More

    ಪತ್ನಿಯ ನಿರೀಕ್ಷೆ, ವಾಸ್ತವವೆಂದು ಫೋಟೋ ಹಂಚಿಕೊಂಡ ನಟ ಯಶ್!

    ಬೆಂಗಳೂರು: ನಟ ಯಶ್​​ ಸಿನಿಮಾ ಎಂದು ಸಖತ್​ ಬ್ಯುಸಿಯಾಗಿರುವ ನಟರ ಸಾಲಿನಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ಕೆಲಸಗಳಿಂದ ಕೊಂಚ ಬ್ರೇಕ್​ ಪಡೆದುಕೊಂಡು ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ತೆಗೆದುಕೊಂಡಿರುವ ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

    ಯಶ್ ಅವರು ಸದ್ಯ ತಮ್ಮ ಪತ್ನಿ ಜೊತೆಗಿನ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಪತ್ನಿ ನಿರೀಕ್ಷೆ, ವಾಸ್ತವವೇನು ಎಂಬುದನ್ನ ಫೋಟೋ ಶೇರ್ ಮಾಡಿ, ರಾಧಿಕಾ ಕಾಲೆಳೆದಿದ್ದಾರೆ. ಅಭಿಮಾನಿಗಳು ಕಾಮೆಂಟ್​​ ಮಾಡಿ ದಂಪತಿಯ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ : ಒಂದೇ ಸಮಯದಲ್ಲಿ ಗರ್ಭಿಣಿಯರಾದ ನಾಲ್ವರು ಸಹೋದರಿಯರು!


    ಫೋಟೋದಲ್ಲಿ ಏನಿದೆ?:
    ಯಶ್ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿರುವ ಎರಡು ಫೋಟೋಗಳಲ್ಲಿ ಮೊದಲ ಫೋಟೋ, ಸುಂದರ ಪ್ರಕೃತಿ ನಡುವೆ ಕೈ ಹಿಡಿದು ಯಶ್ ಮತ್ತು ರಾಧಿಕಾ ನಡೆದುಕೊಂಡು ಬರುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಯಶ್ ಮತ್ತು ರಾಧಿಕಾ ಮುದ್ದಾದ ಇಬ್ಬರು ಮಕ್ಕಳನ್ನು ಎತ್ತಿಕೊಂಡಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆಗಿನ ಫೋಟೋ ಶೇರ್ ಮಾಡಿ ನನ್ನ ಪತ್ನಿಯ ನಿರೀಕ್ಷೆ ಮತ್ತು ವಾಸ್ತವ ಎಂದು ಕ್ಯಾಪ್ಷನ್ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts