More

    ದಾಖಲೆಗಳು ಸರಿಯಾಗಿರುವ ಆಟೋಗಳ ಓಡಾಡಕ್ಕೆ ಅವಕಾಶ

    ಬೇಲೂರು: ಸಾರ್ವಜನಿಕರ ಹಿತದೃಷ್ಟಿ ಹಾಗೂ ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಆದೇಶ ಮತ್ತು ನಿರ್ದೇಶನದಂತೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲ ಆಟೋಗಳಿಗೂ ಇಲಾಖೆಯಿಂದ ನಂಬರ್‌ಗಳನ್ನು ಅಳವಡಿಸುತ್ತಿದ್ದೇವೆ ಎಂದು ಬೇಲೂರು ಪೊಲೀಸ್ ಠಾಣೆ ಪಿಎಸ್‌ಐ ಪ್ರವೀಣ್ ಹೇಳಿದರು.

    ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಆಟೋಗಳ ದಾಖಲೆ ಪರಿಶೀಲಿಸಿ ನಂಬರ್‌ಗಳನ್ನು ಅಳವಡಿಸಿ ಮಾತನಾಡಿದ ಅವರು, ಈಗಾಗಲೇ ಪಟ್ಟಣದಲ್ಲಿ ಅಗತ್ಯಕ್ಕಿಂತ ಮತ್ತು ಇತರ ತಾಲೂಕು ಮತ್ತು ಜಿಲ್ಲೆಯ ಪರ್ಮಿಟ್ ಇರುವ ಆಟೋಗಳನ್ನು ಅನಧಿಕೃತವಾಗಿ ತಂದು ಚಾಲಕರು ಓಡಿಸುತ್ತಿರುವ ಬಗ್ಗೆ ದೂರು ಹಾಗೂ ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಎಲ್ಲ ಆಟೋಗಳ ದಾಖಲೆಗಳನ್ನು ಪರಿಶೀಲಿಸಿ ದಾಖಲೆ ಸರಿ ಇರುವ ಆಟೋಗಳನ್ನು ಮಾತ್ರ ಪಟ್ಟಣದಲ್ಲಿ ಓಡಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.

    ಯಾವ ಆಟೋಗಳಲ್ಲಿ ದಾಖಲೆಗಳಿರುವುದಿಲ್ಲವೋ ಅಂತಹ ಆಟೋಗಳನ್ನು ನಿಲ್ಲಿಸಿ ಸರಿಪಡಿಸಿದ ನಂತರ ರಸ್ತೆಗಿಳಿಯಬೇಕು. ಇದಕ್ಕೆ 15 ದಿನಗಳ ಕಾಲಾವಕಾಶ ನೀಡಲಾಗುವುದು. ನಂತರದ ದಿನಗಳಲ್ಲಿ ಅಗತ್ಯ ದಾಖಲೆಗಳಿರದ ವಾಹನಗಳನ್ನು ವಶಕ್ಕೆ ಪಡೆದು ಕೇಸು ದಾಖಲಿಸಲಾಗುವುದು.

    ತಿಯೊಂದು ವಾಹನಗಳಲ್ಲಿ ಚಾಲಕನ ಡಿಎಲ್, ಇನ್ಷುರೆನ್ಸ್, ಪರ್ಮಿಟ್ ಸೇರಿದಂತೆ ಇತರ ದಾಖಲೆಗಳನ್ನು ಚಾಲ್ತಿಯಲ್ಲಿ ಇಟ್ಟುಕೊಂಡಿರಬೇಕು. ಚಾಲಕರು ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಿ ಚಾಲನೆಗೆ ಮುಂದಾಗಬೇಕು. ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲು ಮಾಡಬಾರದು, ಆಟೋಗಳನ್ನು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಬಾರದು, ಆಟೋ ನಿಲ್ದಾಣಗಳಲ್ಲೇ ನಿಲ್ಲಿಸಬೇಕು. ಅನಧಿಕೃತವಾಗಿ ಓಡಾಡುವ ಆಟೋಗಳು ಮತ್ತು ಇತರ ವಾಹನಗಳನ್ನು ವಶಕ್ಕೆ ಪಡೆದ ನಂತರ ದಂಡ ವಿಧಿಸಲಾಗುವುದು. ಇದಕ್ಕೆ ಅವಕಾಶವಾಗದಂತೆ ಚಾಲಕರು ಮತ್ತು ಮಾಲೀಕರು ಗಮನ ಹರಿಸಿ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದರು. ಠಾಣಾ ಸಿಬ್ಬಂದಿ ದೇವೇಂದ್ರ, ದೇವರಾಜ್, ಚೇತನ್ ಸೇರಿದಂತೆ ಆಟೋ ಚಾಲಕರು ಮತ್ತು ಮಾಲೀಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts