More

    ‘ಗದರ್​​ 2’ ಯಶಸ್ಸು ಸಹಿಸದ ಕಿಡಿಗೇಡಿಗಳಿಂದ ಚಿತ್ರಮಂದಿರದ ಎದುರು ಬಾಂಬ್​ ಸ್ಫೋಟ

    ‘ಗದರ್​ 2’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಅನೇಕ ವರ್ಷಗಳ ಬಳಿಕ ನಟ ಸನ್ನಿ ಡಿಯೋಲ್ ಅವರು ಬಹುದೊಡ್ಡ ಗೆಲುವು ಪಡೆದಿದ್ದಾರೆ. ಒಂದು ವಾರ ಕಳೆಯುವುದರೊಳಗೆ ಈ ಸಿನಿಮಾ 260 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್​ ಮಾಡಿದೆ. ಈ ಗೆಲುವನ್ನು ಸಹಿಸದ ಕೆಲವು ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ದಾರೆ. ‘ಗದರ್​ 2’ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರದ ಎದುರಿನಲ್ಲಿ ಬಾಂಬ್​ ಸ್ಫೋಟ ಮಾಡಲಾಗಿದೆ. ಪಾಟ್ನದ ಥಿಯೇಟರ್​ ಮುಂದೆ ಈ ಘಟನೆ ನಡೆದಿದೆ.
    ‘ಗದರ್​ 2’ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಕೆಲವರು ಬ್ಲಾಕ್​ ಟಿಕೆಟ್​ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪಾಟ್ನದ ಥಿಯೇಟರ್​ ಎದುರಿನಲ್ಲೂ ಕೆಲವರು ಬ್ಲಾಕ್​ ಟಿಕೆಟ್​ ಮಾರಲು ಯತ್ನಿಸಿದ್ದಾರೆ. ಅಲ್ಲದೇ, ಚಿತ್ರಮಂದಿರದ ಸಿಬ್ಬಂದಿಗೂ ಬೆದರಿಕೆ ಹಾಕಲಾಗಿದೆ. ಈ ಸಂದರ್ಭದಲ್ಲೇ ಬಾಂಬ್​ ಹಾಕಲಾಗಿದೆ. ಇವು ತೀವ್ರ ಸ್ವರೂಪದ ಬಾಂಬ್​ ಆಗಿರದ ಕಾರಣ ಹೆಚ್ಚಿನ ಹಾನಿ ಆಗಿಲ್ಲ ಎಂದು ತಿಳಿದುಬಂದಿದೆ.


    ಕೆಟ್ಟ ಉದ್ದೇಶ ಹೊಂದಿರುವ ವ್ಯಕ್ತಿಗಳು ಬ್ಲಾಕ್​ ಟಿಕೆಟ್​ ಮಾರಲು ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಿಲ್ಲ. ಕಿಡಿಗೇಡಿಗಳು ಗಂಭೀರವಾದ ಕೃತ್ಯ ಎಸಗಲು ಪ್ರಯತ್ನಿಸಿದ್ದಾರೆ. ಆದರೆ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಥಿಯೇಟರ್​ ಸಿಬ್ಬಂದಿ ಹೇಳಿದ್ದಾರೆ.


    ಆಗಸ್ಟ್​ 11ರಂದು ಈ ಚಿತ್ರ ಬಿಡುಗಡೆ ಆಯಿತು. ಅಂದಿನಿಂದ ಇಂದಿನ (ಆಗಸ್ಟ್​ 18) ತನಕ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಎರಡನೇ ವೀಕೆಂಡ್​ನಲ್ಲಿ ಈ ಸಿನಿಮಾ ಮತ್ತೆ ಅಬ್ಬರಿಸಲಿದೆ. ಟೋಟಲ್​ ಕಲೆಕ್ಷನ್​ ಎಷ್ಟಾಗಬಹುದು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. 2001ರಲ್ಲಿ ‘ಗದರ್​’ ಸಿನಿಮಾ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಆ ಸಿನಿಮಾದ ಸೀಕ್ವೆಲ್​ ಆಗಿ ‘ಗದರ್​ 2’ ಮೂಡಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts