ನಾನು ಬದುಕಿದ್ದು ಹೇಗೆ ಗೊತ್ತಾ? ಕೊನೇ ಕ್ಷಣದಲ್ಲಿ ನಡೆದ ಮಹಾಪವಾಡ ಬಿಚ್ಚಿಟ್ಟ ಮೃತ್ಯುಂಜಯ ರಮೇಶ್​! Ahmedabad Plane Crash

Ahmedabad Plane Crash

Ahmedabad Plane Crash : ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ನಿನ್ನೆ (ಜೂನ್​ 12) ಸಂಭವಿಸಿದೆ. ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ ಕೇವಲ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ.

ಏರ್ ಇಂಡಿಯಾ ವಿಮಾನ AI171 ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್​ಕುಮಾರ್​ ರಮೇಶ್​, ತಾನು ಹೇಗೆ ಪಾರಾದೆ ಎಂಬುದನ್ನು ಸುದ್ದಿ ವಾಹಿನಿಗಳಿಗೆ ಬಹಿರಂಗಪಡಿಸಿದ್ದಾರೆ.

ವಿಮಾನದ ಎಡಭಾಗದಲ್ಲಿ ತುರ್ತು ಬಾಗಿಲಿನ ಪಕ್ಕದಲ್ಲಿ 11A ಸೀಟಿನಲ್ಲಿ ರಮೇಶ್ ಕುಳಿತಿದ್ದರು. ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಪತನವಾಗಿ ಮುರಿದು ಹೋಯಿತು. ಈ ವೇಳೆ ಅವರಿದ್ದ ಸೀಟ್​ ವಿಮಾನ ಅವಶೇಷಗಳಿಂದ ದೂರ ಹಾರಿತು. ಇದರಿಂದಾಗಿ ವಿಮಾನದ ಉಳಿದ ಭಾಗಗಳನ್ನು ಆವರಿಸಿದ ಬೆಂಕಿಯ ಜ್ವಾಲೆಗಳಿಂದ ಬಚಾವ್​ ಆದೆ ಎಂದು ರಮೇಶ್​ ಹೇಳಿದ್ದಾರೆ.

ನಾನು ವಿಮಾನದಿಂದ ಜಿಗಿಯಲಿಲ್ಲ, ಬದಲಿಗೆ ವಿಮಾನವು ಛಿದ್ರವಾದಾಗ ತನ್ನ ಸೀಟಿನಿಂದ ಹೊರಗೆ ಎಸೆಯಲ್ಪಟ್ಟೆ ಎಂದು ರಮೇಶ್​ ವೈದ್ಯರಿಗೆ ಹೇಳಿದರು. ನಾನು ಇಳಿದ ಸ್ಥಳ ತಗ್ಗಾಗಿತ್ತು. ನಾನು ಸೀಟ್ ಬೆಲ್ಟ್ ತೆಗೆದೆ ಮತ್ತು ಒಂದು ಕ್ಷಣ ನನಗೆ ಜೀವ ಭಯವಾಯಿತು. ಆದರೆ, ನಾನು ನೆಲದ ಮಟ್ಟಕ್ಕೆ ಹತ್ತಿರದಲ್ಲಿದ್ದೆ. ಆದ್ದರಿಂದ, ನಾನು ಹೊರಬರಲು ಪ್ರಯತ್ನಿಸಿದೆ ಎಂದು ರಮೇಶ್​ ಅವರು ಡಿಡಿ ನ್ಯೂಸ್‌ಗೆ ತಿಳಿಸಿದರು.

ವಿಮಾನದ ಬಾಗಿಲುಗಳು ಮುರಿದಿರುವುದನ್ನು ನೋಡಿದ ರಮೇಶ್, ಪ್ರಯಾಣಿಕರು ಮತ್ತು ಸಿಬ್ಬಂದಿ ತಮ್ಮ ಸುತ್ತಲೂ ಸಾಯುತ್ತಿರುವುದನ್ನು ನೋಡಿದರೂ, ಕಾಲ್ನಡಿಗೆಯಲ್ಲಿ ಹೊರಬರಲು ಸಾಧ್ಯವಾಯಿತು. ನಾನು ಹೇಗೆ ಬದುಕುಳಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಾನು ಸಾಯುತ್ತೇನೆಂದು ಭಾವಿಸಿದ್ದೆ. ನನ್ನ ಕಣ್ಣೆದುರೇ ಜನರು ಸತ್ತರು ಎಂದು ರಮೇಶ್​ ಹೇಳಿದರು.

ಇದಾದ ಬಳಿಕ ರಮೇಶ್​ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಯಿತು. ವಿಡಿಯೋದಲ್ಲಿ, ಗಾಯಗೊಂಡು ರಕ್ತಸಿಕ್ತನಾಗಿರುವ ರಮೇಶ್, ಆಂಬ್ಯುಲೆನ್ಸ್ ಕಡೆಗೆ ಕುಂಟುತ್ತಾ ಬರುತ್ತಿರುವ ದೃಶ್ಯವಿದೆ. ಈ ವೇಳೆ ಸ್ಥಳೀಯ ಜನರು ವಿಮಾನದಲ್ಲಿದ್ದ ಉಳಿದವರ ಬಗ್ಗೆ ಅವರನ್ನು ಕೇಳುತ್ತಿದ್ದಾರೆ. ಪ್ರಸ್ತುತ, ರಮೇಶ್​ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಓದುವ ಛಲ, ಪೋಷಕರಿಗೆ ಹೆಗಲಾಗುವ ತುಡಿತ! ವಿಮಾನ ದುರಂತದಲ್ಲಿ ಕಮರಿ ಹೋಯ್ತು ಚಿಗುರಿದ ಕನಸು | Plane Crash

ಅಂದಹಾಗೆ, ವಿಶ್ವಾಸ್ ಕುಮಾರ್ ರಮೇಶ್ ಅವರಿಗೆ 40 ವರ್ಷ ವಯಸ್ಸು. ವಿಶ್ವಾಸ್ ಓರ್ವ ಬ್ರಿಟಿಷ್ ಪ್ರಜೆ. ಕಳೆದ 20 ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಪತ್ನಿ ಮತ್ತು ಮಕ್ಕಳು ಸಹ ಲಂಡನ್‌ನಲ್ಲಿ ನೆಲೆಸಿದ್ದಾರೆ. ವಿಶ್ವಾಸ್ ಕೆಲವು ದಿನಗಳ ಹಿಂದೆ ಗುಜರಾತ್‌ನಲ್ಲಿರುವ ತಮ್ಮ ಕುಟುಂಬವನ್ನು ಭೇಟಿ ಮಾಡಲು ಬ್ರಿಟನ್‌ನಿಂದ ಬಂದಿದ್ದರು. ಹಿಂದಿರುಗುವ ವೇಳೆ ಈ ಅಪಘಾತ ಸಂಭವಿಸಿದೆ. ವಿಶ್ವಾಸ್ ಅವರ ಸಹೋದರ ಕೂಡ ವಿಮಾನದಲ್ಲಿದ್ದರು. ಆದರೆ, ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಅವರನ್ನು ಹುಡುಕಿಕೊಡಿ ಎಂದು ವಿಶ್ವಾಸ್​ ಪತನ ಬಳಿಕ ಮನವಿ ಮಾಡಿದರು. ಆದರೆ, ಅವರ ಸಹೋದರ ದುರಂತ ಸಾವಿಗೀಡಾಗಿದ್ದಾರೆ. ಇನ್ನು ಅಪಘಾತದ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಏರ್ ಇಂಡಿಯಾ ಘೋಷಿಸಿದೆ.

ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾ ದುರಂತ

ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿದೆ. ಗುರುವಾರ (ಜೂನ್​ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೇ ಮೊದಲು.

* ಎಲ್ಲಿ ದುರಂತ?: ಅಹಮದಾಬಾದ್​ನ ಮೇಘಾನಿ ನಗರ
* ಎಷ್ಟೊತ್ತಿಗೆ?: ಗುರುವಾರ ಮಧ್ಯಾಹ್ನ 1.38
* ಯಾವ ವಿಮಾನ?: ಏರ್ ಇಂಡಿಯಾ ಎ1-171
* ಎಲ್ಲಿಗೆ ಹೊರಟಿತ್ತು?: ಲಂಡನ್​ನ ಗ್ಯಾಟ್ವಿಕ್ ವಿಮಾನ ನಿಲ್ದಾಣ
* ಪತನಕ್ಕೆ ಕಾರಣ?: ಪ್ರಾಥಮಿಕ ತನಿಖೆ ಪ್ರಕಾರ ಇಂಜಿನ್​ನಲ್ಲಿ ತಾಂತ್ರಿಕ ದೋಷ
* 32 ಸೆಕೆಂಡ್: ಟೇಕ್ ಆಫ್ ಆದ 32 ಸೆಕೆಂಡ್​ನಲ್ಲಿ ಪತನ

ವಿಮಾನದಲ್ಲಿದ್ದವರು ಯಾರು?

* 230 ಪ್ರಯಾಣಿಕರು, 12 ಸಿಬ್ಬಂದಿ
* 169-ಭಾರತೀಯರು
* 52 -ಬ್ರಿಟಿಷ್ ಪ್ರಜೆಗಳು
* 7- ಪೋರ್ಚುಗಲ್ ಪ್ರಜೆಗಳು
* 1-ಓರ್ವ ಕೆನಡಾ ನಾಗರಿಕ

ನನ್ನ ಕಣ್ಣುಗಳನ್ನು ತೆರೆದಾಗ… ವಿಮಾನ ಪತನದ ಭೀಕರತೆ ಬಿಚ್ಚಿಟ್ಟ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್​! Ahmedabad Plane Crash

ಒಂದೇ ವಾರದಲ್ಲಿ ನಿಜವಾಯ್ತು ವಿಮಾನ ಪತನದ ಭವಿಷ್ಯವಾಣಿ: ಜಾಲತಾಣದಲ್ಲಿ ಸಂಚಲನ ಮೂಡಿಸಿದ ಶರ್ಮಿಷ್ಠಾ! Ahmedabad Plane Crash

 

Share This Article

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…

ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips

Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…