ಕ್ಯಾಪ್ಟನ್ಸಿ ಟಾಸ್ಕ್​ ವೇಳೆ ಹೆಣ್ಮಕ್ಕಳ ಒಳ ಉಡುಪಿನ ಬಗ್ಗೆ ಜಗದೀಶ್ ಮಾತು; Bigg Bossನಿಂದ ಎಲಿಮಿನೇಟ್​ ಆಗ್ತಾರಾ?

Lawyer Jagadish
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​​ ಸೀಸನ್​-11 (Bigg Boss Season-11) ಆರಂಭವಾಗಿ ಐದು ದಿನಗಳಾಗಿದ್ದು, ಮೊದಲ ವಾರವೇ ಸ್ಫರ್ಧಿಗಳ ನಡುವಿನ ವಾಕ್ಸಮರಕ್ಕೆ ಕಾರ್ಯಕ್ರಮ ಹೆಚ್ಚು ಸದ್ದು ಮಾಡುತ್ತಿದೆ. ಈ ಬಾರಿ ಕಾರ್ಯಕ್ರಮವನ್ನು ಸ್ವರ್ಗ-ನರಕ (Hell-Heaven) ಎಂಬ ಥೀಮ್​ ಅಡಿಯಲ್ಲಿ ವಿಂಗಡಿಸಲಾಗಿದ್ದು, ಒಂದಿಲ್ಲೊಂದು ಕಾರಣಕ್ಕೆ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಪೈಕಿ ಹೆಚ್ಚು ಸದ್ದು ಮಾಡುತ್ತಿರುವವರೆಂದರೆ ಅದು ಜಗದೀಶ್​ ಎಂದರೆ ತಪ್ಪಾಗಲಾರದು.

ಈ ಹಿಂದೆ ಬಿಗ್​ಬಾಸ್​ಗೆ ನನ್ನನ್ನು ಎದುರುಹಾಕಿಕೊಂಡು ನೀವು ಶೋ ನಡೆಸಲು ಸಾಧ್ಯವಿಲ್ಲ. ಹೊರಹೋದಮೇಲೆ ಬಿಗ್​ಬಾಸ್​ಅನ್ನು ಸಂಪೂರ್ಣವಾಗಿ ಎಕ್ಸ್​ಪೋಸ್​ ಮಾಡುತ್ತೇನೆಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದ ಜಗದೀಶ್​ ಇದೀಗ ಮತ್ತೊಂದು ವಿಚಾರಕ್ಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಗದೀಶ್​ ಆಡಿರುವ ಮಾತುಗಳ ಬಗ್ಗೆ ಚರ್ಚೆ ಆಗುತ್ತಿದ್ದು, ಇತರೆ ಸ್ಫರ್ಧಿಗಳು ಜಗದೀಶ್​ ಆಡಿದ ಮಾತುಗಳಿಗೆ ಕಿಡಿಕಾರಿದ್ದು, ಬಿಗ್​ಬಾಸ್​ಗೆ ಗಮನಕ್ಕೆ ತಂದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ಗೆ (Captaincy Task) ಅವಕಾಶ ನೀಡಲಾಗಿತ್ತು. ಇದರಲ್ಲಿ ಸ್ವರ್ಗ ನಿವಾಸಿಗಳು ಮಾತ್ರ ಭಾಗಿ ಆಗಲು ಅವಕಾಶ ಇತ್ತು. 10 ಮಂದಿಯಲ್ಲಿ ಆರು ಜನರು ಮಾತ್ರ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಇರಬಹುದು ಎಂದು ಬಿಗ್ ಬಾಸ್ ಆದೇಶ ಕೊಟ್ಟರು. ಇಷ್ಟೇ ಅಲ್ಲ, ಆರು ಮಂದಿಯನ್ನು ಸ್ವರ್ಗ ನಿವಾಸಿಗಳ ಒಮ್ಮತದ ನಿರ್ಧಾರದಿಂದ ಆಯ್ಕೆ ಮಾಡಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದರು. ವೋಟಿಂಗ್​ ಆಧಾರದ ಮೇಲೆ ಕ್ಯಾಪ್ಟನ್ಸಿ ಟಾಸ್ಕ್​ಗೆ ಸ್ಫರ್ಧಿಗಳನ್ನು ಆಯ್ಕೆ ಮಾಡೋಣ ಎಂದು ಸ್ವರ್ಗ ವಾಸಿಗಳು ಒಮ್ಮತದ ನಿರ್ಧಾರಕ್ಕೆ ಬಂದರು. ಈ ವಿಚಾರ ಜಗದೀಶ್​ ಅವರ ಕೆಂಗಣ್ಣಿಗೆ ಗುರಿಯಾಗಿದ್ದು, ಉಗ್ರಂ ಮಂಜು ವಿರುದ್ಧ ಸಿಡಿದೆದ್ದರು.

ನೀನು ಸಿನಿಮಾದಲ್ಲಿ ಮಾತ್ರ ಉಗ್ರಂ. ನಿಜ ಜೀವನದಲ್ಲಿ ನಾನು ನಿನಗೆ ಉಗ್ರಂ ತೋರಿಸುತ್ತೇನೆ. ಇದಕ್ಕೆ ಶಾಂತವಾಗಿ ಉತ್ತರಿಸಿದ ಮಂಜು ಬ್ರೋ ಬ್ರೋ ಎಂದಷ್ಟೇ ಹೇಳಿ ಸುಮ್ಮನಾದರು. ಬ್ರೋ ಪ್ಯಾಂಟೀಸ್ ಎಲ್ಲ ನೋಡಿದೀನಿ. ನನ್ನ ಹೆಂಡತಿ ಹಾಕೋದು ಇದನ್ನೇ ಎಂದು ಜಗದೀಶ್​ ಹೇಳಿದರು. ಈ ವಿಚಾರ ಮನೆಯ ಇತರೆ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದು, ನಿಜವಗಾಲೂ ಇನ್​ಸೆಕ್ಯೂರ್ ಫೀಲ್ ಆಗ್ತಿದೆ. ಹುಡುಗರ ವೈಯಕ್ತಿಕ ವಿಚಾರಕ್ಕೆ ಬರುತ್ತಿದ್ದಾರೆ. ನೀವು ಏನಾದರೂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಫರ್ಧಿ ಭವ್ಯಾ ಗೌಡ ಹೇಳಿದ್ದಾರೆ. ಅಂತಿಮವಾಗಿ ಶನಿವಾರ ಸಂಜೆ ಕಿಚ್ಚ ಸುದೀಪ್​ ನಡೆಸಿಕೊಡುವ ಪಂಚಾಯ್ತಿಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಹೇಳಲಾಗಿದ್ದು, ಜಗದೀಶ್​ ಅವರಿಗೆ ಸ್ಪೆಷಲ್​ ಕ್ಲಾಸ್​ ಫಿಕ್ಸ್​ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net