VIDEO| ಚಲಿಸುವ ಸ್ಕೂಟರ್‌ನಲ್ಲಿ ಲಿಪ್​​ಲಾಕ್​ ಮಾಡಿದ ಯುವಕರು

Guys Kissing in UP Viral
Published on

ಉತ್ತರಪ್ರದೇಶ: ಚುಂಬನ ಕೇವಲ ಪ್ರೀತಿಯ ಪ್ರಕಟಣೆಯಷ್ಟೇ ಅಲ್ಲ, ಕಾಳಜಿ, ಆರೈಕೆ, ರಕ್ಷಣೆ, ಭರವಸೆ, ಆಪ್ತತೆ, ಅನ್ಯೋನ್ಯತೆ ಇಂತಹ ಅನೇಕ ಭಾವನೆಗಳನ್ನು ಸೂಚಿಸುತ್ತದೆ. ಪ್ರೇಮಿಗಳು ಪರಸ್ಪರರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಚುಂಬಿಸುತ್ತಾರೆ. ಆದರೆ ಇತ್ತೀಚೆಗೆ ಚುಂಬನ ಅರ್ಥವೇ ಬದಲಾದಂತಿದೆ.

ಚಲಿಸುತ್ತಿರುವ ಸ್ಕೂಟಿಯಲ್ಲಿ ಕುಳಿತ ಇಬ್ಬರು ಯುವಕರು  ಲಿಪ್​​ಲಾಕ್​​ ಮಾಡಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಮೂವರು ಯುವಕರು ಸ್ಕೂಟರ್​ನಲ್ಲಿ ಕುಳಿತಿದ್ದಾರೆ. ಮುಂದೆ ಕುಳಿತ ಯುವಕ ಸ್ಕೂಟಿ ಚಲಾಯಿಸುತ್ತಿದ್ದಾನೆ. ಹಿಂದೆ ಕುಳಿತಿದ್ದ ಇಬ್ಬರು ಹುಡುಗರು ಇಬ್ಬರು ಚುಂಬಿಸಿಕೊಂಡಿದ್ದಾರೆ. ಏಳು ಸೆಕೆಂಡ್‌ಗಳ ವಿಡಿಯೋ ಕ್ಲಿಪ್‌ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಮೂವರು ಯುವಕರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net