More

    ವಾಮನನ ಭರ್ಜರಿ ಆ್ಯಕ್ಷನ್; ಧನ್ವೀರ್, ರೀಷ್ಮಾ ನಾಣಯ್ಯ ಅಭಿನಯದ ಚಿತ್ರದ ಟೀಸರ್

    ಬೆಂಗಳೂರು: ಶಂಕರ್ ರಾಮನ್ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ, ಧನ್ವೀರ್ ಹಾಗೂ ರೀಷ್ಮಾ ನಾಣಯ್ಯ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ‘ವಾಮನ’. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿವೆ. ಡ್ರಗ್ಸ್, ಅಂಡರ್‌ವರ್ಲ್ಡ್ ಬ್ಯಾಕ್‌ಡ್ರಾಪ್‌ನಲ್ಲಿ ಮೂಡಿಬಂದ ಆ್ಯಕ್ಷನ್ ಎಂಟರ್‌ಟೇನರ್ ಚಿತ್ರವಿದು ಎನ್ನಲಾಗಿದೆ.

    ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಚಿತ್ರದ ಬಗ್ಗೆ ನಿರ್ದೇಶಕ ಶಂಕರ್ ರಾಮನ್, ‘ದುಷ್ಟತನವನ್ನು ಮಟ್ಟಹಾಕಿ ನಿಲ್ಲುವ ಹೆಜ್ಜೆಯೇ ವಾಮನ. ರೌಡಿಸಂ ಶೇಡ್ ಜತೆ ಭಾವನೆಗಳಿಗೂ ಪ್ರಾಮುಖ್ಯತೆ ನೀಡಲಾಗಿದ್ದು, ಒಂದೊಳ್ಳೆ ಸಂದೇಶವನ್ನು ನೀಡಿದ್ದೇವೆ. ಈಗಾಗಲೇ ರಿಲೀಸ್ ಆಗಿರುವ ಎಲ್ಲ ಹಾಡುಗಳು ಮೂರು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿವೆ. ಇನ್ನು, ಈ ಚಿತ್ರದ ಕೊನೆಯ ಹತ್ತು ನಿಮಿಷಗಳ ಕಾಲವಿರುವ ಆ್ಯಕ್ಷನ್ ಸನ್ನಿವೇಶ ಎಲ್ಲರ ಗಮನ ಸೆಳೆಯುತ್ತದೆ. ಏಕೆಂದರೆ ಅದರೊಳಗೆ ಕಥೆ ಬ್ಲೆಂಡ್ ಆಗಿ ಸಾಗುತ್ತದೆ’ ಎಂದು ಮಾಹಿತಿ ನೀಡುತ್ತಾರೆ. ಇನ್ನು ನಾಯಕ ಧನ್ವೀರ್ ಈ ಚಿತ್ರದಲ್ಲಿ ಒಳಿತು, ಕೆಡುಕು ಎಂಬ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

    ಇದನ್ನೂ ಓದಿ: ಕೆಲಸವಿಲ್ಲದೆ ಖಾಲಿ ಕುಳಿತಿರುವ ಮಾಜಿ ಶಾಸಕ ಸುರೇಶ್‌ಗೌಡ: ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

    ಧನ್ವೀರ್‌ಗೆ ಜೋಡಿಯಾಗಿರುವ ರೀಷ್ಮಾ ನಾಣಯ್ಯ ಹೀರೋಗೆ ಸಪೋರ್ಟ್ ಮಾಡುವ ಮುದ್ದಾದ ಸಿಂಪಲ್ ಹುಡಗಿಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರಂತೆ. ಧನ್ವೀರ್, ರಿಷ್ಮಾ ಜತೆ ತಾರಾ, ಸಂಪತ್, ಆದಿತ್ಯ ಮೆನನ್, ಶಿವರಾಜ್ ಕೆ.ಆರ್. ಪೇಟೆ, ಅವಿನಾಶ್, ಅಚ್ಯುತ್ ಕುಮಾರ್ ಮುಖ್ಯ ತಾರಾಬಳಗದಲ್ಲಿದ್ದಾರೆ. ಇನ್ನು, ಚಿತ್ರವನ್ನು ಸೆಪ್ಟೆಂಬರ್‌ನಲ್ಲಿ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts