ಮೊಮ್ಮಗನ ಮೃತದೇಹ ನೋಡುತ್ತಿದ್ದಂತೆ ಪ್ರಾಣಬಿಟ್ಟ ಅಜ್ಜಿ!

death
Published on

ಮಡಿಕೇರಿ: ಮೊಮ್ಮಗನ ಸಾವಿನ ಸುದ್ದಿಯಿಂದ ಆಘಾತಗೊಂಡ ಅಜ್ಜಿ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಹೊಳೆಯಲ್ಲಿ ಜಲಸಮಾಧಿಯಾದ ಮೊಮ್ಮಗನ ಮೃತದೇಹ ನೋಡುತ್ತಿದ್ದಂತೆ ಅಜ್ಜಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಹೃದಯವಿದ್ರಾಕ ಘಟನೆ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಹೊಸಕೋಟೆಯಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿ ಮುಬಾಶೀರ್(18), ಶುಕ್ರವಾರ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತದೇಹ ನೋಡುತ್ತಿದ್ದಂತೆ ಸಾವಿನ ಆಘಾತದಿಂದ ಅಜ್ಜಿ ರುಕಿಯಾ (62) ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.

ಮುಬಾಶೀರ್ ಹೊಸಕೋಟೆ ನಿವಾಸಿ ರಮ್ಲಾನ್ ಪುತ್ರ. ಐಗೂರಿನ 11 ಯುವಕರು ಗುರುವಾರ ಬೆಳಗ್ಗೆ ಫುಟ್ಬಾಲ್ ಆಟವಾಡಲೆಂದು ಮೈದಾನಕ್ಕೆ ತೆರಳಿದ್ದು, ಆಟವಾಡಿದ ಬಳಿಕ ಮುಬಾಶೀರ್ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿದ್ದ. ಹೊಳೆಯಲ್ಲಿ ಮುಳುಗುತ್ತಿದ್ದಂತೆ ಸ್ನೇಹಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ರಾತ್ರಿ 10 ಗಂಟೆವರೆಗೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದರು. ಅಲ್ಲಿಂದ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net