ಗ್ವಾಲಿಯಾರ್: ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು (Test Series) ಗೆದ್ದು ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ (team India) ಟಿ20 ಸೀರೀಸ್ಗೆ ತಯಾರಿ ಆರಂಭಿಸಿದೆ. ಗ್ವಾಲಿಯಾರ್ನ (Gwalior) ನ್ಯೂ ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಈಗಾಗಲೇ ಭಾರತ ತಂಡ ಅಭ್ಯಾಸ ಆರಂಭಿಸಿದೆ.
ಈಗಾಗಲೇ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಸೂರ್ಯಕುಮಾರ್ ಯಾದವ್ (Suryakumar Yadav) ತಂಡವನ್ನು ಮುನ್ನಡೆಸಲಿದ್ಧಾರೆ. ಐಪಿಎಲ್ನಲ್ಲಿ ತಮ್ಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದ ಮಯಾಂಕ್ ಯಾದವ್, ಹರ್ಷಿತ್ ರಾಣಾ ಸೇರಿದಂತೆ ಐಪಿಎಲ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಯುವ ಪ್ರತಿಭೆಗಳಿಗೆ ರಾಷ್ಟ್ರೀಯ ತಂಡದಿಂದ ಕರೆ ಬಂದಿದ್ದು, ಈಗಾಗಲೇ ತಯಾರಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ Harshika Poonacha
ಇತ್ತ ರಾಷ್ಟ್ರೀಯ ತಂಡಕ್ಕೆ ವಾಪಸ್ ಆಗಿರುವ ಹಾರ್ದಿಕ್ ಪಾಂಡ್ಯ (Hardik Pandya) ನೆಟ್ಸ್ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದು, ಬೌಲಿಂಗ್ಕೋಚ್ ಮಾರ್ನ್ ಮಾರ್ಕೆಲ್ ಮಾತ್ರ ಪಾಂಡ್ಯ ಬೌಲಿಂಗ್ ಕಂಡ ಅತೃಪ್ತಿ ಹೊರಹಾಕಿದ್ದಾರೆ. ನೆಟ್ಸ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಪಾಂಡ್ಯ ಹೆಚ್ಚಾಗಿ ಸ್ಪಂಪ್ಸ್ಗೆ ಚೆಂಡನ್ನು ಎಸೆಯುತ್ತಿದ್ದುದನ್ನು ಗಮನಿಸಿದ ಬೌಲಿಂಗ್ ಕೋಚ್ ಕೆಲಕಾಲ ಚರ್ಚಿಸಿ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದರು. ಈ ಕುರಿತು NDTV ವರದಿ ಮಾಡಿದೆ.
ಹಾರ್ದಿಕ್‌ನೊಂದಿಗಿನ ಮಾತುಕತೆಯ ಬಳಿಕ ಮಾರ್ಕೆಲ್ ಯುವ ವೇಗಿಗಳಾದ ಅರ್ಷ್ದೀಪ್ ಸಿಂಗ್, ಮಯಾಂಕ್ ಯಾದವ್, ಹರ್ಷಿತ್ ರಾಣಾ ಅವರೊಟ್ಟಿಗೆ ಚರ್ಚಿಸಲು ಶುರು ಮಾಡಿದರು. ಈ ಮೂವರು ಯುವ ವೇಗಿಗಳ ಜೊತೆ ಕೆಲಕಾಲ ಚರ್ಚಿಸಿದ ಮಾರ್ಕೆಲ್ ಬೌಲಿಂಗ್ ತಂತ್ರ ಮತ್ತು ಎದುರಾಳಿಯ ರನ್ ವೇಗಕ್ಕೆ ಬ್ರೇಕ್ ಹಾಕುವುದು ಹೇಗೆ ಎಂಬುದರ ಕುರಿತು ಚರ್ಚೆ ಮಾಡಿದ್ಧಾರೆ.