"ಹಾರ್ದಿಕ್ ನಾಯಕತ್ವ ಹೀಗೆ ಮುಂದುವರಿದರೆ…" ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಭವಿಷ್ಯ ನುಡಿದ ಮನೋಜ್ ತಿವಾರಿ!

WhatsApp Image 2024-04-23 at 5.43.23 PM
Published on

ಜೈಪುರ: ನಿನ್ನೆ (ಏಪ್ರಿಲ್​ 22) ಸವಾಯಿ ಮಾನ್ಸಿಂಗ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ನೀಡಿ ಹೀನಾಯವಾಗಿ ಸೋಲು ಅನುಭವಿಸಿತು. ಆರ್​ಆರ್​ ಎದುರು ಸೋಲಿಗೆ ಶರಣಾದ ಬಳಿಕ ಎಂಐ ಅಂಕಪಟ್ಟಿಯಲ್ಲಿ 7ನೇ ಸ್ಥಾನವನ್ನು ಅಲಂಕರಿಸಿದೆ. ಒಟ್ಟು ಆಡಿದ 8 ಪಂದ್ಯಗಳಲ್ಲಿ ಕೇವಲ ಮೂರು ಮ್ಯಾಚ್​​ಗಳನ್ನು ಗೆದ್ದಿರುವ ಮುಂಬೈ ಈಗ ಐದನೇ ಸೋಲನ್ನು ಕಂಡಿದೆ. ಇದು ತಂಡಕ್ಕೆ ದೊಡ್ಡ ಹೊಡೆತ ನೀಡಿದ್ದು, ಹಾರ್ದಿಕ್​ ನಾಯಕತ್ವಕ್ಕೂ ಸಹ ಕುತ್ತು ತಂದಿದೆ.

ಸತತ ಸೋಲು ನೋಡುತ್ತಿರುವ ಮುಂಬೈ ಇಂಡಿಯನ್ಸ್​ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಕ್ಯಾಪ್ಟನ್ಸಿಯೇ ಕಾರಣ ಎಂದು ಕ್ರಿಕೆಟ್ ಫ್ಯಾನ್ಸ್ ಅಭಿಪ್ರಾಯಿಸಿದರೆ, ಮತ್ತೊಂದೆಡೆ ನಿನ್ನೆಯ ಪಂದ್ಯದಲ್ಲಿಯೂ ಸಹ ಪಾಂಡ್ಯ ಪ್ರದರ್ಶನ ಹಾಗೂ ಮುಂದಾಳತ್ವದ ಬಗ್ಗೆ ಫ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದರು. ರೋಹಿತ್ ಶರ್ಮಾರಿಂದ ಕ್ಯಾಪ್ಟನ್ಸಿ ಪಡೆದ ಹಾರ್ದಿಕ್​ ತಮ್ಮ ನಾಯಕತ್ವದಲ್ಲಿ ಯಾಕೆ ತಂಡವನ್ನು ಯಶಸ್ಸಿನತ್ತ ಸಾಗಿಸುವಲ್ಲಿ ಎಡವುತ್ತಿದ್ದಾರೆ? ಇದಕ್ಕೆ ನಾಯಕತ್ವವೇ ಕಾರಣ ಎಂದು ಟೀಕಿಸಿದ್ದಾರೆ.

ಕೇವಲ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ಮಾಜಿ ಕ್ರಿಕೆಟಿಗರು ಸಹ ಹಾರ್ದಿಕ್​ ಕ್ಯಾಪ್ಟನ್ಸಿ ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪೈಕಿ ಟೀಂ ಇಂಡಿಯಾದ ಮಾಜಿ ಆಟಗಾರ ಮನೋಜ್ ತಿವಾರಿ ಮುಂಬೈ ಕ್ಯಾಪ್ಟನ್​ ಪಾಂಡ್ಯ ಬಗ್ಗೆ ಭವಿಷ್ಯ ನುಡಿದಿದ್ದು, "ಇದೇ ರೀತಿಯಲ್ಲಿ ಹಾರ್ದಿಕ್ ನಾಯಕತ್ವ ಮುಂದುವರಿದರೆ, ಎಂಐ ಖಂಡಿತವಾಗಿ ಪ್ಲೇ-ಆಫ್​ ತಲುಪುವುದಿಲ್ಲ. ಈ ಹಿಂದೆ ರೋಹಿತ್​ರನ್ನು ಕ್ಯಾಪ್ಟನ್​ ಎಂದು ಒಪ್ಪಿದ್ದ ಮುಂಬೈಗೆ ಈಗ ಪಾಂಡ್ಯ ನಾಯಕತ್ವ ಒಪ್ಪೋದು ಕಷ್ಟವಾಗಿದೆ ಎನಿಸುತ್ತಿದೆ" ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆಯು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net