Ghost : ಭೂಮಿಯ ಮೇಲೆ ಅನೇಕ ಕುತೂಹಲಕಾರಿ ಸಂಗತಿಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಕೆಲವು ನಿಜವೇ ಎಂಬುದು ಇನ್ನು ಬಹುತೇಕರಿಗೆ ನಂಬಲು ಆಗುತ್ತಿಲ್ಲ. ಏಕೆಂದರೆ, ಅಷ್ಟು ನಿಗೂಢವಾಗಿರುತ್ತವೆ. ಸಾಮಾನ್ಯವಾಗಿ ನಮ್ಮ ನಡುವೆ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಏಲಿಯನ್ಗಳ ನಿಜಕ್ಕೂ ಇದೆಯಾ? ಅಥವಾ ಇಲ್ಲವೇ?, ದೇವರು ಅಸ್ತಿತ್ವದಲ್ಲಿರುವನೇ? ಅಥವಾ ಇಲ್ಲವೇ? ಮತ್ತು ದೆವ್ವಗಳು ಇದೆಯಾ? ಅಥವಾ ಇಲ್ಲವೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಆಗಾಗ ಬಿರುಸಿನ ಚರ್ಚೆಗಳು ನಡೆಯುವುದು ಸಾಮಾನ್ಯ.
ಅದರಲ್ಲೂ ದೆವ್ವಗಳ ಇರುವಿಕೆ ಬಗ್ಗೆ ಸಾಕಷ್ಟು ಮಾತುಗಳನ್ನು ಕೇಳಿದ್ದೇವೆ. ತಮ್ಮ ಅನುಭವಕ್ಕೆ ಬಂದಂತಹ ಸಂಗತಿಗಳನ್ನು ಅನೇಕರು ಹೇಳಿದಾಗ ಕೆಲವರು ನಂಬದೇ ಕುಹಕವಾಡುತ್ತಾರೆ. ಮನುಷ್ಯ ಬೇರೆ ಬೇರೆ ಗ್ರಹಗಳತ್ತ ಹೆಜ್ಜೆ ಹಾಕುತ್ತಿರುವ ಆಧುನಿಕ ಕಾಲದಲ್ಲ ಇದನೆಲ್ಲ ನಂಬುವು ಮೂರ್ಖತನ ಎಂದು ವಾದಿಸುತ್ತಾರೆ. ಆದರೆ, ಅನುಭವಕ್ಕೆ ಬಂದವರು ದೆವ್ವ ಇದೆ ಎನ್ನುತ್ತಾರೆ. ಇನ್ನು ಭೂತ ಅಥವಾ ದೆವ್ವಗಳು ಮನುಷ್ಯನನ್ನು ಕಾಡುವಂತಹ ದೃಶ್ಯಗಳನ್ನು ನಾವು ಕತೆಗಳಲ್ಲಿ ಕೇಳಿರುತ್ತೇವೆ ಅಥವಾ ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ, ನಿಜ ಜೀವನದಲ್ಲಿಯೂ ಇದು ನಡೆದಿದೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು ದಕ್ಷಿಣ ಕನ್ನಡದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕುಟುಂಬವೊಂದಕ್ಕೆ ಕಳೆದ 3 ತಿಂಗಳಿಂದ ದೆವ್ವವೊಂದು ತುಂಬಾ ತೊಂದರೆ ನೀಡುತ್ತಿದೆಯಂತೆ. ಭಯಾನಕ ಸಂಗತಿ ಏನೆಂದರೆ, ಮೊಬೈನಲ್ಲಿ ಫೋಟೋ ಕೂಡ ಸೆರೆಯಾಗಿದೆ. ಆ ಫೋಟದಲ್ಲಿ ವಿಚಿತ್ರವಾದ ಮುಖವೊಂದು ಗೋಚರವಾಗಿದ್ದು, ದೆವ್ವದ ಫೋಟೋ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಒಂದು ಸಿನಿಮಾ 1000 ಕೋಟಿ ರೂ. ಗಳಿಕೆ ಮಾಡಿದ್ರೆ ನಿರ್ಮಾಪಕರಿಗೆ ಸಿಗೋದು ಇಷ್ಟೇನಾ? Tollywood
ಅಂದಹಾಗೆ ಮಾಲಾಡಿ ಗ್ರಾಮದ ಉಮೇಶ್ ಶೆಟ್ಟಿ ಕುಟುಂಬಕ್ಕೆ ಇಂತಹ ವಿಚಿತ್ರ ಅನುಭವ ಆಗುತ್ತಿದೆಯಂತೆ. ದೆವ್ವದ ಕಾಟಕ್ಕೆ ಇಡೀ ಕುಟುಂಬ ಹೈರಾಣಾಗಿದೆ. ಅಚ್ಚರಿಯ ಸಂಗತಿ ಏನೆಂದರೆ, ಉಮೇಶ್ ಶೆಟ್ಟಿ ಅವರ ಮನೆಯ ಒಳಗೆ ಆಗಾಗ ಇದ್ದಕ್ಕಿದ್ದಂತೆ ಬಟ್ಟೆಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತದೆಯಂತೆ. ಇದು ಕೇಳಲು ಸಿನಿಮಾ ಕತೆಯಂತಿದ್ದರೂ ಇದುವೇ ಸತ್ಯ ಎನ್ನುತ್ತಿದೆ ಉಮೇಶ್ ಶೆಟ್ಟಿ ಕುಟುಂಬ.
ಬಟ್ಟೆಗೆ ಬೆಂಕಿ ಮಾತ್ರ ಬೀಳುತ್ತಿಲ್ಲ. ಮನೆಯಲ್ಲಿರುವ ಪಾತ್ರೆಗಳು ಸೇರಿ ಎಲ್ಲ ವಸ್ತುಗಳು ಇದ್ದಕ್ಕಿದ್ದಂತೆ ಕೆಳಗೆ ಬೀಳುತ್ತಿವೆಯಂತೆ. ತುಂಬಾ ಭಯ ಆವರಿಸಿದ್ದು, ನಿದ್ರೆ ಇಲ್ಲದೆ ಇಡೀ ರಾತ್ರಿ ಕಾಲ ಕಳೆಯುವಂತಾಗಿದೆ. ಮನೆಯಲ್ಲಿ ಯಾರೋ ಇರುವಂತೆ ಮತ್ತು ಓಡಾಡುತ್ತಿರುವಂತೆ ಉಮೇಶ್ ಶೆಟ್ಟಿ ಕುಟುಂಬಕ್ಕೆ ಭಾಸವಾಗುತ್ತಿದೆಯಂತೆ. ಸದ್ಯ ದೆವ್ವದ ಕಾಟದಿಂದ ಉಮೇಶ್ ಶೆಟ್ಟಿ ಕುಟುಂಬ ಬೇಸತ್ತು ಹೋಗಿದ್ದು, ಪರಿಹಾರ ಸಿಗದೇ ಪರದಾಡುತ್ತಿದ್ದು, ನೆರವಿಗಾಗಿ ಅಂಗಲಾಚಿದ್ದಾರೆ.
ಊಟ ಮಾಡುವಾಗ ಮಾತ್ರವಲ್ಲ ಅಡುಗೆ ಮಾಡುವಾಗಲೂ ಮಾತನಾಡಬಾರದು… ಇಲ್ಲಿದೆ ಅಚ್ಚರಿಯ ಕಾರಣ! Cooking
ಮನೆಯನ್ನು ಮಾರಿ 33 ಲಕ್ಷ ಹಣದೊಂದಿಗೆ ಲವರ್ ಜತೆ ಪತ್ನಿ ಪರಾರಿ: ಮನನೊಂದು ಪ್ರಾಣಬಿಟ್ಟ ಗಂಡ! Wife Cheating Husband