More

    ಮಲೈಕಾ ಆರೋರಾ ಗರ್ಭಿಣಿ ಗಾಸಿಪ್​​; ಸುಮ್ಮನೆ ಊಹಿಸಿ ಎಲ್ಲವನ್ನೂ ಬರೆಯಬೇಡಿ ಎಂದ ಅರ್ಜುನ್​ ಕಪೂರ್​

    ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಪ್ರೇಮಿಗಳು ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಈ ಜೋಡಿ ಬಾಲಿವುಡ್​​ ಅಂಗಳದಲ್ಲಿ ಸಖತ್​​ ಸುದ್ದಿಯಲ್ಲಿರುವ ಜೋಡಿಯಾಗಿದೆ. ಕೆಲವು ದಿನಗಳ ಹಿಂದೆ ಅರ್ಜುನ್ ಕಪೂರ್ ಅವರ ಖಾಸಗಿ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಮಲೈಕಾ ಅರೋರಾ ಭಾರೀ ಸುದ್ದಿಯಾಗಿದ್ದಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ಳುವ ಈ ಜೋಡಿ ಡೇಟಿಂಗ್ ವಿಚಾರ ವೈರಲ್ ಆಗಿದೆ.

    ಕಳೆದ ಕೆಲವುದಿನಗಳ ಹಿಂದೆ ಮಲೈಕಾ ಆರೋರಾ ಗರ್ಭಿಣಿ ಎನ್ನುವ ಸುದ್ದಿಯೊಂದನ್ನು ಬಿತ್ತರಸಿತ್ತು. ಅರ್ಜುನ್‌ ಅವರ ಮಗುವಿಗೆ ಮಲೈಕಾ ತಾಯಿ ಆಗಲಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗಿತ್ತು. ಈ ವಿಚಾರವಾಗಿ ನಟ ಅರ್ಜುನ್‌ ಕಪೂರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಲೈಕಾ ಆರೋರಾ ಗರ್ಭಿಣಿ ಗಾಸಿಪ್​​; ಸುಮ್ಮನೆ ಊಹಿಸಿ ಎಲ್ಲವನ್ನೂ ಬರೆಯಬೇಡಿ ಎಂದ ಅರ್ಜುನ್​ ಕಪೂರ್​
    ಏನನ್ನಾದರೂ ಬರೆಯುವ ಮೊದಲು ನಮ್ಮೊಂದಿಗೆ ದೃಢೀಕರಿಸಿ:

    ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ನೆಗೆಟಿವಿಟಿಯನ್ನು ಹರಡುವುದು ಸುಲಭ. ಎಲ್ಲೆಡೆ ನೆಗೆಟಿವ್‌ ವಿಚಾರಗಳ ಬಹುಬೇಗನೇ ಹರಡುವುದರಿಂದ ಜನ ಅದರತ್ತ ಹೆಚ್ಚು ಗಮನ ಹರಿಸುತ್ತಾರೆ. ನಾವು ನಟರು, ನಮ್ಮ ವೈಯಕ್ತಿಕ ಜೀವನ ಯಾವಾಗಲೂ ತುಂಬಾ ಖಾಸಗಿಯಾಗಿರುವುದಿಲ್ಲ. ನಾವೆಲ್ಲರೂ ಮನುಷ್ಯರು ಎಂಬ ಕನಿಷ್ಠ ಅರಿವು ನಮಗಿರಬೇಕು. ಆದ್ದರಿಂದ, ನೀವು ಬಹಳ ಮುಖ್ಯವಾದದ್ದನ್ನು ಬರೆಯಲು ಹೊರಟಿದ್ದರೆ ಒಮ್ಮೆ ಪರಿಶೀಲಿಸಿ. ಹಾಗೆ ಮಾಡಿದರೆ ನಮಗೂ ನಾವು ಮಾಡಿದ್ದು ಸರಿ ಎಂದು ಭಾಸವಾಗುತ್ತದೆ. ಸುಮ್ಮನೆ ನೀವು ಊಹಿಸಿ ಎಲ್ಲವನ್ನೂ ಬರೆಯಬೇಡಿ” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಜೂನ್​ 4ರಂದು ಸ್ಥಳದಲ್ಲೇ ಚಿತ್ರ ಬಿಡಿಸಿ ಸ್ಪರ್ಧೆ: ವಿಜಯವಾಣಿ, ದಿಗ್ವಿಜಯ ನ್ಯೂಸ್​ನಿಂದ ಮಕ್ಕಳಿಗಾಗಿ ಆಯೋಜನೆ

    ನಮ್ಮ ಮಾತುಗಳು ಸಾಮಾನ್ಯ ಜನರಿಗೆ ಹೇಗೆ ತಲುಪುತ್ತಿವೆ ಎಂಬುದರ ಕುರಿತು ನಾವು ಮಾಧ್ಯಮಗಳ ಮೇಲೆ ಅವಲಂಬಿತರಾಗಿದ್ದೇವೆ. ನಾವು ಸಹ ಮನುಷ್ಯರು ಎಂದು ನೀವು ಅರ್ಥಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಅದಕ್ಕಾಗಿಯೇ ಏನನ್ನಾದರೂ ಬರೆಯುವ ಮೊದಲು, ಒಮ್ಮೆ ನಮ್ಮೊಂದಿಗೆ ದೃಢೀಕರಿಸಿ ಎಂದಿದ್ದಾರೆ.

    ಅರ್ಜುನ್ ಮತ್ತು ಮಲೈಕಾ 2019 ರಲ್ಲಿ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮೊದಲ ಬಾರಿಗೆ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಅದಕ್ಕೂ ಮೊದಲು ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದರೂ. ಇಬ್ಬರ ವಯಸ್ಸಿನಲ್ಲೂ ಸುಮಾರು 12 ವರ್ಷಗಳ ವ್ಯತ್ಯಾಸವಿದ್ದು, ಈ ವಿಷಯ ಸದಾ ಟ್ರೋಲರ್ ಗಳ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತದೆ. ಅರ್ಜುನ್‌ಗೆ 37 ವರ್ಷ ಮತ್ತು ಮಲೈಕಾಗೆ 49 ವರ್ಷ. ಇಬ್ಬರೂ ಇದನ್ನು ತಲೆಕೆಡಿಸಿಕೊಳ್ಳದಿದ್ದರೂ, ಹೌದು, ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಯಾವಾಗಲೂ ಈ ವಿಷಯದ ಬಗ್ಗೆ ಅವರ ಸಂಬಂಧವನ್ನು ಗೇಲಿ ಮಾಡುತ್ತಾರೆ.

    VIDEO| ಚಲಿಸುವ ಸ್ಕೂಟರ್‌ನಲ್ಲಿ ಲಿಪ್​​ಲಾಕ್​ ಮಾಡಿದ ಯುವಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts