More

    ಸಂಜು- ಗೀತಾ ವೆಡ್ಡಿಂಗ್​ನಲ್ಲಿ ಸ್ಟಾರ್​ಗಳ ದರ್ಬಾರ್​ ; ನಾಗಶೇಖರ್​ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್​

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    “ಸಂಜು ವೆಡ್ಸ್​ ಗೀತಾ’ ತೆರೆಗೆ ಬಂದ 12 ವರ್ಷಗಳ ಬಳಿಕ ಇದೀಗ ಸೀಕ್ವಲ್​ ಸೆಟ್ಟೇರಿದೆ. ಮೊದಲ ಚಿತ್ರ ಹಾಡುಗಳು ಮತ್ತು ವಿಭಿನ್ನ ಪ್ರೇಮಕಥೆಯ ಮೂಲಕ ಬಾಕ್ಸಾಫಿಸ್​ನಲ್ಲಿ ಗೆಲುವಿನ ನಗೆ ಬೀರಿತ್ತು. ಇದೀಗ “ಸಂಜು ವೆಡ್ಸ್​ ಗೀತಾ 2′ ಮೂಲಕ ಹೊಸ ಕಥೆಯೊಂದಿಗೆ ನಿರ್ದೇಶಕ ನಾಗಶೇಖರ್​ ವಾಪಸ್ಸಾಗಿದ್ದಾರೆ. ಮೊದಲ ಭಾಗದಲ್ಲಿದ್ದ ಬಹುತೇಕ ಕಲಾವಿದರು ಈ ಸೀಕ್ವಲ್​ನಲ್ಲೂ ಮುಂದುವರಿಯಲಿದ್ದಾರೆ. ನಾಯಕಿಯ ಪಾತ್ರಕ್ಕೆ ರಮ್ಯಾ ಬದಲು ರಚಿತಾ ಬಂದಿದ್ದಾರೆ. ಇತ್ತೀಚೆಗಷ್ಟೆ “ಸಂಜು ವೆಡ್ಸ್​ ಗೀತಾ 2′ ಚಿತ್ರದ ಮುಹೂರ್ತ ನೆರವೇರಿದ್ದು, ಅಂದೇ ಟೀಸರ್​ ಬಿಡುಗಡೆ ಮಾಡಲಾಯಿತು.

    ಇದನ್ನೂ ಓದಿ : ವಾಮನನ ಭರ್ಜರಿ ಆ್ಯಕ್ಷನ್; ಧನ್ವೀರ್, ರೀಷ್ಮಾ ನಾಣಯ್ಯ ಅಭಿನಯದ ಚಿತ್ರದ ಟೀಸರ್

    ಸಂಜು- ಗೀತಾ ವೆಡ್ಡಿಂಗ್​ನಲ್ಲಿ ಸ್ಟಾರ್​ಗಳ ದರ್ಬಾರ್​ ; ನಾಗಶೇಖರ್​ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್​

    ನಿರ್ದೇಶಕ ನಾಗಶೇಖರ್​ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, “ಐದು ವರ್ಷಗಳ ಹಿಂದೆಯೇ ಈ ಸಿನಿಮಾ ಪ್ರಾರಂಭಿಸಬೇಕಿತ್ತು. ಆದರೆ ನಾನು ತೆಲುಗು, ತಮಿಳು ಕಡೆ ಹೋಗಿದ್ದರಿಂದ ಆಗಿರಲಿಲ್ಲ. ರಮ್ಯಾ ಕೂಡ ಈ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಅವರು ರಾಜಕೀಯದಲ್ಲಿ ಬಿಜಿಯಿದ್ದಾರೆ. ಹೀಗಾಗಿಯೇ ಅವರ ಬದಲು ಈ ಪಾತ್ರಕ್ಕೆ ಮೊದಲು ನನ್ನ ಕಣ್ಣಮುಂದೆ ಬಂದಿದ್ದೇ ರಚಿತಾ. ಶ್ರೀಧರ್​ ಸಂಭ್ರಮ್​ ಐದು ಅದ್ಭುತವಾದ ಹಾಡುಗಳನ್ನು ಕೊಟ್ಟಿದ್ದಾರೆ’ ಎಂದು ಸಂತಸ ಹಂಚಿಕೊಂಡರು. ಮುಹೂರ್ತದ ದೃಶ್ಯಕ್ಕೆ ಅಶ್ವಿನಿ ಪುನೀತ್​ ರಾಜಕುಮಾರ್​ ಕ್ಲಾಪ್​ ಮಾಡಿದರೆ, ನಾಗಶೇಖರ್​ ಅವರ ತಾಯಿ ವರಲಕ್ಷ್ಮಿ ಕ್ಯಾಮರಾಗೆ ಚಾಲನೆ ನೀಡಿದರು. ಅತಿಥಿಯಾದಿ ಆಗಮಿಸಿದ್ದ ಅಭಿಷೇಕ್​ ಅಂಬರೀಶ್​ ಚಿತ್ರತಂಡಕ್ಕೆ ಶುಭಹಾರೈಸಿದರು. ನಾಯಕಿ ರಚಿತಾ, “ನಾಗಶೇಖರ್​ ಅವರ ಜತೆ ಮೊದಲ ಬಾರಿ ಕೆಲಸ ಮಾಡುತ್ತಿದ್ದೇನೆ. ಫೋಟೋಶೂಟ್​ ಸಮಯದಲ್ಲೇ ಚಿತ್ರದ ಬಗ್ಗೆ ಅವರಿಗಿರುವ ಡೆಡಿಕೇಷನ್​ ನೋಡಿದೆ. ನನ್ನ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ’ ಎಂದು ಹೇಳಿಕೊಂಡರು.

    ಇದನ್ನೂ ಓದಿ : ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಗಿಚ್ಚಿ ಗಿಲಿಗಿಲಿ ಜಾಹ್ನವಿ, ರೂಪೇಶ್‌ ಶೆಟ್ಟಿಗೆ ಜಾಹ್ನವಿ ನಾಯಕಿ..!

    ಸಂಜು- ಗೀತಾ ವೆಡ್ಡಿಂಗ್​ನಲ್ಲಿ ಸ್ಟಾರ್​ಗಳ ದರ್ಬಾರ್​ ; ನಾಗಶೇಖರ್​ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್​

    ನಾಯಕ ಶ್ರೀನಗರ ಕಿಟ್ಟಿ, “ನನ್ನ ಲ್ಯಾಂಡ್​ಮಾರ್ಕ್​ ಸಿನಿಮಾಗಳಲ್ಲಿ “ಸಂಜು ವೆಡ್ಸ್​ ಗೀತಾ’ ಕೂಡ ಒಂದು. ಅದ್ಭುತವಾದ ಪ್ರೇಮಕಥೆಯೊಂದಿಗೆ ಮತ್ತೆ ಬರುತ್ತೇವೆ. ಮೊದಲ ಚಿತ್ರಕ್ಕಿಂತ ಈ ಚಿತ್ರದ ಪಾತ್ರ ಇನ್ನೂ ಚೆನ್ನಾಗಿದೆ. ರಚಿತಾ ರಾಮ್​ ಜತೆ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿದ್ದೇನೆ’ ಎಂದರು. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ಕವಿರಾಜ್​ ಸಾಹಿತ್ಯ, ಶ್ರೀಧರ್​ ಸಂಭ್ರಮ್​ ಸಂಗೀತವಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts