ನವದೆಹಲಿ: ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದ್ದು, ಪ್ರವಾಸಿ ತಂಡದ ಎದುರು ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ. ಪಾಕಿಸ್ತಾನದ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಬರೆದು ಸಂಪೂರ್ಣ ವಿಶ್ವಾಸದಲ್ಲಿದ್ದ ಬಾಂಗ್ಲಾದೇಶ (Bangladesh) ತನ್ನ ಕಳಪೆ ಪ್ರದರ್ಶನದಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದು, ಟೆಸ್ಟ್ ಪಂದ್ಯವನ್ನು ಟಿ20 ಮಾದರಿಯಲ್ಲಿ ಆಡಿ ದಾಖಲೆಗಳನ್ನು ಸರಿಗಟ್ಟಿದ ಟೀಮ್ ಇಂಡಿಯಾದ ಪ್ರದರ್ಶನವನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದು, ಇದಕ್ಕೆ ಪಾಕಿಸ್ತಾನದ ಮಾಜಿ ನಾಯಕ ಕೂಡ ಹೊರತಾಗಿಲ್ಲ.
ಭಾರತದ (Team India) ಅಲ್ರೌಂಡ್ ಪ್ರದರ್ಶನದ ಕುರಿತು ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಮಾಜಿ ನಾಯಕ ರಮೀಜ್ ರಾಜಾ ಆರ್. ಅಶ್ವಿನ್ ಅವರನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ ಭಾರತದ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Mobile ಬಳಸದಂತೆ ಗದರಿದ ತಾಯಿಯ ತಲೆಗೆ ಬ್ಯಾಟ್ನಿಂದ ಹೊಡೆದ ಮಗ; Video Viral
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಫೋಸ್ಟ್ ಮಾಡಿರುವ ವಿಡಿಯೋದಲ್ಲಿ ಈ ಕುರಿತು ಮಾತನಾಡಿರುವ ರಮೀಜ್, ಬಾಂಗ್ಲಾದೇಶ ವಿರುದ್ಧ ಅಶ್ವಿನ್‌ಗೆ ಅದ್ಭುತ ಟೆಸ್ಟ್ ಸರಣಿಯಾಗಿದೆ. ಈ ಗೆಲುವಿನ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳು ರೋಹಿತ್ ಶರ್ಮಾ ಅವರನ್ನು ಹೇಗೆ ಬೆಂಬಲಿಸಿದರು ಎಂಬುದನ್ನು ನಾವು ಇಲ್ಲಿ ಪ್ರಮುಖವಾಗಿ ನೋಡಬೇಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೇಗದ ಬೌಲರ್‌ಗಳು ಪ್ರಾಬಲ್ಯ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್‌ಗಳು ಮಿಂಚಿದರು. ನನ್ನ ಪ್ರಕಾರ ಅಶ್ವಿನ್‌ಗೆ ಇದು ಅದ್ಭುತ ಟೆಸ್ಟ್ ಸರಣಿಯಾಗಿದೆ.
ಅದ್ಭುತ ಪಾಂಡಿತ್ಯ ಮತ್ತು ಅದ್ಭುತ ಆಲ್‌ರೌಂಡ್ ಸಾಮರ್ಥ್ಯ, ಬಹುಶಃ ಅವರು ಆಲ್‌ರೌಂಡರ್ ಆಗಿ ಪಡೆಯಬೇಕಾದಂತಹ ಸ್ಥಾನಮಾನವನ್ನು ಕ್ರಿಕೆಟ್‌ನಲ್ಲಿ ಪಡೆದಿಲ್ಲ. ಆತ ಹೆಚ್ಚು ಹೆಮ್ಮೆ ಪಡುವ ಆಟಗಾರನಲ್ಲ. ಆತ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಾನೆ. ಭಾರತವು ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆದ್ದಿದೆ. ಈ ಹಂತದಲ್ಲಿ, ಭಾರತವು ಬಲಿಷ್ಠ ತಂಡವಾಗಿದ್ದು, ತವರಿನಲ್ಲಿ ಸೋಲಿಸುವುದು ಕಷ್ಟದ ಮಾತಾಗಿದೆ. ಅಂತಹ ಯಶಸ್ವಿ ತಂಡಕ್ಕೆ ಕಠಿಣ ಸಮಯವನ್ನು ನೀಡಲು ಬಾಂಗ್ಲಾದೇಶ ಬಹಳಷ್ಟು ಮಾಡಬೇಕಾಗಿತ್ತು. ನನ್ನ ಪ್ರಕಾರ ಭಾರತಕ್ಕೆ ಸವಾಲು ಹಾಕುವ ಸಾಮರ್ಥ್ಯ ಬಾಂಗ್ಲಾದೇಶಕ್ಕೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.