

ನವದೆಹಲಿ: ಭಾರತ ಕ್ರಿಕೆಟ್ ತಂಡವು (Team India) ಸುದೀರ್ಘ ಟೆಸ್ಟ್ ಋತುವಿನ ಮಧ್ಯದಲ್ಲಿದ್ದು, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ (Test Series) ನಂತರ ಅಕ್ಟೋಬರ್ 16ರಿಂದ ತವರಿನಲ್ಲಿ ನ್ಯೂಜಿಲೆಂಡ್ (New Zealand) ಸವಾಲನ್ನು ಎದುರಿಸಲಿದೆ. ಇದಾದ ಬಳಿಕ ನವೆಂಬರ್ 26ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border-Gavaskar Trophy) ಭಾಗಿಯಾಗಲು ರೋಹಿತ್ ಶರ್ಮ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದು, ಇದಾದ ಬಳಿಕ ಚಾಂಪಿಯನ್ಸ್ ಟ್ರೋಫಿ (Champions Trophy), ಆ ಬಳಿಕ ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ.
2007ರಲ್ಲಿ ಕೊನೆಯದಾಗಿ ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿರುವ ಭಾರತ ಆ ಬಳಿಕ ಯಾವುದೇ ಸೀರೀಸ್ ಗೆದ್ದಿಲ್ಲ. ಟೆಸ್ಟ್ ಸರಣಿಯ ಸುದೀರ್ಘ ಬರವನ್ನು ರೋಹಿತ್ ಶರ್ಮ ಪಡೆ ನೀಗಿಸಲು ಈಗಾಗಲೇ ಯೋಜನೆ ರೂಪಿಸಿಕೊಂಡಿದ್ದು, ಇದು ವಿರಾಟ್ ಕೊಹ್ಲಿ (Virat Kohli) ಆಡುವ ಕೊನೆಯ ಟೆಸ್ಟ್ ಸರಣಿ ಎಂದು ಹೇಳುವ ಮೂಲಕ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರ ಎಲ್ಲರ ಗಮನ ಸೆಳೆದಿದ್ದಾರೆ.
ನಾವು ನೋಡಿರುವಂತೆ ಯಾವುದಾದರು ಟೆಸ್ಟ್ ಸರಣಿ ಆರಂಭವಾಗುವುದಕ್ಕೆ ಮುನ್ನ ಮಾಜಿ ಹಾಗೂ ಹಾಲಿ ಆಟಗಾರರು ಒಂದಿಲ್ಲೊಂದು ಹೇಳಿಕೆ ಕೊಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಇವರುಗಳು ಗುರಿಯಾಗಲಿದ್ದು, ಇದೀಗ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ (Stuart Broad) ವಿರಾಟ್ ಕೊಹ್ಲಿ (Virat Kohli) ಕುರಿತು ಮಾತನಾಡುವ ಮೂಲಕ ಕ್ರೀಡಾ ಲೋಕದಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದ್ದಾರೆ.
ನನ್ನ ಪ್ರಕಾರ ಇದು ವಿರಾಟ್ ಕೊಹ್ಲಿ (Virat Kohli) ಅವರ ಕೊನೆಯ ಟೆಸ್ಟ್ ಸರಣಿ (Test Series)ಆಗಿರಬಹುದು ಎಂದು ಭಾವಿಸುತ್ತೇನೆ. ಆತ ಪ್ರತಿಭಾನ್ವಿತನಾಗಿದ್ದು, ಈ ಕ್ರೀಡೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾನೆ. ಇಂಗ್ಲೆಂಡ್ ತಂಡವು ಪ್ರಸ್ತುತ ಯುವ ಹಾಗೂ ಅನಾನುಭವಿ ತಂಡವನ್ನು ಹೊಂದಿದ್ದು, ದೊಡ್ಡ ಪ್ರಮಾಣದಲ್ಲಿ ಪ್ರತಿಭೆಯನ್ನು ಹೊಂದಿದೆ ಎಂದರೆ ತಪ್ಪಾಗಲಾರದು.
ಅಭಿಮಾನಿಯಾಗಿ ನಾನು ಸರಣಿಯ ಪ್ರತಿ ಒಂದು ಎಸೆತವನ್ನು ನೋಡಲು ಇಷ್ಟಪಡುತ್ತೇನೆ. ನನ್ನ ಪ್ರಕಾರ ಇದು ಬಹಳ ವಿಶೇಷವಾದ ಸರಣಿಯಾಗಲಿದೆ. ಭಾರತವು ಲಾರ್ಡ್ಸ್‌ನಲ್ಲಿ (2021 ರಲ್ಲಿ) ಗೆದ್ದು ಸರಣಿಯನ್ನು ಡ್ರಾ ಮಾಡಿಕೊಂಡಾಗ ಇಂಗ್ಲೆಂಡ್‌ಗೆ ಎಷ್ಟು ನೋವುಂಟು ಮಾಡಿದೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಇದು ಆಕ್ರಮಣಕಾರಿ ಟೆಸ್ಟ್ ಪಂದ್ಯವಾಗಿತ್ತು, ಮೊಹಮ್ಮದ್ ಸಿರಾಜ್ ಅಂತಿಮ ದಿನದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು. ಇದು ನೋಡಲು ಅದ್ಭುತ, ಭಾವನಾತ್ಮಕ ಟೆಸ್ಟ್ ಪಂದ್ಯವಾಗಿತ್ತು ಮತ್ತು ಇಂಗ್ಲೆಂಡ್ ಡ್ರೆಸ್ಸಿಂಗ್ ರೂಮ್‌ಗೆ ಎಷ್ಟು ನೋವುಂಟು ಮಾಡಿದೆ ಎಂದು ನನಗೆ ತಿಳಿದಿದೆ.
ಇದಲ್ಲದೆ ಭಾರತ ಲಾರ್ಡ್ಸ್‌ನಲ್ಲಿ ಭಾರತ ಆಡಿದ್ದು ನಮಗೆ ತುಂಬಾ ಖುಷಿ ನೀಡಿತು. ನಾವು ಕೊಹ್ಲಿಯ ಮುಖದಲ್ಲಿನ ಸಂತೋಷವನ್ನು ನೋಡಿದ್ದೇವೆ ಮತ್ತು ಅದು ಅವರಿಗೆ ಎಷ್ಟು ಅರ್ಥವಾಗಿದೆ. ಇದು ಸರಣಿಯ ಸಂಪೂರ್ಣ ಕ್ರ್ಯಾಕರ್‌ಜಾಕ್ ಆಗಲಿದೆ ಎಂಬುದು ನನ್ನ ಭಾವನೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ವೇಗಿ ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ.