ಮದುವೆಯ ಕರೆಯೋಲೆ ಜತೆ ಭುವನ್ ಕಡೆಯಿಂದ ಮತ್ತೊಂದು ಸರ್‌ಪ್ರೈಸ್; ಸಿನಿಮಾಗೆ ಕಂಬ್ಯಾಕ್?

harshika bhuvan
Published on

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಇದೇ ತಿಂಗಳ 24ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೊಡವ ಸಂಪ್ರದಾಯದಂತೆ ವಿರಾಜಪೇಟೆಯಲ್ಲಿ ಈ ಜೋಡಿಯ ವಿವಾಹ ಅದ್ದೂರಿಯಾಗಿ ನಡೆಯಲಿದೆ. ಹಲವು ವರ್ಷಗಳಿಂದ ಈ ಜೋಡಿ ಸ್ನೇಹಿತರಾಗಿದ್ದು ಬಳಿಕ ಕಳೆದ ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಕುಟುಂಬ ಹಾಗೂ ಹಿರಿಯರ ಅನುಮತಿಯೊಂದಿಗೆ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ.

ಮದುವೆ ಬಗ್ಗೆ ಭುವನ್, ‘ಮದುವೆ ಎಲ್ಲ ಬೇಡ, ಹೀಗೆ ಊರೂರು ತಿರುಗಾಡಿಕೊಂಡು, ಸಿನಿಮಾ ಮಾಡಿಕೊಂಡು ಇರಬೇಕು ಅಂದುಕೊಂಡಿದ್ದೆ. ಅದೊಂದು ದೊಡ್ಡ ಜವಾಬ್ದಾರಿ. ನನ್ನಿಂದ ಆಗುತ್ತೋ ಇಲ್ಲವೋ ಎಂಬ ಗೊಂದಲವಿತ್ತು. ಮದುವೆ ಆದವರು ಹೇಳುವ ಮಾತುಗಳಿಂದ ಭಯವೂ ಆಗಿತ್ತು. ಆದರೆ, ಈಗ ಧೈರ್ಯದಲ್ಲಿದೀನಿ. ಬಹಳ ಖುಷಿ ಇದೆ’ ಎನ್ನುತ್ತಾರೆ. ಜತೆಗೆ ಹರ್ಷಿಕಾ, ‘‘ಇಷ್ಟಪಟ್ಟು ಮದುವೆ ಆಗುತ್ತಿರುವ ಬಗ್ಗೆ ಖುಷಿಯಿದೆ. ಭುವನ್ ಎಷ್ಟೇ ಅಲೆಮಾರಿ ಆದರೂ ನನ್ನ ಬಿಟ್ಟು ಇರಲ್ಲ. ಹೀಗಾಗಿ ಇಷ್ಟು ವರ್ಷ ನಮ್ಮ ರಿಲೇಷನ್‌ಶಿಪ್ ಗಟ್ಟಿಯಾಗಿರಲು ಸಾಧ್ಯವಾಗಿದ್ದು. ಊರುಕೂಡುವ, ಬಳೆಶಾಸ ಹೀಗೇ ನಮ್ಮ ಸಂಪ್ರದಾಯದಲ್ಲಿ ಎರಡು ದಿನ ಮದುವೆ ನಡಯುತ್ತೆ. ಅನಗತ್ಯ ಆಡಂಬರ ಇಲ್ಲದೇ ಸಾಂಪ್ರದಾಯಕವಾಗಿ ನಡೆಯಲಿದೆ’ ಎನ್ನುತ್ತಾರೆ.

ಭುವನ್ ಮತ್ತು ಹರ್ಷಿಕಾ ನಡುವೆ ಪ್ರೀತಿ ಚಿಗುರಿದ ಬಗ್ಗೆ,‘2011ರಲ್ಲಿ ಕೊಡವ ಸಮಾಜದ ನೂರನೇ ವರ್ಷದ ಕಾರ್ಯಕ್ರಮದಲ್ಲಿ ್ಯಾಷನ್ ಶೋ ಇತ್ತು. ಅದಕ್ಕಾಗಿ ಮೊದಲ ಬಾರಿಗೆ ಭುವನ್ ಜತೆ ೆನ್ ಅಲ್ಲಿ ಮಾತಾಡಿದ್ದೆ. ಆಗ ಭುವನ್ ಗೊತ್ತಿರಲಿಲ್ಲ ಹೀಗಾಗಿ ಅವರಿಗೆ ‘ಅಂಕಲ್’ ಎಂದು ಕರೆದುಬಿಟ್ಟಿದ್ದೆ. ಆಮೇಲೆ ಎದುರಿಗೆ ಭೇಟಿ ಆದಾಗ ಇವರನ್ನು ನೋಡಿ ಶಾಕ್ ಆಗಿತ್ತು. ಅದೇ ನಮ್ಮ ಮೊದಲ ಭೇಟಿ. ಅದಾದ ಮೇಲೆ ನಂಬರ್ ಎಕ್ಸ್‌ಚೇಂಜ್ ಆಗಿ ಮಾತುಕತೆ ಬೆಳೆದು. 2012ರಲ್ಲಿ ಭುವನ್ ಪ್ರಪೋಸ್ ಮಾಡಿದ್ದು’ ಎಂದು ಹೇಳಿಕೊಂಡರು..

ಸಿನಿಮಾ ಟೈಟಲ್ ಲಾಂಚ್:
ಕಳೆದ ಒಂದೂವರೆ ವರ್ಷದಿಂದ ಭುವನ್ ಬಾಕ್ಸಿಂಗ್ ಕುರಿತಾದ ಒಂದು ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಬಿಜಿಯಿದ್ದರಂತೆ. ಚಿತ್ರದ ಶೀರ್ಷಿಕೆ, ‘ಭುವನಂ ಶ್ರೇಷ್ಠಮ್ ಗಚ್ಚಾಮಿ’. ಇತ್ತೀಚೆಗಷ್ಟೆ ಚಿತ್ರದ ಶೀರ್ಷಿಕೆ ಮತ್ತು ಮೊದಲ ನೋಟ ಅನಾವರಣ ಮಾಡಲಾಯಿತು. ಜತೆಗೆ ‘ಭುವನಂ ಎಂಟರ್‌ಟೇನ್ಮೆಂಟ್ ಎಂಬ ಪ್ರೊಡಕ್ಷನ್ ಸಂಸ್ಥೆಯನ್ನೂ ಸ್ಥಾಪಿಸಿದರು ಭುವನ್. ಇನ್ನು ಕೆಲವೇ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net