆ ಪ್ಲೇಆಫ್​ ಪ್ರವೇಶಿಸಲು ಆರ್​ಸಿಬಿ ಮತ್ತೊಂದು ತಂಡದ ಮೇಲೆ ಅವಲಂಬಿತವಾಗಬೇಕಾಗುತ್ತದೆ.

    ಇದನ್ನೂ ಓದಿ: ಪತ್ನಿಯ ನಿರೀಕ್ಷೆ, ವಾಸ್ತವವೆಂದು ಫೋಟೋ ಹಂಚಿಕೊಂಡ ನಟ ಯಶ್!


    ಅಂಕಪಟ್ಟಿಯಲ್ಲಿ ಹಲವು ತಂಡಗಳು 10 ಅಂಕಗಳನ್ನು ಹೊಂದಿದ್ದು, ಮುಂದಿನ ಎಲ್ಲ ಪಂದ್ಯಗಳು ರೋಚಕವಾಗಿರಲಿವೆ. ಈ ತಂಡಗಳ ಪೈಕಿ ಯಾರು ಪ್ಲೇಆಫ್​ ಪ್ರವೇಶಿಸಲಿದ್ದಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಜತೆಗೆ ನೆಟ್​ ರನ್​ರೇಟ್ ಕೂಡ​ ಪ್ರಮುಖ ಪಾತ್ರವನ್ನು ವಹಿಸಲಿದ್ದು, ಉತ್ತಮ ರನ್​ರೇಟ್​ ಹೊಂದಿರುವ ತಂಡ ಪ್ಲೇಆಫ್​ ಪ್ರವೇಶಿಸಲಿದೆ. ಸದ್ಯ, ಗುಜರಾತ್​ ಹಾಗೂ ಚೆನ್ನೈ ತಂಡಗಳು ಅಂಕಪಟ್ಟಿಯಲ್ಲಿ ಟಾಪ್​ ಎರಡು ಸ್ಥಾನಗಳನ್ನು ಹೊಂದಿವೆ.


    ಆರ್​ಸಿಬಿಯು ಮುಂದಿನ ನಾಲ್ಕು ಪಂದ್ಯಗಳನ್ನು ಮುಂಬೈ ಇಂಡಿಯನ್ಸ್​, ರಾಜಸ್ತಾನ್​ ರಾಯಲ್ಸ್​, ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಗುಜರಾತ್​ ಟೈಟಾನ್ಸ್​​ ವಿರುದ್ಧ ಆಡಲಿದೆ. ಈ ಪೈಕಿ ಮೊದಲ ಮೂರು ಪಂದ್ಯಗಳು ಎದುರಾಳಿಗಳ ತವರಿನಲ್ಲಿ ನಡೆಯಲಿದ್ದು, ಕೊನೆಯ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts