More

    Success Story: ಅಬ್ಬಬ್ಬಾ..ಕೈಗಳಿಲ್ಲ, ಕಾಲಲ್ಲೇ ಕಾರು ಡ್ರೈವ್​ ಮಾಡ್ತಾಳೆ! ಡಿಎಲ್​ ಪಡೆದ ಏಷ್ಯಾದ ಮೊದಲಿಗಳು ಈಕೆ..!

    ತಿರುವನಂತಪುರಂ: ಉತ್ಸಾಹ ಮತ್ತು ಗುರಿ ತಲುಪುವ ಛಲವಿದ್ದರೆ ಎಂತಹ ಅಸಾಧ್ಯವಾದುದನ್ನೂ ಸಾಧಿಸಿ ತೋರಿಸಬಹುದು. ಇದಕ್ಕೆ ಜಿಲುಮೋಲ್ ಮೇರಿಯೆಟ್ ಥಾಮಸ್ ನಿದರ್ಶನವಾಗಿ ನಿಲ್ಲುತ್ತಾಳೆ. 32 ವರ್ಷದ ಈಕೆ ಎರಡೂ ಕೈಗಳಿಲ್ಲದಿದ್ದರೂ ಚಾಲನಾ ಪರವಾನಗಿ ಪಡೆದ ಮೊದಲ ಏಷ್ಯಾದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

    ಇದನ್ನೂ ಓದಿ: ಮೇನಲ್ಲಿ ಬ್ಯಾಂಕ್​ಗಳಿಗೆ ಇಷ್ಟೊಂದು ರಜಾದಿನಗಳಾ?! ಎಚ್ಚರ ಗ್ರಾಹಕರೇ ಈ ದಿನಾಂಕಗಳಲ್ಲಿ ಮುಚ್ಚಲ್ಪಡುತ್ತವೆ..

    ಜಿಲುಮೋಲ್ ಕಾರು ಚಾಲನೆಗೆ ತನ್ನ ಪಾದಗಳನ್ನು ಬಳಸುತ್ತಾಳೆ. ಎಂತಹ ಟ್ರಾಫಿಕ್​ ಇದ್ದರೂ ಅನುಭವಿಗಳು ಸಾಧಾರಣವಾಗಿ ಕೈಗಳಿಂದ ಕಾರು ಚಾಲನೆ ಮಾಡುವಂತೆಯೇ ವೇಗವಾಗಿಯೇ ಕಾರು ಚಾಲನೆ ಮಾಡುತ್ತಾಳೆ.

    ಇನ್ನು ಜಿಲುಮೋಲ್ ಗೆ ಡ್ರೈವಿಂಗ್​ ಲೈಸೆನ್ಸ್​ ಅಷ್ಟು ಸುಲಭವಾಗಿ ಸಿಕ್ಕಿದ್ದಲ್ಲ. ಆರು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಆಕೆ 2023 ರಲ್ಲಿ ಪರವಾನಗಿ ಪಡೆದಳು. ಇದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲಕ್ಕಾಡ್‌ನಲ್ಲಿ ನೀಡಿದ್ದರು. ರಾಜ್ಯ ಅಂಗವಿಕಲರ ಆಯೋಗದ ಆಸಕ್ತಿ ಮೇರೆಗೆ ಕೊಚ್ಚಿಯ ಖಾಸಗಿ ಕಂಪನಿ ಆಕೆ ಓಡಿಸಲು ಅನುಕೂಲವಾಗುವಂತೆ ಆಕೆಯ ಕಾರ್ ಅನ್ನು ಮಾರ್ಪಡಿಸಿದ್ದು, ಜಿಲುಮೋಲ್ ಕೊಂಚವೂ ಹಿಂಜರಿಕೆಯಿಲ್ಲದೆ ಕಾರ್​ ಅನ್ನು ಚಾಲನೆ ಮಾಡುತ್ತಾರೆ.

    ಕಾನೂನು ಹೋರಾಟ: ಜಿಲುಮೋಲ್ ಮೇರಿಯೆಟ್ ಥಾಮಸ್ ತನ್ನ ಹೆತ್ತವರನ್ನು ಕಳೆದುಕೊಂಡ ನಂತರ ಬೇರೆಯವರ ಮೇಲೆ ಅವಲಂಬಿತವಾಗಬಾರದೆಂದು ನಿರ್ಧರಿಸಿ ವಡುತಲದ ಮರಿಯಾ ಡ್ರೈವಿಂಗ್ ಸ್ಕೂಲ್‌ನಲ್ಲಿ ಡ್ರೈವಿಂಗ್ ಕಲಿತು, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಡುಕ್ಕಿ ಜಿಲ್ಲೆಯ ತೊಡುಪುಳ ಆರ್‌ಟಿಒ ಅವರನ್ನು ಸಂಪರ್ಕಿಸಿದಳು. ಆದರೆ ಆರ್‌ಟಿಒ ಅಧಿಕಾರಿಗಳು ಆಕೆಯ ಅರ್ಜಿಯನ್ನು ತಿರಸ್ಕರಿಸಿದರು. ನಂತರ ಆಕೆ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದಳು.

    ನ್ಯಾಯಾಲಯದ ಮಧ್ಯಪ್ರವೇಶದ ನಂತರ, ಜಿಲುಮೋಲ್ ಮೇರಿಯೆಟ್ ಥಾಮಸ್ ಕಾರು ಚಾಲನೆ ಪರೀಕ್ಷೆ ಎದುರಿಸಿದಳು. ತನ್ನ ಮಾರ್ಪಡಿಸಿದ ಕಾರನ್ನು ಸಾರಿಗೆ ಅಧಿಕಾರಿಗಳ ಮುಂದೆ ಓಡಿಸಿದರು. ಆದರೆ, ಆಕೆಗೆ ಚಾಲನಾ ಪರವಾನಗಿ ನೀಡಲು ಅಧಿಕಾರಿಗಳು ಮತ್ತೆ ನಿರಾಕರಿಸಿದರು. ಅಂತಿಮವಾಗಿ, ಆಕೆ ಅಂಗವಿಕಲ ವ್ಯಕ್ತಿಗಳ ರಾಜ್ಯ ಆಯೋಗವನ್ನು ಸಂಪರ್ಕಿಸಿದರು. ಇಂದೋರ್‌ನ ವಿಕ್ರಮ್ ಅಗ್ನಿಹೋತ್ರಿ ಅವರ ಉದಾಹರಣೆಯನ್ನು ಆಯೋಗವು ಉಲ್ಲೇಖಿಸಿತು. ಅವರು ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದ ತೋಳಿಲ್ಲದ ಮೊದಲ ವ್ಯಕ್ತಿ.

    ಇದನ್ನು ಅನುಸರಿಸಿ, ಅಂತಿಮವಾಗಿ ಈ ವರ್ಷ ಜಿಲುಮೋಲ್ ಪರವಾನಗಿ ಪಡೆಯಲು ಸಾಧ್ಯವಾಗಿದೆ. “ಚಲನಶೀಲತೆ ನನ್ನ ದೊಡ್ಡ ನ್ಯೂನತೆಯಾಗಿತ್ತು. ಈಗ ನಾನು ಪರವಾನಗಿ ಪಡೆದಿದ್ದೇನೆ ಮತ್ತು ನನ್ನ ದೊಡ್ಡ ಅಡಚಣೆಯನ್ನು ನಿವಾರಿಸಿಕೊಂಡಿದ್ದೇನೆ. ಇದು ನನಗೆ ಸಂತೋಷವಾಗಿದೆ” ಎಂದು ಜಿಲುಮೋಲ್ ಹೇಳುತ್ತಾಳೆ.

    ಯಾವುದೇ ಬೆಲೆ ತೆತ್ತಾದರೂ ಡ್ರೈವಿಂಗ್​ ಲೈಸೆನ್ಸ್ ಪಡೆಯಬೇಕು. ಎಲ್ಲಿಗಾದರೂ ಹೋಗಿಬರಬೇಕಾದರೆ ಇನ್ನೊಬ್ಬರ ಮೇಲೆ ಅವಲಂಬಿತಳಾಗಬಾರದೆಂಬ ಆಕೆಯ ಸಂಕಲ್ಪ ಎಂಥವರಿಗೂ ಸ್ಪೂರ್ತಿಯಾಗಬೇಕಿದೆ.

    ವಿಶ್ವ ದಾಖಲೆಗಾಗಿ ಈ ವ್ಯಕ್ತಿ ಐಸ್ ಬಾಕ್ಸ್‌ನೊಳಗೆ ನಿಂತಿದ್ದ.. ಶೀತ ಲೆಕ್ಕಿಸದೆ ಎಷ್ಟು ಗಂಟೆ ಒಳಗಿದ್ದ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts