ಜಮ್ಮು& ಕಾಶ್ಮೀರ: ಹಿಂದುತ್ವ(Hindutva) ಒಂದು ಖಾಯಿಲೆ (ಅನಾರೋಗ್ಯ) ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮಗಳು ಇಲ್ತಿಜಾ ಮುಫ್ತಿ ಹೇಳಿಕೆ ನೀಡಿದ್ದು, ಇದೀಗ ಬಿಜೆಪಿ ಸೇರಿದಂತೆ ಎನ್ಡಿಎ ನಾಯಕರಿಂದ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಕುರಿತು ಭಾನುವಾರ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವ ಅವರು, ಹಿಂದುತ್ವ ಮತ್ತು ಹಿಂದು ಧರ್ಮ ಬೇರೆ ಬೇರೆ, ಹಿಂದಿನವರೂ ಹಿಂದುತ್ವದ ಪ್ರಬಲ್ಯವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
”ಹಿಂದು ಧರ್ಮ ಮತ್ತು ಹಿಂದುತ್ವದ ನಡುವಿನ ಮಹತ್ವದ ವ್ಯತ್ಯಾಸ ಇದೆ. ಹಿಂದುತ್ವವನ್ನು 1940ರ ಪ್ರಸ್ತುತದಲ್ಲಿ ವೀರ್ ಸಾವರ್ಕರ್ ಪರಿಚಯಿಸಿದ ‘ದ್ವೇಷದ ತತ್ವಶಾಸ್ತ್ರ’ ಎಂದಿರುವ ಅವರು, ಭಾರತವು ಸಂಪೂರ್ಣವಾಗಿ ಹಿಂದುಗಳಿಗೆ ಸೇರಿದೆ ಎಂಬ ಕಲ್ಪನೆಯನ್ನು ಉತ್ತೇಜಿಸುವ ಮೂಲಕ ಹಿಂದೂ ಪ್ರಾಬಲ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇಸ್ಲಾಂ ಧರ್ಮದಂತೆ ಹಿಂದು ಧರ್ಮ ಕೂಡ ಜಾತ್ಯತೀತತೆ, ಪ್ರೀತಿ ಮತ್ತು ಸಹಾನುಭೂತಿಯನ್ನು ಉತ್ತೇಜಿಸುವ ಧರ್ಮವಾಗಿದೆ. ಜೈಶ್ರೀರಾಮ್ ಘೋಷಣೆಯು ರಾಮರಾಜ್ಯದ ಬಗ್ಗೆ ಕೂಗುತ್ತಿಲ್ಲ. ಆದರೆ, ಅದನ್ನು ಲಿಂಚಿಂಗ್‌ಗೆ(ಹತ್ಯೆಗಳಿಗೆ) ಲಿಂಕ್ ಮಾಡಲಾಗುತ್ತಿದೆ. ಇದು ಹಿಂದು ಧರ್ಮವನ್ನು ವಿರೂಪಗೊಳಿಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ” ಎಂದು ಇಲ್ತಿಜಾ ಮುಫ್ತಿ ಹೇಳಿದ್ದಾರೆ.
ಈ ಹೇಳಿಕೆ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಲ್ತಿಜಾ ಅವರು ಬಳಸಿರುವ ಭಾಷೆ ಅವಹೇಳನಕಾರಿಗಿದೆ. ಪಿಡಿಪಿ ನಾಯಕಿ ಕೂಡಲೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕ ರವಿಂದ್ರ ರೈನಾ ಒತ್ತಾಯಿಸಿದ್ದಾರೆ, (ಏಜೆನ್ಸೀಸ್).
ಬೃಹತ್ ಹೆಬ್ಬಾವಿನ ಜತೆ ದಿನ ಕಳೆಯುವ ಧೀರ! ನೆಟ್ಟಿಗರನ್ನು ಅಚ್ಚರಿಗೊಳಿಸಿದ ವಿಡಿಯೋ ವೈರಲ್ | Python
117 ಮೀ. ಎತ್ತರದಿಂದ ವಿಲ್ಚೇರ್ ಮೂಲಕ ಬಂಗೀ ಜಂಪ್! ಅಂಗವೈಫಲ್ಯವಿದ್ದರೂ ಇತಿಹಾಸ ಸೃಷ್ಠಿಸಿದ ಯೋಧ! |Bungee Jump