blank

Haryana Assembly Poll | 90 ಕ್ಷೇತ್ರಗಳಿಗೆ ಮತದಾನ ಆರಂಭ, 1,031 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

blank

ಚಂಡೀಗಢ: 90 ಸದಸ್ಯಬಲವಿರುವ ಹರಿಯಾಣ ವಿಧಾನಸಭೆಗೆ (Haryana Assembly Poll) ಇಂದು (ಅಕ್ಟೋಬರ್​ 05) ಮತದಾನ ನಡೆಯುತ್ತಿದ್ದು, ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್’ನ ಭೂಪಿಂದರ್ ಸಿಂಗ್ ಹೂಡಾ ಮತ್ತು ಕುಸ್ತಿಪಟು ವಿನೇಶ್ ಪೋಗಟ್​ ಸೇರಿದಂತೆ 1,031 ಅಭ್ಯರ್ಥಿಗಳ ನಿರ್ಧಾರವಾಗಲಿದೆ.

ಹ್ಯಾಟ್ರಿಕ್​ ನಿರೀಕ್ಷಯಲ್ಲಿರುವ ಬಿಜೆಪಿಗೆ ಕಾಂಗ್ರೆಸ್​ ನೇರ ಸವಾಲೊಡ್ಡಿದ್ದು, ದಶಕದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಇರಾದೆಯಲ್ಲಿದೆ. ಇದಲ್ಲದೆ ಈ ಚುನಾವಣೆಯು ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ರಾಜ್ಯವನ್ನು ಮತ್ತೊಮ್ಮೆ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಕಸರತ್ತನ್ನು ಮಾಡುತ್ತಿದೆ.

ರಾಜ್ಯದಲ್ಲಿ 8,821 ಶತಾಯುಷಿಗಳು ಸೇರಿದಂತೆ 2,03,54,350 ಮತದಾರರಿದ್ದು, 101 ಮಹಿಳೆಯರು ಸೇರಿದಂತೆ 1,031 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನಕ್ಕಾಗಿ  20,632 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,  ಬಿಜೆಪಿ, ಕಾಂಗ್ರೆಸ್,ಎಎಪಿ, ಐಎನ್ಎಲ್’ಡಿ-ಬಿಎಸ್’ಪಿ ಮತ್ತು ಜೆಜೆಪಿ-ಆಜಾದ್ ಸಮಾಜ ಪಕ್ಷಗಳು ಕಣದಲ್ಲಿವೆ.

ಇದನ್ನೂ ಓದಿ: ಹಾರ್ದಿಕ್​ ಬೌಲಿಂಗ್​ ಕಂಡು ಅತೃಪ್ತಿ ಹೊರಹಾಕಿದ Team India ಕೋಚ್​; ಬಾಂಗ್ಲಾ ವಿರುದ್ಧದ ಸರಣಿಯಿಂದ ಪಾಂಡ್ಯ ಡ್ರಾಪ್​​?

2019ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್​ ಹಾಗೂ ಜೆಜೆಪಿ ತಲಾ 10 ಸ್ಥಾನಗಳಲ್ಲಿ ಜಯ ಗಳಿಸಿದ್ದವು.  ಬಹುಮತ ಬಾರದ ಕಾರಣ ಬಿಜೆಪಿ ಜೆಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಆದರೆ, ಇದೀಗ ಬಿಜೆಪಿ ಹಾಗೂ ಜೆಜೆಪಿ ಮೈತ್ರಿ ಮುರಿದುಕೊಂಡು ಪ್ರತ್ಯೇಕವಾಗಿ ಕಣಕ್ಕಿಳಿದಿವೆ.

ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು (ಅಕ್ಟೋಬರ್​ 05) ಸಂಜೆ ಎಕ್ಸಿಟ್​ ಪೋಲ್​ ವರದಿಗಳು ಬಿಡುಗಡೆಯಾಗಲಿದ್ದು, ಯಾವ ಪಕ್ಷಕ್ಕೆ ಜನ ಮಣೆ ಹಾಕಿದ್ದಾರೆ ಎಂದು ಕಾದು ನೋಡಬೇಕಿದೆ.

Share This Article

ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep

Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…

7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ದೇಹ, ಮನಸ್ಸಿನ ಮೇಲೆ ಪರಿಣಾಮ!  ಸಂಶೋಧನೆಯಿಂದ ಬಹಿರಂಗ.. Sleeping  

Sleeping : ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯ. ನಿದ್ರೆಯ ಕೊರತೆಯು ದೇಹದಲ್ಲಿ ಅನೇಕ ರೋಗಗಳನ್ನು ಉಂಟುಮಾಡುತ್ತದೆ.…

Beauty Tips: ಲಿಪ್‌ಸ್ಟಿಕ್ ಹೆಚ್ಚು ಬಳಸುತ್ತೀರಾ? ಹುಷಾರಾಗಿರಿ.. ಇಲ್ಲಿದೆ ನೋಡಿ ಬೆಚ್ಚಿ ಬೀಳಿಸೋ ವರದಿ

Beauty Tips : ಹುಡುಗಿಯರು ಬಳಸುವ ಸೌಂದರ್ಯವರ್ಧಕಗಳಲ್ಲಿ ಲಿಪ್‌ಸ್ಟಿಕ್ ಕೂಡ ಒಂದು. ತುಟಿಗಳು ಸುಂದರವಾಗಿ ಮತ್ತು…