ಪತ್ನಿಯ ಮುಂದೆ ಈ ತಪ್ಪುಗಳನ್ನು ಮಾಡಲೇಬೇಡಿ! ಸಂಬಂಧವೇ ಮುರಿದುಬೀಳಬಹುದು ಎಚ್ಚರ…Husband and Wife

Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ ಸಂಬಂಧ ಶ್ರೇಷ್ಠವಾದದ್ದು. ಇಬ್ಬರು ಕೂಡಿ ಬಾಳಿದರೆ ಬದುಕೇ ಸ್ವರ್ಗವಾಗುತ್ತದೆ. ಯಾವುದೇ ಪರಿಸ್ಥಿತಿ ಬರಲಿ ತಾಳ್ಮೆಯಿಂದ ತಮ್ಮ ತಿಳುವಳಿಕೆಯ ಮೂಲಕ ಎಲ್ಲವನ್ನು ಸರಿದೂಗಿಸಿಕೊಂಡು ಹೋದರೆ ಏನೇ ಸಮಸ್ಯೆ ಬಂದರು ಪರಿಹರಿಸಬಹುದು. ಸಂಬಂಧದಲ್ಲಿ ಒಂದು ಚೂರು ಬಿರುಕು ಮೂಡಿದರು ಬದಕೇ ದುಃಖಮಯವಾಗುತ್ತದೆ.

blank

ತನ್ನ ಪತಿಗಾಗಿ ತನ್ನ ಸರ್ವಸ್ವವನ್ನು ಹಂಚಿಕೊಳ್ಳುವ ಪತ್ನಿ, ಗಂಡನ ಕೆಲವೊಂದು ಅಭ್ಯಾಸಗಳನ್ನು ಇಷ್ಟಪಡುವುದಿಲ್ಲ. ಅಂತಹ ಅಭ್ಯಾಸಗಳನ್ನು ದೂರವಿಟ್ಟರೆ ಬದುಕು ಬಂಗಾರವಾಗುತ್ತದೆ. ಇಲ್ಲವಾದರೆ, ಸಂಬಂಧದಲ್ಲಿ ವೈಮನಸ್ಸು ಮೂಡಿ ಕೊನೆಗೊಂದು ದಿನ ಸಂಬಂಧವೇ ಮುರಿದು ಹೋಗಬಹುದು. ಹಾಗಾಗಿ ಅಂತಹ ಅಭ್ಯಾಸಗಳಿಂದ ಗಂಡಂದಿರು ದೂರ ಇರಬೇಕು. ಅಷ್ಟಕ್ಕೂ ಗಂಡಂದಿರು ಮಾಡಬಾರದಂತಹ ತಪ್ಪುಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ಸಮಯ ಕೊಡದಿರುವುದು

ಕೆಲ ಗಂಡಂದಿರು ತುಂಬಾ ಬಿಜಿಯಾಗಿರುತ್ತಾರೆ. ತಮ್ಮ ಹೆಂಡತಿಯಂದಿಗೆ ಸಮಯ ಕಳೆಯುವುದಿಲ್ಲ. ಆದರೆ, ಗಂಡ-ಹೆಂಡತಿ ಸುಖವಾಗಿರಬೇಕಾದರೆ ಮತ್ತು ಹೆಂಡತಿ ಪ್ರೀತಿಯಿಂದ ಇರಬೇಕಾದರೆ ಗಂಡನಾದವನು ಅವಳಿಗಾಗಿ ತನ್ನ ಸಮಯವನ್ನು ಮೀಸಲಿಡಬೇಕು. ಆಕೆಯ ಆಸೆಗಳನ್ನು ಈಡೇರಿಸಬೇಕು ಮತ್ತು ಸಮಸ್ಯೆಗಳಿದ್ದರೆ ಧೈರ್ಯ ತುಂಬಿ ಪರಿಹರಿಸಬೇಕು. ಹೀಗಾಗಿ ಪತ್ನಿಯೊಂದಿಗೆ ಸಮಯ ಕಳೆಯುವುದನ್ನು ಮರೆಯಬಾರದು.

ಸಂವಹನ

ಸಂವಹನ ಅತ್ಯಗತ್ಯ. ಗಂಡ-ಹೆಂಡತಿ ನಡುವೆ ಸರಿಯಾದ ಸಂವಹನ ಇಲ್ಲದಿದ್ದರೆ, ಸಂಘರ್ಷಗಳು ಉಂಟಾಗುತ್ತವೆ. ಅನೇಕ ಗಂಡಂದಿರು ತಮ್ಮ ಹೆಂಡತಿಯರ ಮಾತನ್ನು ಕೇಳುವುದಿಲ್ಲ. ಇದರಿಂದ ಅನೇಕ ಸಂಬಂಧಗಳು ಮುರಿದುಬಿದ್ದಿರುವ ಉದಾಹರಣೆಗಳು ಇವೆ. ಆದರೆ, ಉತ್ತಮ ಸಂವಹನದಿಂದ ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಬಹುದು ಮತ್ತು ಏನೇ ಸಮಸ್ಯೆ ಬಂದರು ಮಾತಿನಲ್ಲಿ ಬಗೆಹರಿಸಿಕೊಂಡು ಮುನ್ನಡೆಯಬಹುದು.

ಇದನ್ನೂ ಓದಿ: ಬಾರ್ಡರ್-ಗಾವಸ್ಕರ್​ ಟ್ರೋಫಿಗೆ ಹೊಸ ಪಾತ್ರದಲ್ಲಿ ಎಂಟ್ರಿ ಕೊಡಲಿದ್ದಾರೆ ಚೇತೇಶ್ವರ ಪೂಜಾರ!

ಮಕ್ಕಳು

ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಷಯದಲ್ಲಿ ಗಂಡನಾದವನು ಹೆಂಡತಿಗೆ ಖಂಡಿತ ಸಹಾಯ ಮಾಡಬೇಕು. ಕೆಲವು ಗಂಡಂದಿರು ತಮ್ಮ ಹೆಂಡತಿಯರನ್ನು ಕೀಳಾಗಿ ಕಾಣುವ ಮೂಲಕ ಸಹಾಯ ಮಾಡುವುದಿಲ್ಲ. ಆ ರೀತಿ ಮಾಡಿದರೂ ಹೆಂಡತಿಗೆ ಕೋಪ ಬರುತ್ತೆ.

ರಹಸ್ಯ

ಹೆಂಡತಿಗೆ ತಿಳಿಯದೆ ಗುಟ್ಟನ್ನು ಬಚ್ಚಿಡುವುದು ಅಥವಾ ಇನ್ನೊಬ್ಬರಿಗೆ ಉಪಕಾರ ಮಾಡುವುದು ಹೆಂಡತಿಯರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಅಂತಹ ತಪ್ಪುಗಳನ್ನು ಮಾಡಬೇಡಿ.

ಮೆಚ್ಚುಗೆ

ನಿಮ್ಮ ಹೆಂಡತಿ ಮಾಡುವುದನ್ನು ನೀವು ಇಷ್ಟಪಟ್ಟರೆ, ಅದನ್ನು ಪ್ರಶಂಸಿಸುವುದು ಬಹಳ ಮುಖ್ಯ. ಹೆಂಡತಿಯರು ಎಷ್ಟೇ ರುಚಿಕರವಾಗಿ ಅಡುಗೆ ಮಾಡಿದರು ಕೆಲವರು ಮೆಚ್ಚುವುದಿಲ್ಲ. ಅಂತಹ ಗಂಡಂದಿರನ್ನು ಹೆಂಡತಿಯರೂ ಎಂದಿಗೂ ಇಷ್ಟಪಡುವುದಿಲ್ಲ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್​ ದೃಢೀಕರಿಸುವುದಿಲ್ಲ.

ತಣ್ಣೀರಿಗೆ ಬಿಸಿ ನೀರು ಬೆರೆಸಿ ಕುಡಿದ್ರೆ ಏನಾಗುತ್ತೆ? ಈ ವಿಚಾರ ನಿಮ್ಗೆ ತಿಳಿದಿರಲೇಬೇಕು ಇಲ್ಲದಿದ್ರೆ ಅಪಾಯ ಫಿಕ್ಸ್! Water

ಸೀಬೆಹಣ್ಣನ್ನು ಯಾರು ತಿನ್ನುವಂತಿಲ್ಲ? ಒಂದು ವೇಳೆ ತಿಂದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Guava

ಸೆಲೆಬ್ರಿಟಿಗಳು ಕುಡಿಯೋ ಕೊಂಬುಚಾ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇದರಲ್ಲಿ ಇಷ್ಟೊಂದು ಪ್ರಯೋಜನವಿದೆಯಾ? Kombucha Tea

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank