More

    IPL 2023 | ಸಾರ್ವಕಾಲಿಕ ದಾಖಲೆ ಬರೆದ ಸ್ಟಾರ್ ಸ್ಪೋರ್ಟ್; 41.1 ಕೋಟಿ ಜನ ವೀಕ್ಷಕರು, 31600 ಕೋಟಿ ನಿಮಿಷ ವೀಕ್ಷಣೆ

    ನವದೆಹಲಿ: 16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ದ್ವಿತೀಯಾರ್ಧದ ಪಂದ್ಯಗಳು ಮುಕ್ತಾಯವಾಗುತ್ತಿದ್ದು, ಪ್ಲೇ ಆಫ್ ಸುತ್ತಿಗೇರಲು ತಂಡಗಳು ಪ್ರಯತ್ನ ನಡೆಸುತ್ತಿವೆ. ಲೀಗ್ ಹಂತದಲ್ಲಿ ಸಾಕಷ್ಟು ರೋಚಕ ಪಂದ್ಯಗಳಿಗೆ ಈ ಬಾರಿಯ ಸೀಸನ್ ಸಾಕ್ಷಿಯಾಗಿದೆ. ಹೀಗಾಗಿ ಫ್ಲೇ-ಆಫ್ ಪಂದ್ಯಗಳತ್ತ ಕ್ರಿಕೆಟ್ ಪ್ರಿಯರ ಆಸಕ್ತಿ ಹೆಚ್ಚಿದೆ. ಜಿದ್ದಾಜಿದ್ದಿನ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುತ್ತಿರುವವರ ಸಂಖ್ಯೆಯಲ್ಲಿ ಈ ಬಾರಿ ಗಣನೀಯ ಏರಿಕೆ ಕಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಐಪಿಎಲ್ ಪ್ರಸಾರದ ಟಿವಿ ಹಕ್ಕು ಹೊಂದಿರುವ ಸ್ಟಾರ್​ ಸ್ಫೋರ್ಟ್ಸ್ ಅಂಕಿ-ಅಂಶಗಳನ್ನು ಪ್ರಕಟಿಸಿದೆ.

    ಲೀಗ್ ಹಂತದ 57 ಐಪಿಎಲ್ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಮೂಲಕ ಬರೋಬ್ಬರಿ 47.1 ಕೋಟಿ ಜನರು ವೀಕ್ಷಿಸಿದ್ದಾರೆ. ಇದು ಈ ವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. ಸ್ಟಾರ್ ಸ್ಪೋರ್ಟ್ ಮೂಲಕ ಬರೋಬ್ಬರಿ 31600 ಕೋಟಿ ನಿಮಿಷ ಐಪಿಎಲ್ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಈವರೆಗೆ ಒಟ್ಟು 57 ಪಂದ್ಯಗಳ ಪೈಕಿ 36 ಪಂದ್ಯಗಳು ಟಿವಿ ವೀಕ್ಷಣೆಯಲ್ಲಿ 3 ಕೋಟಿಗೂ ಪೀಕ್ ಕಾನ್​ಕರೆನ್ಸಿ(Peak Concurrency) ಹೊಂದಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಹೇಳಿಕೊಂಡಿದೆ.

    ಇದನ್ನೂ ಓದಿ: IPL 2023 | ದಾಖಲೆ ಬರೆದ ಸ್ಟಾರ್ ಸ್ಪೋರ್ಟ್ಸ್; ಅತಿ ಹೆಚ್ಚು ವೀಕ್ಷಣೆ ಪಡೆದ ಟಾಪ್-10 ಪಂದ್ಯಗಳ ಪಟ್ಟಿ ಇಂತಿದೆ…

    ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್

    ಐಪಿಎಲ್ 16ನೇ ಆವೃತ್ತಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಮೂಲಕ ಆರಂಭಗೊಂಡಿತು. ಇದೀಗ ಈ ಪಂದ್ಯವನ್ನು ಬರೋಬ್ಬರಿ 5.6 ಕೋಟಿ ಜನರು ವೀಕ್ಷಿಸಿದ್ದಾರೆ ಎಂದು ಸ್ಟಾರ್ ಸ್ಫೋರ್ಟ್ಸ್ ಹೇಳಿಕೊಂಡಿದೆ. ಇದು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ವೀಕ್ಷಣೆ ಪಡೆದ ಪಂದ್ಯವಾಗಿದೆ.

    ಸಿಎಸ್​ಕೆ vs ಆರ್​ಸಿಬಿ

    ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವಿನ ಪಂದ್ಯವನ್ನು 5.2 ಕೋಟಿ ಜನರು ವೀಕ್ಷಿಸಿದ್ದಾರೆ. ಪ್ರತಿ ಬಾರಿ ಐಪಿಎಲ್​ನಲ್ಲಿ ಸಿಎಸ್​ಕೆ ಹಾಗೂ ಆರ್​ಸಿಬಿ ನಡುವಣ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ. ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಈ ಎರಡು ತಂಡಗಳು ಹೊಂದಿವೆ. ಹೀಗಾಗಿ ಯಾವ ತಂಡ ಗೆಲ್ಲುತ್ತದೆ ಎಂಬ ನೀರಿಕ್ಷೆಯೂ ಹೆಚ್ಚಿರುತ್ತದೆ.

    ಸಿಎಸ್​​ಕೆ vs ಕೆಕೆಆರ್

    ಅತೀ ಹೆಚ್ಚು ವೀಕ್ಷಣೆ ಪಡೆದ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತಾ ನೈಟ್ ರೈಡರ್ಸ್​ ನಡುವಿನ ಸೀಸನ್​ನ 33ನೇ ಪಂದ್ಯವೂ ಒಂದು. ಈ ಪಂದ್ಯವನ್ನು 5.1 ಕೋಟಿ ಜನರು ಸ್ಟಾರ್​​ ಸ್ಪೋರ್ಟ್ಸ್ ಮೂಲಕ ವೀಕ್ಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts