More

    ವಿವಸ್ತ್ರಗೊಂಡು ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ವಿದೇಶಿ ಮಹಿಳೆ!

    ಇಂಡೋನೇಷ್ಯಾ: ಜರ್ಮನ್ ದೇಶದ ಮಹಿಳೆಯೊಬ್ಬಳು ಬೆತ್ತಲೆಯಾಗಿ ದೇವಸ್ಥಾನದ ಒಳಪ್ರವೇಶಿಸಲು ಯತ್ನಿಸಿರುವ ಘಟನೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದೆ. ದೇವಸ್ಥಾನದ ಹೊರವಲಯದಲ್ಲಿ ನೃತ್ಯ ಪ್ರದರ್ಶನ ನಡೆಯುತ್ತಿದ್ದ ವೇಳೆ ಈ ಅಚಾತುರ್ಯ ಸಂಭವಿಸಿದೆ. ಸದ್ಯ ತಪ್ಪಿತಸ್ಥ ಮಹಿಳೆ ದರ್ಜಾ ಟುಶಿನ್ಸ್ಕಿ ಗೇಟ್‌ಕ್ರಾಪ್ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: ಸಂಸತ್ ಭವನ ಉದ್ಘಾಟನೆಯನ್ನು ‘ಪಟ್ಟಾಭಿಷೇಕ’ ಎಂದು ಪರಿಗಣಿಸಿದ ಪ್ರಧಾನಿ: ಕಿಡಿಕಾರಿದ ರಾಹುಲ್ ಗಾಂಧಿ

    ದೇವಸ್ಥಾನದ ವಠಾರದಲ್ಲಿ ನಡೆಯುತ್ತಿದ್ದ ನೃತ್ಯ ಪ್ರದರ್ಶನಕ್ಕೆ ಟಿಕೆಟ್ ನಿರಾಕರಿಸಿರುವುದಕ್ಕೆ ಆಕ್ರೋಶಿತಗೊಂಡ ಮಹಿಳೆ ಬೆತ್ತಲೆಯಾಗಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದಾಳೆ ಎನ್ನಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿಗಳು ಆಕೆಯನ್ನು ತಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿ, ಮಾನಸಿಕ ಆರೋಗ್ಯ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.

    ಸದ್ಯ ಮಹಿಳೆ ಬೆತ್ತಲೆಯಾಗಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನೃತ್ಯ ಮಾಡುತ್ತಿದ್ದ ಗುಂಪಿನ ನಡುವಲ್ಲಿ ಓಡಾಡುತ್ತಾ, ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ತೆರೆದು ಪ್ರಾರ್ಥನೆ ಮಾಡುತ್ತಿರುವಂತೆ ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ.

    ಇದನ್ನೂ ಓದಿ: ಕೀರ್ತಿ ಸುರೇಶ್ ಮದುವೆ ಆಗ್ತಿದ್ದಾರಾ? ನಟಿಯ ತಂದೆ ನೀಡಿದ ಸ್ಪಷ್ಟನೆ ಹೀಗಿದೆ…

    ತಪ್ಪಿತಸ್ಥ ಮಹಿಳೆ ಜರ್ಮನಿಯಿಂದ ಪ್ರವಾಸ ಕೈಗೊಂಡಿದ್ದು, ಇಂಡೋನೇಷಿಯಾದ ಬಾಲಿಗೆ ಬಂದಿಳಿದಿದ್ದಾಳೆ. ಆಕೆ ತಂಗಿದ್ದ ಹೋಟೆಲ್​ನಲ್ಲಿ ಬಿಲ್ ಪಾವತಿಸಲು ವಿಫಲವಾಗಿದ್ದು, ಉಳಿಯಲು ಹಣವಿಲ್ಲದೆ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಸದ್ಯ ಮಹಿಳೆಯನ್ನು ಮನೋವೈದ್ಯರ ಬಳಿಕೆ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿರುವುದು ವರದಿಯಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts