More

    ಅವರೇನು ದೇವರಲ್ಲ! ಕೊಹ್ಲಿ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಟೀಮ್​ ಇಂಡಿಯಾ ಮಾಜಿ ಆಟಗಾರ

    ನವದೆಹಲಿ: ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸದ್ಯ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಮಗ ಅಕಾಯ್​ ಜನನದ ಬಳಿಕ ಕ್ರಿಕೆಟ್​ನಿಂದ ಕೊಂಚ ವಿರಾಮ ಪಡೆದುಕೊಂಡಿದ್ದ ಕೊಹ್ಲಿ, ಐಪಿಎಲ್​ನೊಂದಿಗೆ ಮತ್ತೆ ಕ್ರಿಕೆಟ್ ಅಂಗಳಕ್ಕೆ ಧುಮುಕಿದರು. ಈ ಬಾರಿಯ ಕ್ಯಾಶ್ ರಿಚ್ ಲೀಗ್​ನಲ್ಲಿ ಕೊಹ್ಲಿ ಅವರ ಬ್ಯಾಟ್ ಘರ್ಜಿಸುತ್ತಿದೆ. ಪಂದ್ಯದಿಂದ ಪಂದ್ಯಕ್ಕೆ ಹೆಚ್ಚು ರನ್ ಕಲೆಹಾಕುತ್ತಿದ್ದಾರೆ.

    ವಿರಾಟ್ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 500 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧ ಶತಕ ಹಾಗೂ ಒಂದು ಶತಕವೂ ಸೇರಿದೆ. ಆರ್‌ಸಿಬಿ ಗೆಲುವನ್ನು ಲೆಕ್ಕಿಸದೆ ಕೊಹ್ಲಿ ಬ್ಯಾಟಿಂಗ್ ವೀಕ್ಷಿಸಲು ಸಾವಿರಾರು ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುತ್ತಾರೆ. ಕೊಹ್ಲಿ ಇಷ್ಟು ಚೆನ್ನಾಗಿ ಆಡಿದರೂ ಅವರ ಮೇಲಿನ ಟೀಕೆ ಮಾತ್ರ ಇನ್ನೂ ಕಡಿಮೆಯಾಗುತ್ತಿಲ್ಲ.

    ಈ ಬಾರಿ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಹೆಚ್ಚು ಚರ್ಚೆಗೀಡಾಗಿದೆ. ಓಪನರ್ ಆಗಿ ಕ್ರೀಸ್​ಗೆ ಇಳಿಯುತ್ತಿರುವ ಕೊಹ್ಲಿ, ಕೊನೆಯವರೆಗೂ ಆಡಿ ದೊಡ್ಡಮಟ್ಟದ ಸ್ಕೋರ್ ಮಾಡಿದರೂ ಅವರ ಸ್ಟ್ರೈಕ್ ರೇಟ್ ಮಾತ್ರ ಸುಧಾರಿಸಲಿಲ್ಲ. ಅವರ ನಿಧಾನಗತಿ ಬ್ಯಾಟಿಂಗ್​ ತೀವ್ರ ಟೀಕೆಗೆ ಗುರಿಯಾಗಿದೆ. ಈ ರೀತಿ ಆಡಿದರೆ ಟಿ20 ವಿಶ್ವಕಪ್​ನಲ್ಲಿ ತಂಡಕ್ಕೆ ನಷ್ಟವಾಗಬಹುದು. ಅದರಲ್ಲೂ, ಸ್ಪಿನ್ನರ್​ಗಳನ್ನು ಎದುರಿಸುವುದು ಕಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದೀಗ ಕೊಹ್ಲಿ ಕುರಿತಾಗಿ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ನೀಡಿರುವ ಪ್ರತಿಕ್ರಿಯೆ ವೈರಲ್​ ಆಗಿದೆ.

    ವಿರಾಟ್ ಕೊಹ್ಲಿಯನ್ನು ಅನೇಕ ಜನರು ದೇವರೆಂದು ಪರಿಗಣಿಸುತ್ತಾರೆ. ದೇವರ ಎಲ್ಲವನ್ನೂ ಮಾಡಬಲ್ಲನು, ಆತನಿಗೆ ಅಸಾಧ್ಯವಾದುದು ಯಾವುದೂ ಇಲ್ಲ, ಎಲ್ಲವನ್ನೂ ಪರಿಪೂರ್ಣವಾಗಿ ಮಾಡಬಲ್ಲನು ಎಂದು ಭಾವಿಸುತ್ತಾರೆ. ಆದರೆ, ಕೊಹ್ಲಿ ನಮ್ಮ ನಿಮ್ಮಂತೆ ಸಾಮಾನ್ಯ ವ್ಯಕ್ತಿ ಎಂಬ ಸತ್ಯ ತಿಳಿದಿರಲಿ. ಆದರೆ, ಅವರೊಬ್ಬ ಅಸಾಧಾರಣ ಬ್ಯಾಟ್ಸ್‌ಮನ್. ಅವರ ಬ್ಯಾಟ್‌ನಿಂದ 80 ಶತಕಗಳು ಬಂದಿವೆ. ಸ್ಪಿನ್ನರ್‌ಗಳ ಬೌಲಿಂಗ್‌ನಲ್ಲಿ ಅವರಂತೆ ಯಾರೂ ರನ್ ಗಳಿಸಲು ಸಾಧ್ಯವಿಲ್ಲ. ಹೀಗಾಗಿ ಕೊಹ್ಲಿ ವಿಚಾರದಲ್ಲಿ ಇಷ್ಟೊಂದು ಟೀಕೆಗಳು ಸರಿಯಲ್ಲ ಎನ್ನುವ ಮೂಲಕ ಸಿಧು, ಕೊಹ್ಲಿ ಪರ ಬ್ಯಾಟ್​ ಬೀಸಿದ್ದಾರೆ. (ಏಜೆನ್ಸೀಸ್​)

    ಈ ಓವರ್​ ಆ್ಯಕ್ಷನ್ ಬೇಡ ನಮ್ಮ ನಿರೀಕ್ಷೆಯೇ ಬೇರೆ! ಮಾಕ್ಸಿಗೆ ಆರ್​ಸಿಬಿ ಅಭಿಮಾನಿಗಳಿಂದ ಕ್ಲಾಸ್​

    ಪ್ರಜ್ವಲ್​​ ರೇವಣ್ಣ ಕೇಸ್​: ಬಿಜೆಪಿ ಹೊಣೆ ಹೊರಬೇಕೆಂದು ಒತ್ತಾಯಿಸುವುದು ಹಾಸ್ಯಾಸ್ಪದ ಎಂದ ನಟ ಚೇತನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts