Water : ತಣ್ಣೀರಿಗೆ ಬಿಸಿ ನೀರು ಬೆರೆಸಿ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಾದರೆ ನೀವು ಈ ವಿಷಯಗಳನ್ನು ಖಂಡಿತವಾಗಿ ತಿಳಿದಿರಲೇಬೇಕು. ಆಯುರ್ವೇದ ಪ್ರಕಾರ ಬಿಸಿ ನೀರು ಹಾಗೂ ತಣ್ಣೀರನ್ನು ಒಟ್ಟಿಗೆ ಕುಡಿಯಬಾರದು. ತಣ್ಣೀರು ಭಾರವಾಗಿರುತ್ತದೆ ಮತ್ತು ಬಿಸಿನೀರು ಹಗುರವಾಗಿರುತ್ತದೆ. ಇವೆರಡನ್ನು ಬೆರೆಸಿ ಕುಡಿದರೆ ಅಜೀರ್ಣ ಸಮಸ್ಯೆ ಕಾಡುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ತಣ್ಣೀರು ಮತ್ತು ಬಿಸಿನೀರು ಮಿಶ್ರಣವಾದಾಗ ಏನಾಗುತ್ತೆ?
* ಕುದಿಯುವ ನೀರು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಆದರೆ, ಫ್ರಿಡ್ಜ್‌ನಲ್ಲಿ ಕುದಿಸದೆ ಇಟ್ಟಿರುವ ನೀರು ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಆದ್ದರಿಂದ ಇವೆರಡನ್ನು ಬೆರೆಸುವುದು ಆರೋಗ್ಯಕ್ಕೆ ಹಾನಿಕರ.
* ಬಿಸಿನೀರು ಗ್ಯಾಸ್ ಮತ್ತು ಕಫವನ್ನು ಶಮನಗೊಳಿಸುತ್ತದೆ. ಆದರೆ, ತಣ್ಣೀರು ಎರಡನ್ನೂ ಕೆರಳಿಸುತ್ತದೆ ಮತ್ತು ಪಿತ್ತ ದೋಷವನ್ನು ಹೆಚ್ಚಿಸುತ್ತದೆ.
* ಬಿಸಿ ನೀರು ಮತ್ತು ತಣ್ಣೀರಿನ ಮಿಶ್ರಣವು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಮತ್ತು ವಾಯು ದೋಷಕ್ಕೆ ಕಾರಣವಾಗುತ್ತದೆ. ಇದಿಷ್ಟೇ ಅಲ್ಲದೆ, ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ.
* ಬಿಸಿನೀರು ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ಶುದ್ಧಗೊಳಿಸುತ್ತದೆ. ಆದರೆ, ತಣ್ಣೀರು ಅವುಗಳನ್ನು ಸಂಕುಚಿತಗೊಳಿಸುತ್ತದೆ.
ಹಾಗಾದ್ರೆ ನೀರನ್ನು ಹೇಗೆ ಕುಡಿಯಬೇಕು?
ಮಣ್ಣಿನ ಪಾತ್ರೆಯಲ್ಲಿನ ನೀರು ಆರೋಗ್ಯಕ್ಕೆ ಅಮೃತವಿದ್ದಂತೆ. ಇದು ನೈಸರ್ಗಿಕವಾಗಿ ತಣ್ಣಗಾಗುತ್ತದೆ ಮತ್ತು ನೀರನ್ನು ಶುದ್ಧವಾಗಿಡುತ್ತದೆ. ಇದು ನೀರಿನಲ್ಲಿರುವ ಖನಿಜಗಳನ್ನು ಸಹ ರಕ್ಷಿಸುತ್ತದೆ. ಮಣ್ಣಿನ ಮಡಕೆಗಳು ಸ್ಥಿರ ಮತ್ತು ಮಧ್ಯಮ ತಾಪಮಾನವನ್ನು ನಿರ್ವಹಿಸುತ್ತವೆ. ಹಾಗಾಗಿ ಮಣ್ಣಿನ ಪಾತ್ರೆಯಲ್ಲಿರುವ ನೀರು ದೇಹಕ್ಕೆ ಒಳ್ಳೆಯದು ಎಂದು ಆಯುರ್ವೇದ ತಿಳಿಸುತ್ತದೆ. ಮಣ್ಣಿನ ಪಾತ್ರೆಯಲ್ಲಿ ಸಂಗ್ರಹವಾಗಿರುವ ನೀರು ಹೆಚ್ಚು ಆಮ್ಲಜನಕಯುಕ್ತವಾಗಿರುತ್ತದೆ. ಅದಕ್ಕಾಗಿಯೇ ಇದು ಬಿಸಿ ವಾತಾವರಣದಲ್ಲಿಯೂ ತಂಪಾಗಿರುತ್ತದೆ. ಈ ನೀರು ನಿಮ್ಮ ಜೀರ್ಣಕ್ರಿಯೆಗೆ ತೊಂದರೆಯಾಗದಂತೆ ಮತ್ತು ಕಫ ದೋಷವನ್ನು ಹೆಚ್ಚಿಸದೆ ನಿಮ್ಮ ದೇಹವನ್ನು ತಂಪಾಗಿಸುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.
ಒಬ್ಬ ವ್ಯಕ್ತಿ ಸತ್ತ ನಂತರ ಏನಾಗುತ್ತದೆ? ನರ್ಸ್ ಹೇಳಿದ ಭಯಾನಕ ಸಂಗತಿ ವೈರಲ್ | Death
ಮದುವೆಯಾದವರಲ್ಲಿ ಎಂದಿಗೂ ಈ ರೋಗ ಬರೋದಿಲ್ವಂತೆ! ಹೊಸ ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ | New Study