Cooking : ಊಟ ಮಾಡುವಾಗ ಮಾತನಾಡಬಾರದು ಮತ್ತು ಊಟದ ಮೇಲೆ ಹೆಚ್ಚು ಗಮನ ಹರಿಸಬೇಕೆಂದು ಮನೆಯಲ್ಲಿರುವ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಆದರೆ, ಊಟ ಮಾಡುವಾಗ ಮಾತ್ರವಲ್ಲ ಅಡುಗೆ ಮಾಡುವಾಗಲೂ ತುಂಬಾ ಶಾಂತವಾಗಿರಬೇಕು. ಈ ರೀತಿ ಮೌನವಾಗಿ ಅಡುಗೆ ಮಾಡುವುದರಿಂದ ತುಂಬಾ ಪ್ರಯೋಜನವಿದೆ.
ಹೆಚ್ಚಿನ ಜನರು ಅಡುಗೆ ಮಾಡುವಾಗ ಮತ್ತು ಊಟ ಮಾಡುವಾಗ ತಮ್ಮ ಫೋನ್‌ಗಳನ್ನು ನೋಡುತ್ತಾರೆ ಅಥವಾ ಫೋನ್‌ಗಳಲ್ಲಿ ಮಾತನಾಡುತ್ತಾರೆ. ಯಾವುದೇ ಕೆಲಸಗಳನ್ನು ಮಾಡುವಾಗಲೂ ಟಿವಿ ಅಥವಾ ಫೋನ್ ನೋಡುತ್ತಿರುತ್ತಾರೆ. ಆದರೆ, ಈ ರೀತಿ ಎಂದಿಗೂ ಮಾಡಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಅಡುಗೆ ಮಾಡುವುದು ಕೇವಲ ಒಂದು ಕೆಲಸವಲ್ಲ. ಒಂದು ಕಲೆ ಕೂಡ ಹೌದು. ಸರಿಯಾಗಿ ಅಡುಗೆ ಮಾಡುವುದು ಒಟ್ಟಾರೆ ಆರೋಗ್ಯಕ್ಕೂ ಅತ್ಯಗತ್ಯ. ಆದರೆ, ಅದನ್ನು ಮರೆತು ಹೆಚ್ಚಿನ ಜನರು ಅಡುಗೆ ಮಾಡುವಾಗ ಫೋನ್‌ನಲ್ಲಿ ಮಾತನಾಡುತ್ತಾರೆ. ಅದರಲ್ಲೂ ಹೆಂಗಸರಂತೂ ಅಡುಗೆ ಮಾಡುವಾಗ ಟಿವಿ ಧಾರಾವಾಹಿಗಳನ್ನು ನೋಡುತ್ತಾರೆ. ಆದರೆ, ಈ ರೀತಿ ಮಾಡಬಾರದೆಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಮನೆಯನ್ನು ಮಾರಿ 33 ಲಕ್ಷ ಹಣದೊಂದಿಗೆ ಲವರ್ ಜತೆ ಪತ್ನಿ ಪರಾರಿ: ಮನನೊಂದು ಪ್ರಾಣಬಿಟ್ಟ ಗಂಡ!
ನೀವು ಶಾಂತವಾಗಿ ಅಡುಗೆ ಮಾಡಿದಾಗ, ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ಒತ್ತಡ ಕಡಿಮೆಯಾದರೆ ಸಹಜವಾಗಿಯೇ ಹಲವು ಪ್ರಯೋಜನಗಳಿವೆ. ಹೆಚ್ಚಿನ ಜನರಿಗೆ ಯಾವುದೇ ಕೆಲಸವನ್ನು ಒಂಟಿಯಾಗಿ ಮಾಡುವುದು ಕಷ್ಟವಾಗುತ್ತದೆ. ಇದರಿಂದ ಒಂಟಿತನ ಎದುರಿಸಬಹುದು. ಆದರೆ, ಮೌನವಾಗಿ ಅಡುಗೆ ಮಾಡುವುದು ಮತ್ತು ಅದನ್ನು ಆನಂದಿಸುವುದು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಆರೋಗ್ಯ ಸುಧಾರಿಸುತ್ತದೆ. ಅಲ್ಲದೆ, ಒಂಟಿತನವೂ ದೂರವಾಗುತ್ತದೆ.
ಮಾತನಾಡದೆ ಅಡುಗೆ ಮಾಡುವುದರಿಂದ ಅಡುಗೆ ಮಾಡುವಾಗ ಉಂಟಾಗುವ ಶಬ್ದಗಳನ್ನು ಗಮನಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಆಹಾರದ ಬಣ್ಣ ಮತ್ತು ಆಕಾರದ ಮೇಲೆಯೂ ಹೆಚ್ಚಿನ ಗಮನವಿರುತ್ತದೆ. ಏನೇ ಮಿಸ್ಟೇಕ್ ಆದರೂ ಸುಲಭವಾಗಿ ಗಮನಹರಿಸಬಹುದು. ಇದರಿಂದ ನೀವು ತುಂಬಾ ರುಚಿಕರವಾದ ಆಹಾರವನ್ನು ಸಹ ತಯಾರಿಸಬಹುದು. ಆದ್ದರಿಂದ ಅಂತಹ ಪ್ರಯೋಜನಗಳನ್ನು ಪಡೆಯಲು, ನೀವು ಮೌನ ಮತ್ತು ಶಾಂತಿಯಿಂದ ಅಡುಗೆ ಮಾಡಬೇಕು. (ಏಜೆನ್ಸೀಸ್)
ಭೂಮಿ ತಿರುಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲಿದೆ ನೋಡಿ ಅದ್ಭುತ ವಿಡಿಯೋ! Earth rotation