ನಾನು ಧನುಷ್​ ಜತೆ…. ಸಾಕ್ಷ್ಯಚಿತ್ರ ವಿವಾದದ ಕುರಿತು ಅಚ್ಚರಿ ಹೇಳಿಕೆ ನೀಡಿದ ನಯನತಾರಾ | Nayanthara

Nayanthara

Nayanthara : ಲೇಡಿ ಸೂಪರ್​​ಸ್ಟಾರ್​ ಎಂದೇ ಖ್ಯಾತಿ ಪಡೆದಿರುವ ನಯನತಾರಾ ಅವರ ಜೀವನಾಧಾರಿತ “ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ ಹೆಸರಿನ ಸಾಕ್ಷ್ಯಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಬಿಡುಗಡೆಗೂ ಮುನ್ನವೇ ಈ ಸಾಕ್ಷ್ಯಚಿತ್ರ ವಿವಾದಕ್ಕೀಡಾಯಿತು. ಧನುಷ್ ನಿರ್ಮಾಣದ ನಾನೂಮ್​ ರೌಡಿ ದಾನ್ ಚಿತ್ರದ ದೃಶ್ಯಗಳನ್ನು ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂತು. ಅಲ್ಲದೆ, 10 ಕೋಟಿ ರೂಪಾಯಿ ಪರಿಹಾರಕ್ಕೆ ಆಗ್ರಹಿಸಿದರು. ಈ ವಿಚಾರ ಗೊತ್ತಾದ ಬೆನ್ನಲ್ಲೇ ನಯನತಾರಾ ಕೂಡ ಸುದೀರ್ಘ ಪತ್ರದ ಬರೆದು ನಟ ಧನುಷ್​ ವಿರುದ್ಧ ಹರಿಹಾಯ್ದರು. ಸಾಕ್ಷ್ಯಚಿತ್ರ ಬಿಡುಗಡೆ ಬಳಿಕ ಧನುಷ್​ ಹೈಕೋರ್ಟ್​ ಮೆಟ್ಟಿಲೇರಿದ್ದು, ನಯನತಾರಾ ಮತ್ತು ಪತಿ ವಿಘ್ನೇಶ್​ ಶಿವನ್​ಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ನಯನತಾರಾ ಪರ ವಕೀಲರು ಸಹಉತ್ತರ ನೀಡಿದ್ದಾರೆ. ಸದ್ಯ, ಈ ವಿವಾದ ನ್ಯಾಯಾಲಯದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

ತಾಜಾ ಸಂಗತಿ ಏನೆಂದರೆ, ನಯನತಾರಾ ಅವರು ಈ ವಿವಾದದ ಬಗ್ಗೆ ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನನಗೆ ಸರಿ ಅನಿಸಿದ್ದನ್ನು ಮಾಡಲು ನಾನೇಕೆ ಹೆದರಬೇಕು? ತಪ್ಪು ಮಾಡಿದರೆ ಮಾತ್ರ ಭಯಪಡಬೇಕು. ಪ್ರಚಾರಕ್ಕಾಗಿ ಯಾರದೋ ಹೆಸರನ್ನು ಹಾಳು ಮಾಡಿದ್ದೇನೆ ಎಂದು ಹೇಳುತ್ತಾರೆ. ನನ್ನ ಡಾಕ್ಯುಮೆಂಟರಿ ಪ್ರಚಾರಕ್ಕಾಗಿ ವಿವಾದ ಹುಟ್ಟುಹಾಕಿದೆ ಎಂದು ಆರೋಪ ಮಾಡುತ್ತಾರೆ. ಆದರೆ, ವಿವಾದ ಹುಟ್ಟು ಹಾಕುವುದು ನನ್ನ ನನ್ನ ಉದ್ದೇಶವಾಗಿರಲಿಲ್ಲ ಎಂದು ನಯನತಾರಾ ಹೇಳಿದರು.

ಧನುಷ್ ಅವರ ಮ್ಯಾನೇಜರ್ ಮತ್ತು ಸ್ನೇಹಿತರ ಮೂಲಕ ನಾವು ಹಲವಾರು ಬಾರಿ ಅವರನ್ನು ಸಂಪರ್ಕಿಸಲು ಯತ್ನಿಸಿದೆವು. ಆದರೆ, ನಮಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ. ಚಿತ್ರದಲ್ಲಿ ವಿಘ್ನೇಶ್ ಶಿವನ್ ಬರೆದ ನಾಲ್ಕು ಸಾಲುಗಳನ್ನು ಬಳಸಲು ನಾವು ಅನುಮತಿ ಕೇಳಿದ್ದೆವು. ಇದು ನಮಗೆ ತುಂಬಾ ವೈಯಕ್ತಿಕವಾಗಿದೆ. ಆ ನಾಲ್ಕು ಸಾಲುಗಳು ನಮ್ಮ ಜೀವನವನ್ನು ಪ್ರತಿಬಿಂಬಿಸುತ್ತವೆ ಎಂದು ನಾವು ಭಾವಿಸಿದೆವು. ಈ ಬಗ್ಗೆ ಹೇಳಿದರೆ ಓಕೆ ಎನ್ನುವ ಮೊದಲ ವ್ಯಕ್ತಿ ಧನುಷ್ ಆಗಿರುತ್ತಾರೆ ಎಂದು ನಾವು ಭಾವಿಸಿದ್ದೆವು. ಏಕೆಂದರೆ, ಆತ ನನ್ನ ಸ್ನೇಹಿತ. ಆದರೆ, ಕಳೆದ 10 ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ.

ಇದನ್ನೂ ಓದಿ: ತಡವಾಗಿ ಬಂದ ಯಶಸ್ವಿ ಜೈಸ್ವಾಲ್​; ಹೋಟೆಲ್​ನಲ್ಲೇ ಬಿಟ್ಟುಹೋದ ಟೀಮ್​ ಇಂಡಿಯಾ ಬಸ್​!

ಅವರಿಗೆ ಅವರದೇಯಾದ ಕಾರಣಗಳಿರಬಹುದು. ನಾನು ಅವರ ಮ್ಯಾನೇಜರ್ ಜೊತೆ ಹಲವಾರು ಬಾರಿ ಮಾತನಾಡಿದ್ದೇನೆ. ಸಮಸ್ಯೆ ಏನೆಂದು ತಿಳಿದುಕೊಳ್ಳಲು ನೇರವಾಗಿ ಧನುಷ್ ಜತೆ ಫೋನ್‌ನಲ್ಲಿ ಮಾತನಾಡುವುದಾಗಿ ಕೇಳಿಕೊಂಡೆ. ಆದರೆ, ಸಾಧ್ಯವಾಗಲಿಲ್ಲ. ಧನುಷ್​ ನನ್ನ ಮೇಲೆ ಕೋಪಗೊಂಡಿದ್ದಾನೆಯೇ? ಅಥವಾ ಅವನ ಸುತ್ತಲು ಇರುವ ಜನರು ಅದನ್ನು ಸೃಷ್ಟಿಸುತ್ತಿದ್ದಾರೆಯೇ? ಎಂದು ತಿಳಿದುಕೊಳ್ಳಲು ನಾನು ಬಯಸುತ್ತೇನೆ. ಯಾವುದೇ ತಪ್ಪು ತಿಳುವಳಿಕೆ ಇದ್ದರೆ, ನಾನು ಅದನ್ನು ಮಾತನಾಡಿ ಸರಿಪಡಿಸಲು ಬಯಸುತ್ತೇನೆ. ನಾವಿಬ್ಬರೂ ಉತ್ತಮ ಸ್ನೇಹಿತರಾಗಲು ಬಯಸುವುದಿಲ್ಲ. ಆದರೂ ಎಲ್ಲಾದರೂ ಮುಖಾಮುಖಿ ಭೇಟಿಯಾದಾಗ ಹಾಯ್.. ಹೇಗಿದ್ದೀರಿ? ಎಂದು ಹೇಳಬೇಕಲ್ವಾ? ಅದಕ್ಕಾಗಿಯೇ ನಾನು ಮಾತನಾಡಲು ಪ್ರಯತ್ನಿಸಿದೆ ಎಂದರು.

ಡಾಕ್ಯುಮೆಂಟರಿ ಟ್ರೈಲರ್‌ನಲ್ಲಿ ನೋಡಿದ ಶೂಟಿಂಗ್ ಸ್ಪಾಟ್ ದೃಶ್ಯವನ್ನು ನಮ್ಮ ಫೋನ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ, ಅದು ತಮ್ಮ ದೃಶ್ಯಗಳೆಂದು ಮತ್ತು ಕಾಪಿರೈಟ್ಸ್​ ಇರುವುದಾಗಿ ಹೇಳುತ್ತಾರೆ. ಅಷ್ಟಕ್ಕೂ ನಾವು ಸಿನಿಮಾದಿಂದ ಯಾವುದೇ ದೃಶ್ಯಗಳನ್ನು ತೆಗೆದುಕೊಂಡು ಅದನ್ನು ಬಳಸಲಿಲ್ಲ ಎಂದು ನಯನತಾ ಸ್ಪಷ್ಟನೆ ನೀಡಿದ್ದಾರೆ.

ಧನುಷ್ ಓರ್ವ ದೊಡ್ಡ ನಟ. ಅನೇಕ ಜನರು ಅವರನ್ನು ಗೌರವಿಸುತ್ತಾರೆ. ನನಗೂ ಅವರ ಮೇಲೆ ಗೌರವ ಇದೆ. ಆದರೆ, ಈ ವಿಷಯದಲ್ಲಿ ಧನುಷ್ ಮಾಡಿದ್ದು ಅನ್ಯಾಯವಾಗಿದೆ. ಅದಕ್ಕಾಗಿಯೇ ನಾನು ಧ್ವನಿ ಎತ್ತಿದೆ ಎಂದು ನಯನತಾರಾ ಹೇಳಿದರು.

ಧನುಷ್​-ನಯನತಾರಾ ವಿವಾದ

ಅಂದಹಾಗೆ ನಟಿ ನಯನತಾರಾ ಇತ್ತೀಚೆಗಷ್ಟೆ ನಟ ಧನುಷ್ ವಿರುದ್ಧ ಮೂರು ಪುಟಗಳ ಓಪನ್ ಲೆಟರ್ ಬರೆದು ವಿವಾದಕ್ಕೀಡಾಗಿದ್ದರು. ನಯನತಾರಾ ಅವರು ಜೀವನದ ಕುರಿತ ‘ಬಿಯಾಂಡ್ ದ ಫೈರಿ ಟೇಲ್’ ಡಾಕ್ಯುಮೆಂಟರಿಯಲ್ಲಿ ಧನುಷ್ ನಿರ್ಮಾಣದ, ನಟಿ ಅಭಿನಯಿಸಿದ್ದ ‘ನಾನುಮ್ ರೌಡಿ ದಾನ್’ ಚಿತ್ರದ ಕೆಲ ದೃಶ್ಯಾವಳಿಗಳನ್ನು ಬಳಸಿಕೊಳ್ಳಲು ಅನುಮತಿ ಕೋರಿದ್ದರು. ಧನುಷ್ ಅದಕ್ಕೆ ಒಪ್ಪಿರಲಿಲ್ಲ. ಆದರೂ, ನಯನತಾರಾ ಈ ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯ ಬಳಸಿದ್ದ ಕಾರಣ, ಧನುಷ್ 10 ಕೋಟಿ ರೂ. ನಷ್ಟ ಭರಿಸುವಂತೆ ನೋಟಿಸ್ ನೀಡಿದ್ದರು. ಅದಕ್ಕೆ ಕೆಂಡಾಮಂಡಲವಾದ ನಯನತಾರಾ, ಧನುಷ್ ವಿರುದ್ಧ ಜಾಲತಾಣದಲ್ಲಿ ಕಿಡಿಕಾರಿದ್ದರು. ಆದರೂ ಸುಮ್ಮನಿರದ ಧನುಷ್ ಮತ್ತೊಮ್ಮೆ ನಯನತಾರಾ ವಿರುದ್ಧ ತಿರುಗಿಬಿದ್ದಿದ್ದು, 24 ಗಂಟೆಯೊಳಗೆ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯವನ್ನು ತೆಗೆದುಹಾಕಬೇಕು ಇಲ್ಲವಾದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಲಾಯರ್ ನೋಟಿಸ್ ನೀಡಿದ್ದರು. ಆದರೆ, ಇದಕ್ಕೆ ನಯನತಾರಾ ಕ್ಯಾರೆ ಎನ್ನಲಿಲ್ಲ. ಇದೀಗ ಧನುಷ್​ ತಮ್ಮ ವಕೀಲರ ಮೂಲಕ ಹೈಕೋರ್ಟ್​ ಮೆಟ್ಟಿಲೇರಿದ್ದು, ನಯನತಾರಾಗೆ ನೋಟಿಸ್​ ಕಳುಹಿಸಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್​)

ಡಿವೋರ್ಸ್​ ಸಿಕ್ಕ ಖುಷಿಯಲ್ಲಿ ಮಾಜಿ ಪತ್ನಿಯ ಪ್ರತಿಮೆ ಮುಂದೆ ಪಾರ್ಟಿ ಮಾಡಿ ಸಂಭ್ರಮಿಸಿದ ಯುವಕ! Divorce Party

ಹಣದ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ ಜಗಳವೇ? ಹೌದು ಎಂದಾದರೆ ಹೀಗೆ ಮಾಡಿ… Money Problems

Share This Article

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …

27 ವರ್ಷದ ನಂತ್ರ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…