ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಖಾಸಗಿ ವಿಡಿಯೋ ವಿಚಾರವಾಗಿ ಸದ್ದು ಮಾಡಿದ್ದ ನಟಿ ಆ ಬಳಿಕ ತಣ್ಣಗಾಗಿದ್ದರು. ಇದಲ್ಲದೆ ಖ್ಯಾತನಾಮರೊಂದಿಗೆ ಅಫೇರ್ ವಿಚಾರವಾಗಿಯೂ ನಟಿ ಹೆಚ್ಚು ಸದ್ದು ಮಾಡುತ್ತಿದ್ದು, ಊರ್ವಶಿ ಹಾಗೂ ಪಂತ್ (Rishabh Pant) ನಡುವಿನ ಲವ್ ರೂಮರ್ಸ್ ಬಹಳ ದಿನಗಳಿಂದಲೂ ಸದ್ದು ಮಾಡುತ್ತಿದೆ.. ಅವರಿಬ್ಬರೂ ತುಂಬಾ ಸಲ ಅಂತದ್ದೇನು ಇಲ್ಲ ಎಂದರೂ ಅವರಿಬ್ಬರ ಬಗೆಗಿನ ಚರ್ಚೆ ಮಾತ್ರ ನಿಂತಿಲ್ಲ.. ಆದರೆ ಇದೀಗ ಕೊನೆಗೂ ಊರ್ವಶಿ ರೌಟೇಲಾ ಈ ಸಂಬಂಧದ ಸುದ್ದಿಯ ಬಗ್ಗೆ ಮೌನ ಮುರಿದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅವರ ಸಂಬಂಧದ ವದಂತಿಗಳು ವೈರಲ್ ಆಗುತ್ತಿವೆ, ಆದರೆ ಅವರಲ್ಲಿ ಯಾರೂ ಕೂಡ ಅಧಿಕೃತವಾಗಿ ಸಂಬಂಧದ ಬಗ್ಗೆ ಮಾತನಾಡಿರಲಿಲ್ಲ. ಆದರೆ, ನಟಿ ರಿಷಭ್ ಪಂತ್ (Rishabh Pant) ಅವರ ಫೋಟೋ ಹಾಗೂ ವಿಡಿಯೋಗಳಿಗೆ ಕಮೆಂಟ್ ಮಾಡುವ ಮೂಲಕ ಮತ್ತಷ್ಟು ಪುಷ್ಠಿ ನೀಡಿದರು. ಆದರೆ, ಇದೀಗ ನಟಿ ಈ ಎಲ್ಲಾ ವಿಚಾರಗಳಿಗೂ ತೆರೆ ಎಳೆಯುವ ಪ್ರಯತ್ನ ಮಾಡಿದ್ದು, ತಮ್ಮ ಹಾಗೂ ರಿಷಭ್ ನಡುವಿನ ಸಂಬಂಧದ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ: Bigg Boss ನೀಡಿದ್ದ ಟಾಸ್ಕ್ ವೇಳೆ ನಡಯಿತು ಅಚಾತುರ್ಯ; ಇಬ್ಬರು ಆಸ್ಪತ್ರೆಗೆ ದಾಖಲು?
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಟಿ, ನನ್ನನ್ನು ರಿಷಭ್ ಪಂತ್ (ಮಾತನಾಡುವ ವೇಳೆ ಆರ್ಪಿ ಎಂದು ಉಲ್ಲೇಖಿಸಿದ್ದಾರೆ) ಜೊತೆಗಿನ ಲವ್ ಅಫೇರ್ ವದಂತಿಗಳಿಗೆ ಸಂಬಂಧಿಸಿದಂತೆ, ಈ ಮೀಮ್‌ಗಳು ಮತ್ತು ಸುದ್ದಿಗಳು ಆಧಾರರಹಿತವೆಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ನಾನು ಬಯಸುತ್ತೇನೆ. ಸತ್ಯವೇನೆಂದರೇ ನಾನು ನನ್ನ ವೃತ್ತಿಜೀವನದ ಮೇಲೆ ಗಮನಸಿದ್ದೇನೆ.
ಚಾಲೆಂಜಿಂಗ್ ದರ್ಶನ್ ನಟನೆಯ ಐರಾವತ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಊರ್ವಶಿ ರೌಟೇಲಾ ಬಾಲಿವುಡ್ ಸೇರಿದಂತೆ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಇತ್ತ ಊರ್ವಶಿ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಕೆಲವರು ನಟಿಯನ್ನು ಟ್ರೋಲ್ ಮಾಡುತ್ತಿದ್ದರೆ, ಕೆಲವರು ರಿಷಬ್ ಪಂತ್ ಒಳ್ಳೆಯ ವ್ಯಕ್ತಿ ಎಂದು ಹೇಳುತ್ತಾರೆ. ಆದರೆ, ಇದಕ್ಕೆ ರಿಷಭ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.