More

    VIDEO| LSG ಆಟಗಾರನಿಗೆ ಕೊಹ್ಲಿ ಕೊಹ್ಲಿ ಎಂದು ಛೇಡಿಸಿದ ಜನಸಮೂಹ!

    ಲಖನೌ: ಹಾಲಿ ಐಪಿಎಲ್​ ಋತು ಅನೇಕ ಕಾರಣಗಳಿಗೆ ಹೆಚ್ಚು ಸದ್ದು ಮಾಡುತ್ತಿದ್ದು ಈ ಮಧ್ಯೆ ಅಭಿಮಾನಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿ ಚರ್ಚೆಯಲ್ಲಿ ಭಾಗಿಯಾಗುತ್ತಿದ್ದಾರೆ.

    ಮೇ 01ರಂದು ಲಖನೌ ಹಾಗೂ ಬೆಂಗಳೂರು ನಡುವೆ ನಡೆದಿದ್ದ ಐಪಿಎಲ್​ ಪಂದ್ಯ ಮುಗಿದ್ದು 15ದಿನಗಳು ಕಳೆದರೂ ಸಹ ಅದರ ಬಿಸಿ ಇನ್ನು ಆರಿರುವಂತೆ ಕಾಣುತ್ತಿಲ್ಲ.

    ಆರದ ಬಿಸಿ

    ಮೇ 01ರಂದು ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡದ ಸ್ಟಾರ್​ ಬ್ಯಾಟ್ಸ್​ಮ್ಯಾನ್ ವಿರಾಟ್​ ಕೊಹ್ಲಿ ಹಾಗೂ ಲಖನೌ ತಂಡದ ಆಟಗಾರರಾದ ನವೀನ್​-ಉಲ್​-ಹಕ್​, ಕೈಲ್​​ ಮೇಯರ್ಸ್​ ನಡುವೆ ಪಂದ್ಯ ಮುಗಿದ ಬಳಿಕ ಮಾತಿನ ಚಕಮಕಿ ಏರ್ಪಟ್ಟಿತ್ತು.

    ಇದಾದ ಬಳಿಕ ಸಾಮಾಜಿಕ ಜಾಲತಾನಗಳಲ್ಲಿ ನವೀನ್​ ಹಾಗೂ ವಿರಾಟ್​ ಟೀಕೆ-ಟಿಪ್ಪಣಿಗಳ ಮೂಲಕ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದಿದ್ದರು.

    ಇದನ್ನೂ ಓದಿ: ಗುದನಾಳದಲ್ಲಿ ಚಿನ್ನಾಭರಣ ಬಚ್ಚಿಟ್ಟು ಸಾಗಾಟ; ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನ

    ಇನ್ನು ಜೋರಾಗಿ

    ಇದೀಗ ಹೊಸ ಘಟನೆಯೊಂದರಲ್ಲಿ ಮಂಗಳವಾರ ಮುಂಬೈ ಇಂಡಿಯನ್ಸ್​ ಹಾಗೂ ಲಖನೌ ಸೂಪರ್​ಜೈಂಟ್ಸ್​ ಪಂದ್ಯದ ವೇಳೆ ಅಫ್ಘಾನಿಸ್ತಾನ ಮೂಲದ ಆಟಗಾರರನ್ನು ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗುವ ಮೂಲಕ ಛೇಡಿಸಿದ್ದಾರೆ.

    ಇನ್ನು ಈ ವಿಡಿಯೋ ಸಾಮಾಜಿಕ ವೈರಲ್​ ಆಗಿದ್ದು ಕೊಹ್ಲಿ ಕೊಹ್ಲಿ ಎಂದು ಕೂಗುತ್ತಿದ್ದು ಈ ವೇಳೆ ನವೀನ್​​ ಇನ್ನು ಜೋರಾಗಿ ಕೂಗುವಂತೆ ಹೇಳುತ್ತಿರುವುದು ಕಂಡು ಬರುತ್ತದೆ.

    ಸದ್ಯ ಈ ವಿಡಿಯೋ ವೈರಲ್​ ಆಗಿದ್ದು ನೆಟ್ಟಿಗರು ಭಿನ್ನ-ವಿಭಿನ್ನ ಕಮೆಂಟ್​ಗಳ ಮೂಲಕ ತಮ್ಮ ಆಟಗಾರರನ ಪರ ನಿಲ್ಲುತ್ತಿದ್ದಾರೆ ಮತ್ತು ಈ ವಿಡಿಯೋ ಉಭಯ ಆಟಗಾರರ ನಡುವಿನ ತಾರಕಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts