ಹಿಂದು ಯುವಕ-ಮುಸ್ಲಿಂ ಯುವತಿ ಸುತ್ತಾಟ; ಹಲ್ಲೆಗೆ ಮುಂದಾದ ಮುಸ್ಲಿಂ ಯುವಕರು!

CBK
Published on

ಚಿಕ್ಕಬಳ್ಳಾಪುರ: ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಒಟ್ಟಾಗಿ ಸುತ್ತಾಡುತ್ತಿರುವುದನ್ನು ಕಂಡ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಗೋಬಿ ಮಂಚೂರಿ ಅಂಗಡಿಯಲ್ಲಿ ತಿಂಡಿ ಸವಿದು ಹೊರ ಬರುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ಹುಡುಗರು ಗಲಾಟೆ ಮಾಡಲು ಆರಂಭಿಸಿದ್ದು, ಯುವಕ-ಯುವತಿಯನ್ನು ತಡೆದು ಹಲ್ಲೆ ನಡೆಸಿದ್ದಾರೆ.

ಸದ್ಯ ಯುವಕ-ಯುವತಿಯನ್ನು ತಡೆದು ಬೈಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳು ಹಳೇಯದೋ ಅಥವಾ ಇತ್ತೀಚಿನದೋ ಎಂಬುದರ ಬಗ್ಗೆ ಅನುಮಾನ ಮೂಡಿದ್ದು, ಸಾಕಷ್ಟು ಚರ್ಚೆಗಳಾಗುತ್ತಿವೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮುಸ್ಲಿಂ ಯುವಕರು ಹಿಂದು ಹುಡುಗ ಹಾಗೂ ಮುಸ್ಲಿಂ ಯುವತಿಯನ್ನು ತರಾಟೆಗೆ ತೆಗೆದುಕೊಂಡು ಪಾಲಕರು ಫೋನ್ ನಂಬರ್ ನೀಡುವಂತೆ ಆಗ್ರಹಿಸಿರುವುದು ಕಂಡು ಬಂದಿದೆ. ಈ ವೇಳೆ ಈ ವೇಳೆ ಯುವತಿ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾಳೆ.

ಈ ವೇಳೆ ಮುಸ್ಲಿಂ ಯುವಕರ ಗುಂಪು ಹಿಂದು ಹುಡುಗನನ್ನು ಎಳೆದಾಡಿಕೊಂಡು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ವೈರಲ್ ಆಗಿರುವ ಇನ್ನೊಂದು ವಿಡಿಯೋದಲ್ಲಿ ಮುಸ್ಲಿಂ ಯುವತಿ ಬಲವಂತದಿಂದ ತಪ್ಪೊಪ್ಪಿಗೆ ನೀಡುತ್ತಿರುವುದು ಕಂಡು ಬಂದಿದೆ. ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ವಿಡಿಯೋಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net