blank

ನೀವು ಚಿಕನ್ ಅಥವಾ ಮಟನ್​ ಲಿವರ್​ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver

Liver

Liver : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು ತುಂಡು ಮಾಂಸವಿಲ್ಲದೆ ಇರಲಾಗದು ಎಂದು ಅನೇಕರು ಹೇಳಿರುವುದನ್ನು ಕೇಳಿದ್ದೇವೆ. ಅದರಲ್ಲೂ ಭಾನುವಾರ ಬಂತೆಂದರೆ ಮಾಂಸಾಹಾರ ತಿನ್ನಲೇಬೇಕು. ಒಂದು ಕಾಲದಲ್ಲಿ ಜನರು ಭಾನುವಾರ ಮಾತ್ರ ತಿನ್ನುತ್ತಿದ್ದರು. ಆದರೀಗ ದಿನ ಯಾವುದೇ ಇರಲಿ, ಕೋಳಿ, ಮಟನ್, ಮೀನು ಮತ್ತು ಸೀಗಡಿಯಂತಹ ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿದ್ದಾರೆ. ಕೆಲವರಿಗಂತೂ ಒಂದು ಪೀಸ್​ ಮಾಂಸ ತಿನ್ನದೇ ಇದ್ದರೆ ಆ ದಿನ ಪೂರ್ಣ ಅನಿಸುವುದೇ ಇಲ್ಲ.

ಅಂದಹಾಗೆ ಕೋಳಿ ಮತ್ತು ಮಟನ್ ಮಾತ್ರವಲ್ಲದೆ, ಅವುಗಳ ಲಿವರ್ ಅನ್ನು ಇಷ್ಟಪಡುವ ಅನೇಕ ಮಂದಿ ಇದಾರೆ. ಲಿವರ್ ಫ್ರೈ ಮತ್ತು ಲಿವರ್ ಕರಿಯಂತಹ ವಿವಿಧ ಖಾದ್ಯಗಳನ್ನು ಸವಿಯಲು ಇಚ್ಛಿಸುತ್ತಾರೆ. ಆದರೆ, ಕೆಲವರಿಗೆ ಲಿವರ್​ ಅಂದ್ರೆ ಆಗುವುದಿಲ್ಲ. ಲಿವರ್​ ಬಿಟ್ಟು ಉಳಿದ ಮಾಂಸವನ್ನು ತಿನ್ನುತ್ತಾರೆ. ಅಷ್ಟಕ್ಕೂ ಚಿಕನ್​ ಮತ್ತು ಮಟನ್ ಲಿವರ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಅಥವಾ ಹಾನಿಕಾರಕವೇ? ಈ ಕುರಿತಾದ ಉಪಯುಕ್ತ ಮಾಹಿತಿ ಇಲ್ಲಿದೆ.

ಚಿಕನ್​ ಲಿವರ್​

ಚಿಕನ್​ ಲಿವರ್​ ವಿಟಮಿನ್ ಎ, ಬಿ, ಬಿ12, ಪ್ರೋಟೀನ್​ಗಳು, ಖನಿಜಗಳು, ಕಬ್ಬಿಣ, ಫೋಲೇಟ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿಶೇಷವಾಗಿ ಚಿಕನ್​ ಲಿವರ್​ ಉತ್ತಮ ಪ್ರಮಾಣದ ಸೆಲೆನಿಯಮ್ ಅನ್ನು ಹೊಂದಿರುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಬಹಳಷ್ಟು ಕಡಿಮೆ ಮಾಡುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಇದಲ್ಲದೆ, ಸೆಲೆನಿಯಮ್ ಅಂಶ ಅಸ್ತಮಾ, ಸೋಂಕು, ದೇಹದಲ್ಲಿ ಉರಿಯೂತ ಮತ್ತು ಕೀಲು ನೋವಿನಂತಹ ಸಮಸ್ಯೆಗಳನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಿಕನ್​ ಲಿವರ್​ ಕಣ್ಣು, ಚರ್ಮ ಮತ್ತು ರಕ್ತಹೀನತೆಯ ಸಮಸ್ಯೆಗಳನ್ನು ಸಹ ತಡೆಯುತ್ತದೆ. ಇದು ವಿಟಮಿನ್ ಬಿ 12ನಲ್ಲಿ ಸಮೃದ್ಧವಾಗಿದ್ದು, ಮೆದುಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಉಪಯುಕ್ತವಾಗಿದೆ.

ಆದಾಗ್ಯೂ, ಚಿಕನ್​ ಲಿವರ್​ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆಗಳು ಮತ್ತು ಫ್ಯಾಟಿ ಲಿವರ್​ನಿಂದ ಬಳಲುತ್ತಿರುವ ಜನರು ಇದನ್ನು ಆದಷ್ಟು ತಪ್ಪಿಸಬೇಕು. ಏಕೆಂದರೆ, ಲಿವರ್​ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಹೃದಯ ಕಾಯಿಲೆಯ ಅಪಾಯವೂ ಹೆಚ್ಚಾಗುತ್ತದೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ದೆವ್ವದ ಕಾಟಕ್ಕೆ ಕಂಗಾಲಾದ ಕುಟುಂಬ: ಮೊಬೈಲ್​ ಕ್ಯಾಮೆರಾದಲ್ಲಿ ವಿಚಿತ್ರ ಮುಖ ಸೆರೆ! Ghost

ಇದಲ್ಲದೆ, ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಜನರು ಲಿವರ್​ ಅನ್ನು ತಿನ್ನಬಾರದು. ಒಂದು ವೇಳೆ ತಿನ್ನಲು ಬಯಸಿದರೆ, ಅದಕ್ಕೂ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಕೂಡ ಲಿವರ್​ ಅನ್ನು ಮಿತವಾಗಿ ತಿನ್ನಬೇಕು. ನೀವು ಹೆಚ್ಚು ತಿಂದರೆ, ಗ್ಯಾಸ್, ಹೊಟ್ಟೆ ಉಬ್ಬರ, ನೋವು ಮತ್ತು ಅತಿಸಾರದಂತಹ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಸಹ ವೈದ್ಯರ ಸಲಹೆಯ ಮೇರೆಗೆ ಮಾತ್ರ ಇದನ್ನು ಸೇವಿಸಬೇಕು.

ಮಟನ್ ಲಿವರ್

ಮಟನ್‌ನ ಲಿವರ್​ ಅತ್ಯಂತ ಪೌಷ್ಟಿಕ ಭಾಗವಾಗಿದೆ. ಇದರಲ್ಲಿ ಜೀವಸತ್ವಗಳು, ಖನಿಜಗಳು, ಪೊಟ್ಯಾಸಿಯಮ್, ಕಬ್ಬಿಣ, ತಾಮ್ರ ಮತ್ತು ಸತುವು ಇರುತ್ತದೆ. ಈ ಮಟನ್ ಲಿವರ್‌ನಲ್ಲಿರುವ ಕಬ್ಬಿಣದ ಅಂಶವು ರಕ್ತಹೀನತೆಯನ್ನು ತಡೆಯುತ್ತದೆ ಮತ್ತು ದೇಹದ ಭಾಗಗಳಿಗೆ ಆಮ್ಲಜನಕವನ್ನು ಪೂರೈಸಲು ಸಹಾಯ ಮಾಡುತ್ತದೆ. ಅಲ್ಲದೆ, ಮಟನ್ ಲಿವರ್ ವಿಟಮಿನ್ ಎ, ಬಿ ಮತ್ತು ಡಿಗಳಲ್ಲಿ ಸಮೃದ್ಧವಾಗಿದೆ. ಇದು ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಖನಿಜಗಳು ಕಿಣ್ವಗಳ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ರಾಸಾಯನಿಕ ಪ್ರಕ್ರಿಯೆಗಳನ್ನು ಸಮತೋಲನಗೊಳಿಸುತ್ತದೆ. ಮಟನ್ ಲಿವರ್‌ನಲ್ಲಿರುವ ವಿಟಮಿನ್ ಬಿ12 ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ನರ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಮಟನ್ ಲಿವರ್ ತಿನ್ನುವುದರಿಂದ ಪರಿಹಾರವನ್ನು ಪಡೆಯಬಹುದು.

ಇನ್ನು ಮಟನ್ ಲಿವರ್ ತಿನ್ನುವುದರಿಂದ ಅನೇಕ ಅನಾನುಕೂಲಗಳು ಕೂಡ ಇವೆ. ಗರ್ಭಿಣಿಯರು ಮಟನ್ ಲಿವರ್ ತಿನ್ನುತ್ತಿದ್ದರೆ, ಅದು ಭ್ರೂಣದಲ್ಲಿ ಕೇಂದ್ರ ನರಮಂಡಲ, ಕ್ರಾನಿಯೊಫೇಶಿಯಲ್ ಮತ್ತು ಹೃದಯದಲ್ಲಿ ಜನ್ಮ ದೋಷಗಳನ್ನು ಉಂಟುಮಾಡಬಹುದು. ಅಲ್ಲದೆ, ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಜನರು ಮಟನ್ ಲಿವರ್ ತಿನ್ನಬಾರದು. ಮಟನ್ ಲಿವರ್​ನಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಆಸ್ತಮಾ ಸಮಸ್ಯೆಯಿಂದ ಬಳಲುತ್ತಿರುವ ಜನರು ಸಹ ಈ ಮಟನ್ ಲಿವರ್​ನಿಂದ ದೂರವಿರಬೇಕು.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ಊಟ ಮಾಡುವಾಗ ಮಾತ್ರವಲ್ಲ ಅಡುಗೆ ಮಾಡುವಾಗಲೂ ಮಾತನಾಡಬಾರದು… ಇಲ್ಲಿದೆ ಅಚ್ಚರಿಯ ಕಾರಣ! Cooking

ಮನೆಯನ್ನು ಮಾರಿ 33 ಲಕ್ಷ ಹಣದೊಂದಿಗೆ ಲವರ್​ ಜತೆ ಪತ್ನಿ ಪರಾರಿ: ಮನನೊಂದು ಪ್ರಾಣಬಿಟ್ಟ ಗಂಡ! Wife Cheating Husband

Share This Article

ಬೆಲ್ಲ ತಿಂದ್ರೆ ಬೆಟ್ಟದಷ್ಟು ಉಪಯೋಗ! ಆದರೆ ಬೆಲ್ಲ ತಿನ್ನುವುದರಿಂದ ನಿಮ್ಮ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆಯೇ? Jaggery Benefits

Jaggery Benefits:  ಬೆಲ್ಲ ತಿಂದ್ರೆ ಬೆಟ್ಟದಷ್ಟು ಉಪಯೋಗಗಳಿವೆ. ಪ್ರತಿದಿನ ಬೆಳಗ್ಗೆ ಬೆಲ್ಲ ತಿಂದ್ರೆ ಆರೋಗ್ಯಕ್ಕೆ ತುಂಬಾ…

ಈ 3 ರಾಶಿಯವರು ತಮ್ಮ ತಾಯಂದಿರನ್ನು ದೇವತೆಯಂತೆ ನೋಡಿಕೊಳ್ಳುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…

ಮನೆಯಲ್ಲೇ ಮಾಡಿ ಟೇಸ್ಟಿ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ಸಿಂಪಲ್​ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪ್ಪಿನಕಾಯಿ ಇಲ್ಲದೆ ಊಟ ಸಂಪೂರ್ಣ ಎನ್ನಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ…