

ಬೆಂಗಳೂರು: ಈ ಬಾರಿಯ ಐಪಿಎಲ್ ಸೀಸನ್ನ ಆರಂಭಿಕ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲಿನಿಂದ ಲೀಗ್ನ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎರಡನೇ ಮ್ಯಾಚ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ದಾಖಲಿಸಿದ್ದು ಬಿಟ್ಟರೆ, ಉಳಿದೆಲ್ಲಾ ಪಂದ್ಯಗಳಲ್ಲಿ ಸತತವಾಗಿ ಹೀನಾಯ ಸೋಲನ್ನು ಅನುಭವಿಸಿತು. ಇದು ಆರ್ಸಿಬಿ ಈ ಲೀಗ್ನಿಂದ ಹೊರಗುಳಿಯಲು ದೊಡ್ಡ ಕಾರಣವಾಗಿ ಪರಿಣಮಿಸಿದೆ.
ಐಪಿಎಲ್ ಶುರವಾಗುವ ಮುನ್ನ ನಡೆದ ಮಹಿಳೆಯರ ಡಬ್ಲ್ಯೂಪಿಎಲ್ ಲೀಗ್ನಲ್ಲಿ ಮಹಿಳಾ ಮಣಿಗಳ ಆರ್ಸಿಬಿ ತಂಡವು ಟ್ರೋಫಿ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತು. ಆದರೆ, 16 ವರ್ಷಗಳಿಂದ ಐಪಿಎಲ್ನ ಪ್ರತಿ ಸೀಸನ್ನಲ್ಲಿ ಎಡಬಿಡದೆ ಶ್ರಮಿಸುತ್ತಿರುವ ಆರ್ಸಿಬಿಯೂ ಒಂದು ಬಾರಿಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದು ಫ್ರಾಂಚೈಸಿಯ ಅಭಿಮಾನಿಗಳಿಗೆ ಭಾರೀ ಬೇಸರ ತಂದೊಡ್ಡಿದೆ. ಮಹಿಳೆಯರೇ ಕಪ್ ಗೆದ್ದಿದ್ದಾರೆ ಎಂದರೆ ಖಂಡಿತವಾಗಿ ಈ ಸೀಸನ್ನಲ್ಲಿ ಪುರುಷರ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ಲೇ-ಆಫ್ ಪ್ರವೇಶಿಸಿ, ಕಪ್ ಗೆಲ್ತಾರೆ ಎಂದೇ ಕನಸು ಕಂಡಿದ್ದರು. ಆದರೆ ಇದೀಗ ಆ ಆಸೆಯು ಭಗ್ನಗೊಂಡಿದೆ.
ತಂಡದಲ್ಲಿ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಹೊರತುಪಡಿಸಿದರೆ, ಉಳಿದವರು ನೀಡಿದ ಕಳಪೆ ಪ್ರದರ್ಶನವೇ ತಂಡಕ್ಕೆ ಭಾರೀ ಹೊಡೆತ ನೀಡಿತು ಎಂದು ಕ್ರಿಕೆಟ್ ಅಭಿಮಾನಿಗಳು ದೂರಿದ್ದಾರೆ. ಅದರಲ್ಲೂ ಪ್ರತ್ಯೇಕವಾಗಿ ಬೌಲಿಂಗ್ ಲೈನ್ನಲ್ಲಿ ಬಲಪ್ರದರ್ಶನ ಇಲ್ಲದೆ ಇರುವುದು ತಂಡದ ಸೋಲಿಗೆ ಪ್ರಮುಖ ಕಾರಣ ಎಂದಿದ್ದಾರೆ. ಸ್ಪೋಟಕ ಬ್ಯಾಟ್ಸ್ಮನ್ಗಳಿಲ್ಲದೆ ಆರ್ಸಿಬಿ ಕಂಗಾಲಾಗಿದೆ. ಇದಕ್ಕೆಲ್ಲಾ ಮ್ಯಾನೆಜ್ಮೆಂಟ್ ಕಾರಣ ಎಂದಿರುವ ಫ್ಯಾನ್ಸ್, ಅಂದು ಇಂತಹ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ.
ಅಂದು ಆರ್ಸಿಬಿ ತಂಡವನ್ನು ಸೇರ್ಪಡೆಯಾಗಿದ್ದ ಶಿವಂ ದುಬೆ, ಶೇನ್ ವ್ಯಾಟ್ಸಾನ್, ಆಶಿಶ್ ನೇಹ್ರಾ, ಕ್ಲೇಸನ್, ಟ್ರಾವಿಸ್ ಹೆಡ್, ಯಜುವೇಂದ್ರ ಚಹಲ್ರನ್ನು ಉಳಿಸಿಕೊಳ್ಳಬೇಕಿತ್ತು. ಇವರನ್ನೆಲ್ಲಾ ಹೆಚ್ಚು ಪ್ರೋತ್ಸಾಹಿಸಿ, ಸರಿಯಾಗಿ ಉಪಯೋಗಿಸಬೇಕಿತ್ತು. ಅಂದು ಈ ಐಡಿಯಾವನ್ನು ಸರಿಯಾದ ಕ್ರಮದಲ್ಲಿ ಪ್ರಯೋಗಿಸಿದ್ದರೆ, ಇಂದು ಆರ್ಸಿಬಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.