ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯೇ ಹೆಚ್ಚು: ಶೇ. 56 ರೋಗಗಳಿಗೆ ಕೆಟ್ಟ ಆಹಾರ ಪದ್ಧತಿ ಕಾರಣವೆಂದ ಏಮ್ಸ್! Indians Food

Indians Food

Indians Food : ಭಾರತದಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆ ಇಂದು ಸಾಮಾನ್ಯ ಹಾಗೂ ಸಂಕೀರ್ಣ ಕಾಯಿಲೆಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣ ಅನಾರೋಗ್ಯಕರ ಆಹಾರ ಪದ್ಧತಿಯಾಗಿದೆ. ಇದರಿಂದಾಗಿ ಕ್ಯಾನ್ಸರ್ ಸೇರಿದಂತೆ ವಿವಿಧ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ( AIIMS )ಯ ವೈದ್ಯರ ತಂಡವು ಇತ್ತೀಚೆಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಹತ್ವದ ಮಾಹಿತಯನ್ನು ಹಂಚಿಕೊಂಡಿದ್ದಾರೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಏಮ್ಸ್‌ನ ಮುಖ್ಯ ಆಹಾರ ತಜ್ಞೆ ಡಾ. ಪರ್ಮೀತ್ ಕೌರ್ ಮತ್ತು ಏಮ್ಸ್‌ನ ಹಿರಿಯ ಆಹಾರ ತಜ್ಞೆ ಮೋನಿತಾ ಗೆಹ್ಲೋಟ್, ಭಾರತದಲ್ಲಿ ದ್ವಿದಳ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳಂತಹ ಪ್ರಮುಖ ಆಹಾರಗಳ ಸೇವನೆಯು ಅತ್ಯಂತ ಕಡಿಮೆಯಾಗಿದೆ ಎಂದು ಒತ್ತಿ ಹೇಳಿದರು.

56 ರಷ್ಟು ರೋಗಗಳು ಅನಾರೋಗ್ಯಕರ ಆಹಾರ ಪದ್ಧತಿಗೆ ಸಂಬಂಧಿಸಿವೆ

ಆಘಾತಕಾರಿ ಸಂಗತಿ ಏನೆಂದರೆ, ಭಾರತದಲ್ಲಿ ತಿನ್ನಬಾರದಂತಹ ಅಂದರೆ, ಆರೋಗ್ಯಕ್ಕೆ ಹಾನಿಕಾರಕವಾಗುವ ಆಹಾರಗಳ ಸೇವನೆ ಪ್ರಮಾಣ ಹೆಚ್ಚಾಗುತ್ತಿದೆ. ಈ ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಅದಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತಿವೆ. ಭಾರತದ ಶೇ. 56 ರಷ್ಟು ರೋಗಗಳು ಅನಾರೋಗ್ಯಕರ ಆಹಾರ ಪದ್ಧತಿಗೆ ಸಂಬಂಧಿಸಿವೆ. ಬೊಜ್ಜು ಅಥವಾ ಸ್ಥೂಲಕಾಯವು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ ಎಂದು ಡಾ. ಕೌರ್ ಹೇಳಿದರು.

ಮೊಳಕೆ ಕಾಳುಗಳನ್ನು ಹೆಚ್ಚು ಸೇವಿಸಿ

ಇನ್ನು ಭಾರತೀಯರಲ್ಲಿ ಪ್ರೋಟೀನ್ ಸೇವನೆ ತುಂಬಾ ಕಡಿಮೆಯಾಗಿದೆ ಎಂದು ಕೌರ್​ ಹೇಳಿದರು. ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್, ಜಿನ್, ಸೆಲೆನಿಯಮ್‌ನ ಉತ್ತಮ ಮೂಲವಾಗಿರುವ ಪ್ರೋಟೀನ್ ಮತ್ತು ಮೊಳಕೆ ಕಾಳುಗಳನ್ನು ಹೆಚ್ಚು ಸೇವಿಸುವುದು ಮುಖ್ಯವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದು ಕೌರ್​ ಸಲಹೆ ನೀಡಿದರು.

400 ಗ್ರಾಂ ಸೇವಿಸಬೇಕು

ಡಾ. ಕೌರ್ ಅವರ ಪ್ರಕಾರ, ನಮ್ಮ ದೇಹಕ್ಕೆ ಕೊಬ್ಬಿನ ಸೇವನೆಯು ಕೂಡ ಬಹಳ ಮುಖ್ಯ. ಆದರೆ, ಅದು ಒಟ್ಟು ಕ್ಯಾಲೋರಿ ಸೇವನೆಯ ಶೇ. 30 ಕ್ಕಿಂತ ಹೆಚ್ಚಿರಬಾರದು. ನಮ್ಮ ಭಾರತೀಯರಲ್ಲಿ ಹಣ್ಣುಗಳು ಮತ್ತು ತರಕಾರಿ ಸೇವನೆಯು ತುಂಬಾ ಕಡಿಮೆಯಾಗಿದೆ. ಆದ್ದರಿಂದ, ನಾವು ಹಣ್ಣುಗಳು ಮತ್ತು ತರಕಾರಿಗಳ ಸೇವನೆಯನ್ನು ಹೆಚ್ಚಿಸಬೇಕಾಗಿದೆ. ಅದು ಕೂಡ ದಿನಕ್ಕೆ 400 ಗ್ರಾಂ ಸೇವಿಸಬೇಕು. ಹೆಚ್ಚೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ತೂಕ ನಷ್ಟವಾಗುತ್ತದೆ ಎಂಬುದನ್ನು ಸಾಬೀತುಪಡಿಸುವ ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ ಎಂದು ಕೌರ್ ಹೇಳಿದರು.

ಇದನ್ನೂ ಓದಿ: 33 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 33 ನಾಣ್ಯಗಳನ್ನು ಹೊರತೆಗೆದ ವೈದ್ಯರು: ಆತನಿಗಿದೆ ವಿಚಿತ್ರ ಕಾಯಿಲೆ! Coins Removed

ಸಿಕ್ಕ ಸಿಕ್ಕ ಡಯಟ್‌ಗಳನ್ನು ಅನುಸರಿಸಬೇಡಿ

ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ಅಡುಗೆ ಎಣ್ಣೆಯ ಸೇವನೆಯು ನಮ್ಮ ದೇಹದ ಮೇಲೆ ಋಣಾತ್ಮಕ ಪರಿಣಾಮಗಳ ಬೀರುತ್ತವೆ. ದಾರಿ ತಪ್ಪಿಸುವ ಮಾರ್ಕೆಟಿಂಗ್ ಬಗ್ಗೆ ಎಚ್ಚರದಿಂದಿರಿ ಮತ್ತು ಆಹಾರ ಲೇಬಲ್‌ಗಳನ್ನು ಹೇಗೆ ಓದುವುದು ಎಂಬುದನ್ನು ಕಲಿಯುವುದು ತುಂಬಾ ಮುಖ್ಯವಾಗಿದೆ. ತೂಕ ಇಳಿಸಿಕೊಳ್ಳಲು ಸಿಕ್ಕ ಸಿಕ್ಕ ಡಯಟ್‌ಗಳನ್ನು ಅನುಸರಿಸಬೇಡಿ. ಸಮತೋಲಿತ ಆಹಾರ ಮತ್ತು ವ್ಯಾಯಾಮ ಮುಖ್ಯ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಕೌರ್​ ತಿಳಿಸಿದರು.

ಆಹಾರದಲ್ಲಿ ವೈವಿಧ್ಯತೆ ಬಹಳ ಮುಖ್ಯವಾಗಿದೆ. ನಿಮ್ಮ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಪ್ರೋಟೀನ್, ಡೈರಿ ಮತ್ತು ಆರೋಗ್ಯಕರ ಕೊಬ್ಬುಗಳು ಇರಬೇಕು ಎಂದು ಡಾ. ಗೆಹ್ಲೋಟ್ ಹೇಳಿದರು.

ಐಸಿಎಂಆರ್ ಹೇಳೋದೇನು?

2024ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಭಾರತೀಯರ ಆಹಾರ ಮಾರ್ಗಸೂಚಿಗಳ ಇತ್ತೀಚಿನ ಆವೃತ್ತಿಯನ್ನು ಬಿಡುಗಡೆ ಮಾಡಿತು. ಅಗತ್ಯ ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸಲು ಮತ್ತು ಬೊಜ್ಜು ಮತ್ತು ಮಧುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ತಡೆಗಟ್ಟಲು 17 ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಮೂಲಕ ಅಕಾಲಿಕ ಮರಣಗಳ ಗಮನಾರ್ಹ ಪ್ರಮಾಣವನ್ನು ತಪ್ಪಿಸಬಹುದು ಎಂದು ಐಸಿಎಂಆರ್​ ಹೇಳಿದೆ. ಸಕ್ಕರೆ ಮತ್ತು ಕೊಬ್ಬಿನಿಂದ ತುಂಬಿರುವ ಹೆಚ್ಚು ಸಂಸ್ಕರಿಸಿದ ಆಹಾರಗಳ ಸೇವನೆಯಲ್ಲಿನ ಏರಿಕೆ, ಕಡಿಮೆ ದೈಹಿಕ ಚಟುವಟಿಕೆ ಮತ್ತು ವೈವಿಧ್ಯಮಯ ಆಹಾರಗಳ ಕೊರತೆಯಿಂದ ಸೂಕ್ಷ್ಮ ಪೋಷಕಾಂಶಗಳ ಕೊರತೆ ಮತ್ತು ಅಧಿಕ ತೂಕದ ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ ಎಂದು ಐಸಿಎಂಆರ್​ ಹೇಳಿದೆ.

ಐಸಿಎಂಆರ್​ನ ಆಹಾರ ಮಾರ್ಗಸೂಚಿಗಳು ಇಲ್ಲಿವೆ

* ಸಮತೋಲಿತ ಆಹಾರವನ್ನು ಖಚಿತಪಡಿಸಿಕೊಳ್ಳಲು ವೈವಿಧ್ಯಮಯ ಆರೋಗ್ಯಕರ ಆಹಾರಗಳನ್ನು (ಹೆಚ್ಚೆಚ್ಚು ಹಣ್ಣು-ತರಕಾರಿಗಳು ಮತ್ತು ಡೈರಿ ಉತ್ಪನ್ನಗಳು) ಸೇವಿಸಿ
* ಗರ್ಭಿಣಿಯರು ಮತ್ತು ಹೊಸ ತಾಯಂದಿರು ಹೆಚ್ಚುವರಿ ಆಹಾರ ಮತ್ತು ಆರೋಗ್ಯ ರಕ್ಷಣೆಯನ್ನು ಪಡೆಯಬೇಕು
* ಮೊದಲ ಆರು ತಿಂಗಳು ಎದೆಹಾಲುಣಿಸುವುದನ್ನು ಖಚಿತಪಡಿಸಿಕೊಳ್ಳಿ, ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಕಾಲ ಎದೆಹಾಲುಣಿಸುವುದನ್ನು ಮುಂದುವರಿಸಿ
* ಆರು ತಿಂಗಳ ವಯಸ್ಸಿನ ನಂತರ ಶಿಶುವಿಗೆ ಮನೆಯಲ್ಲಿಯೇ ತಯಾರಿಸಿದ ಅರೆ-ಘನ ಪೂರಕ ಆಹಾರಗಳನ್ನು ನೀಡಬೇಕು
* ಆರೋಗ್ಯ ಮತ್ತು ಅನಾರೋಗ್ಯದಲ್ಲಿ ಮಕ್ಕಳು ಮತ್ತು ಹದಿಹರೆಯದವರಿಗೆ ಸಾಕಷ್ಟು ಮತ್ತು ಸೂಕ್ತವಾದ ಆಹಾರವನ್ನು ಖಚಿತಪಡಿಸಿಕೊಳ್ಳಿ
* ಸಾಕಷ್ಟು ತರಕಾರಿಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಿ
* ಮಧ್ಯಮ ಪ್ರಮಾಣದಲ್ಲಿ ಎಣ್ಣೆ/ಕೊಬ್ಬನ್ನು ಬಳಸಿ, ಕೊಬ್ಬು ಮತ್ತು ಅಗತ್ಯ ಕೊಬ್ಬಿನಾಮ್ಲಗಳ ದೈನಂದಿನ ಅಗತ್ಯಗಳನ್ನು ಪೂರೈಸಲು ವಿವಿಧ ರೀತಿಯ ಉತ್ತಮ ಎಣ್ಣೆ ಬೀಜಗಳನ್ನು ಆರಿಸಿ
* ಸಮಾನ ಪ್ರೋಟೀನ್‌ಗಳು ಮತ್ತು ಅಗತ್ಯ ಅಮೈನೋ ಆಮ್ಲಗಳನ್ನು ಪಡೆಯಿರಿ. ಸ್ನಾಯು ಬಲವನ್ನು ನಿರ್ಮಿಸಲು ಪ್ರೋಟೀನ್ ಪೂರಕಗಳನ್ನು ಆದಷ್ಟು ತಪ್ಪಿಸಿ
* ಕಿಬ್ಬೊಟ್ಟೆಯ ಬೊಜ್ಜು, ಅಧಿಕ ತೂಕ ಮತ್ತು ಒಟ್ಟಾರೆ ಬೊಜ್ಜು ತಡೆಗಟ್ಟಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ
* ದೈಹಿಕವಾಗಿ ಸಕ್ರಿಯರಾಗಿರಿ, ನಿಯಮಿತವಾಗಿ ವ್ಯಾಯಾಮ ಮಾಡಿ
* ಉಪ್ಪು ಸೇವನೆಯನ್ನು ಆದಷ್ಟು ಕಡಿಮೆ ಮಾಡಿ
* ಸುರಕ್ಷಿತ ಮತ್ತು ಶುದ್ಧ ಆಹಾರಗಳನ್ನು ಸೇವಿಸಿ
* ಸೂಕ್ತವಾದ ಅಡುಗೆ ವಿಧಾನಗಳನ್ನು ಬಳಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ
* ಸಾಕಷ್ಟು ನೀರು ಕುಡಿಯುವುದನ್ನು ಮರೆಯದಿರಿ
* ಸಂಸ್ಕರಿಸಿದ ಆಹಾರಗಳು ಮತ್ತು ಹೆಚ್ಚಿನ ಕೊಬ್ಬು ಹಾಗೂ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ
* ವಯಸ್ಸಾದ ಜನರ ಆಹಾರದಲ್ಲಿ ಪೋಷಕಾಂಶಭರಿತ ಆಹಾರಗಳಿಗೆ ಆದ್ಯತೆ ನೀಡಿ
* ಆಹಾರ ಲೇಬಲ್‌ಗಳಲ್ಲಿ ಮಾಹಿತಿಯನ್ನು ಸರಿಯಾದಿ ಓದಿ

ನೀವು ಚಿಕನ್ ಅಥವಾ ಮಟನ್​ ಲಿವರ್​ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver

ದಕ್ಷಿಣ ಕನ್ನಡದಲ್ಲಿ ದೆವ್ವದ ಕಾಟಕ್ಕೆ ಕಂಗಾಲಾದ ಕುಟುಂಬ: ಮೊಬೈಲ್​ ಕ್ಯಾಮೆರಾದಲ್ಲಿ ವಿಚಿತ್ರ ಮುಖ ಸೆರೆ! Ghost

Share This Article

ಹೆಚ್ಚಾದರೆ ದೇಹದ ಬೊಜ್ಜು ಭವಿಷ್ಯವಾದೀತು ನಜ್ಜುಗುಜ್ಜು

‘ಏನಾದ್ರೂ ಮಾಡಿ ಹೇಗಾದ್ರೂ ಮಾಡಿ ಸಾರ್, ಈ ಹೊಟ್ಟೆ ಕರಗಿ ಮೊದಲಿನಂತಾದರೆ ಸಾಕು. ನನಗಿನ್ನೂ ಮದುವೆಯಾಗಿಲ್ಲ.…

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…