More

    VIDEO | ನೂತನ ಸಂಸತ್ ಭವನದಲ್ಲಿ ಮೂಡಿದ ಕನ್ನಡದ ಕಂಪು; ಗೋಡೆ ಮೇಲೆ ಅಚ್ಚೊತ್ತಲಾಗಿದೆ ಬಸವಣ್ಣನವರ ವಚನ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿರುವ ನೂತನ ಸಂಸತ್ ಭವನ ವೈಭವೋಪೇತವಾಗಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ಸಂಸತ್ ಭವನದಲ್ಲಿ ಅಖಂಡ ಭಾರತದ ನಕ್ಷೆಯೊಂದಿಗೆ ಭಾರತೀಯ ಪರಂಪರೆ ಸಂಸ್ಕೃತಿಯ ಅನಾವರಣಗೊಂಡಿದ್ದು, ಕನ್ನಡದ ಕಂಪು ಪಸರಿಸಿದೆ.

    ಸಂಸತ್ ಭವನದ ಒಳಭಾಗದಲ್ಲಿ ಭಾರತೀಯ ಪರಂಪರೆಯ ಸನಾತನ ಸಂಸ್ಕೃತಿಯ ಅನಾವರಣಗೊಳಿಸುವ ಮೂಲಕ ಮತ್ತೊಮ್ಮೆ ಭಾರತದ ಗತವೈಭವವನ್ನು ಜಗತ್ತಿಗೆ ಸಾರಲಾಗಿದೆ. ಅಂತೆಯೇ ನೂತನ ಸಂಸತ್‌ ಭವನದಲ್ಲಿ ಜಗಜ್ಯೋತಿ ಬಸವಣ್ಣನವರ ವಚನವನ್ನು ಅಚ್ಚೊತ್ತಲಾಗಿದೆ. ಜತೆಗೆ ಹಂಪಿಯ ಕಲ್ಲಿನ ರಥವನ್ನು ಗೋಡೆಯ ಮೇಲೆ ಚಿತ್ರಿಸಲಾಗಿದೆ.

    ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆ; ಫೋಟೋ ಝಲಕ್​ ಇಲ್ಲಿದೆ…

    ಕಳಬೇಡ, ಕೊಲಬೇಡ
    ಹುಸಿಯ ನುಡಿಯಲು ಬೇಡ
    ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
    ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ
    ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ,

    ಎಂಬ ಬಸವಣ್ಣನವರ ವಚನವನ್ನು ನೂತನ ಸಂಸತ್ ಭವನದಲ್ಲಿ ಬರೆಯಲಾಗಿದೆ. ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಜತೆಗೆ ಸಂಸತ್ ಭವನದಲ್ಲಿ ಮೂಡಿರುವ ಕನ್ನಡದ ಕಂಪಿನ ಬಗ್ಗೆ ರಾಜ್ಯದ ಜನರು ಮಾತನಾಡುತ್ತಿದ್ದು, ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ಈ ಬಗ್ಗೆ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಟ್ವೀಟ್ ಮಾಡಿದ್ದು, ಶತಶತಮಾನಗಳಿಂದ ಈ ನಾಡಿನಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಪ್ರಜ್ವಲಿಸುತ್ತಿತ್ತು ಎನ್ನುವುದಕ್ಕೆ ಬಸವಣ್ಣನವರ12ನೇ ಶತಮಾನದ ಅನುಭವ ಮಂಟಪವೇ ಸಾಕ್ಷಿ. ಇಂದು ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ ನಮ್ಮ ಮಹಾನ್ ಸಾಧಕರಿಗೆ, ಅವರ ಶ್ರೇಷ್ಠ ಬೋಧನೆಗಳಿಗೆ, ಐತಿಹಾಸಿಕ ಹಿರಿಮೆಗಳಿಗೆ ಶಾಶ್ವತ ಸ್ಥಾನ ಕಲ್ಪಿಸಿ ಗೌರವ ಸಲ್ಲಿಸಿರುವುದು ಜನತೆಯ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts