More

  ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿದ ಬಿಜೆಪಿ ಶಾಸಕ

  ಅಮ್ರೇಲಿ: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ಬಿಜೆಪಿ ಶಾಸಕರೊಬ್ಬರು ರಕ್ಷಿಸಿರುವ ಘಟನೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ.

  ಇದನ್ನೂ ಓದಿ: ಹೈಕೋರ್ಟ್​ ನಿವೃತ್ತ ಜಡ್ಜ್​ ನೇತೃತ್ವದಲ್ಲಿ ಮಣಿಪುರ ಹಿಂಸಾಚಾರ ಪ್ರಕರಣದ ತನಿಖೆ: ಅಮಿತ್​ ಷಾ ಹೇಳಿಕೆ

  ರಾಜುರ್​ನ ಬಿಜೆಪಿ ಶಾಸಕ ಹಿರಾ ಸೋಲಂಕಿ ಬುಧವಾರ ಪಟ್ವಾ ಗ್ರಾಮದ ಬಳಿ ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿದ್ದಾರೆ. ಕಲ್ಪೇಶ್ ಶಿಯಾಲ್, ವಿಜಯ್ ಗುಜಾರಿಯಾ, ನಿಕುಲ್ ಗುಜಾರಿಯಾ ಘಟನೆಯಲ್ಲಿ ಬದುಕುಳಿದಿದ್ದು, ಜೀವನ್ ಗುಜಾರಿಯಾ ಎಂಬಾತ ಮೃತಪಟ್ಟಿದ್ದಾನೆ. ನಾಲ್ಕು ಯುವಕರು ಕೂಡಿಕೊಂಡು ಸಮುದ್ರ ತೀರದಲ್ಲಿರುವ ತೊರೆಗೆ ಸ್ನಾನ ಮಾಡಲು ಹೋಗಿದ್ದರು. ಸಮುದ್ರದಲ್ಲಿ ಬಲವಾದ ಪ್ರವಾಹ ಮತ್ತು ತೀವ್ರ ಅಲೆಗಳಿದ್ದ ಕಾರಣ ಯುವಕರು ಮುಳುಗಲು ಪ್ರಾರಂಭಿಸಿ ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದರು.

  ಈ ವೇಳೆ ಅಲ್ಲಿಯೇ ಇದ್ದ ಸೋಲಂಕಿ, ಮೂವರು ಯುವಕರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ದುರದೃಷ್ಟವಶಾತ್, ಇನ್ನೊಬ್ಬ ಯುವಕ ಶವವಾಗಿ ಪತ್ತೆಯಾಗಿದ್ದಾನೆ.(ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts