Divorce Party : ಸದ್ಯ ಭಾರತದಲ್ಲಿ ಮದುವೆ ಸೀಸನ್ ನಡೆಯುತ್ತಿದೆ. ಮದುವೆ ಎಷ್ಟೇ ಅದ್ದೂರಿಯಾಗಿ ನಡೆದರೂ ದಂಪತಿ ಜೀವನ ಪರ್ಯಂತ ಒಟ್ಟಿಗೆ ಇರುತ್ತಾರೆ ಎಂಬ ಗ್ಯಾರಂಟಿಯೇ ಇಲ್ಲ. ಅನೇಕ ಮದುವೆಗಳು ಕೆಲವೇ ಸಮಯದಲ್ಲಿ ಮುರಿದು ಬೀಳುತ್ತವೆ. ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಗಳಿಂದ ಮದುವೆಗಳು ಹೆಚ್ಚು ಕಾಲ ಉಳಿಯುವುದಿಲ್ಲ.
ಇದುವರೆಗೂ ನಾವು ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿಗಳ ಬಗ್ಗೆ ಕೇಳಿದ್ದೆವು. ಪೋಸ್ಟ್ ವೆಡ್ಡಿಂಗ್ ಹಾಗೂ ಪ್ರೀ ವೆಡ್ಡಿಂಗ್ ಫೋಟೋಶೂಟ್ಗಳು ಇಂದು ಎಲ್ಲ ಮದುವೆಗಳಲ್ಲಿ ಸಾಮಾನ್ಯವಾಗಿವೆ. ಆದರೆ, ಎಂದಾದರೂ ನೀವು ಡಿವೋರ್ಸ್ ಪಾರ್ಟಿಯ ಬಗ್ಗೆ ಕೇಳಿದ್ದೀರಾ? ಸದ್ಯ, ವಿದೇಶಗಳಲ್ಲಿ ವಿಚ್ಛೇದನವನ್ನು ಸಂಭ್ರಮಿಸುವ ಟ್ರೆಂಡ್ ಆರಂಭವಾಗಿದೆ. ಡಿವೋರ್ಸ್ ಬಳಿಕ ತಮ್ಮ ಮಾಜಿ ಸಂಗಾತಿಗಾಗಿ ಪಾರ್ಟಿಗಳನ್ನು ಆಯೋಜಿಸುತ್ತಾರೆ. ವಿದೇಶಗಳಲ್ಲಿ ಇಂತಹ ಹಲವು ವಿಚಿತ್ರ ಪ್ರಕರಣಗಳು ವರದಿಯಾಗಿವೆ. ಆದರೆ, ಈಗ ಭಾರತದಲ್ಲೂ ಇದೇ ಟ್ರೆಂಡ್ ಅನುಸರಿಸುತ್ತಿರುವಂತೆ ಕಾಣುತ್ತಿದೆ. ಡಿವೋರ್ಸ್ ಅನ್ನು ಸಂಭ್ರಮಿಸಲು ಹರಿಯಾಣ ಮೂಲದ ಯುವಕನೊಬ್ಬ ಪಾರ್ಟಿ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿವರಕ್ಕೆ ಬರುವುದಾದರೆ, 2020ರಲ್ಲಿ ಮಂಜೀತ್ ಎಂಬ ಯುವಕ ಕೋಮಲ್ ಎಂಬಾಕೆಯನ್ನು ವಿವಾಹವಾದರು. ಆರಂಭದಲ್ಲಿ ವೈವಾಹಿಕ ಜೀವನ ಚೆನ್ನಾಗಿಯೇ ಇತ್ತು. ಆದರೆ, ದಿನಗಳು ಕಳೆದಂತೆ ಇಬ್ಬರಲ್ಲಿ ಭಿನ್ನಾಭಿಪ್ರಾಯಗಳು ಮೂಡಲು ಶುರುವಾದವು. ಒಟ್ಟಿಗೆ ಮುಂದುವರಿಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದ ದಂಪತಿ ಕೊನೆಗೆ ಈ ವರ್ಷ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ, ಮಾಜಿ ಗಂಡ, ಮಾಜಿ ಪತ್ನಿಯ ಪ್ರತಿಮೆ ಮುಂದೆ ಡಿವೋರ್ಸ್ ಪಾರ್ಟಿ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಯುವಕ ತನ್ನ ಮಾಜಿ ಪತ್ನಿಯ ಪ್ರತಿಮೆ ಮುಂದೆ ನಿಂತಿದ್ದಾನೆ. ಅಲ್ಲದೆ, ಅವನ ಹಿಂದೆ ಮದುವೆಯ ಫೋಟೋ ಇರುವ ಬ್ಯಾನರ್ ಇದೆ. ಅದರಲ್ಲಿ ಮದುವೆ ಮತ್ತು ಡಿವೋರ್ಸ್ ಆದ ದಿನಾಂಕವನ್ನು ನಮೂದಿಲಾಗಿದೆ. ಫೋಟೋದ ಮುಂದೆ ಅನೇಕ ಕೇಕ್‌ಗಳು ಸಹ ಇವೆ. ಕೇಕ್ಗಳನ್ನು ಕಟ್ ಮಾಡುವ ಮೂಲಕ ಯುವಕ ವಿಚ್ಛೇದನವನ್ನು ಸಂಭ್ರಮಿಸಿದ್ದಾನೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯಿಂದ ಒಬ್ಬ ವ್ಯಕ್ತಿಗೆ ಎಷ್ಟು ನಿರಾಸೆಯಾಗುತ್ತದೆ ಎಂಬುದು ಅರ್ಥವಾಗುತ್ತದೆ ಎಂದು ಅನೇಕ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದು ತಪ್ಪು ವ್ಯಕ್ತಿಯನ್ನು ಮದುವೆಯಾಗುವುದರ ಪರಿಣಾಮವಾಗಿದೆ ಎಂದು ಇನ್ನೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)
ಹಾವಿನ ಮೊಟ್ಟೆಗಳನ್ನು ತಿನ್ನಬಹುದೇ? ತಿಂದರೆ ಏನಾಗುತ್ತದೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ! Snake Eggs
ಮಾಜಿ ಪತಿ ನಾಗಚೈತನ್ಯ ಬೆನ್ನಲ್ಲೇ 2ನೇ ಮದುವೆಗೆ ರೆಡಿಯಾದ ಸಮಂತಾ! ಸುಳಿವು ಬಿಟ್ಟುಕೊಟ್ಟ ಸೌತ್ ಬ್ಯೂಟಿ | Samantha
ಬೇಕರಿಗಳಲ್ಲಿ ಈ ಸ್ವೀಟ್ಗಳನ್ನು ಖರೀದಿಸುವ ಮುನ್ನ ಎಚ್ಚರ! ಕ್ಯಾನ್ಸರ್ ಕೂಡ ಬರಬಹುದು | Bakery Sweets