ಉತ್ತರಾಖಂಡ: ಇಲ್ಲಿನ ಹೃಷಿಕೇಶದಲ್ಲಿ ಗಾಲಿ ಕುರ್ಚಿಯ(ವಿಲ್ಚೇರ್)ಲ್ಲಿ ಕುಳಿತ ವ್ಯಕ್ತಿಯೊಬ್ಬ ಬರೊಬ್ಬರಿ 117 ಮೀಟರ್ ಎತ್ತರದಿಂದ ಬಂಗೀ ಜಂಪ್( Bungee Jump) ಮಾಡುವ ಮೂಲಕ ಇದೀಗ ಹೊಸ ಇತಿಹಾಸವನ್ನು ನಿರ್ಮಿಸಿದ್ದಾನೆ.
ಭಾರತದಲ್ಲಿ ಯಾರು ಮಾಡದ ಸಾಹಸವನ್ನು ಇತ ಮಾಡಿದ್ದಾನೆ. ಅಲ್ಲದೆ, ಇವರ ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲಾರ ಮೆಚ್ಚುಗೆ ಪಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಭರಪೂರ ಕಾಮೆಂಟ್ಗಳು ರಾರಾಜಿಸುತ್ತಿವೆ. ಅಭಯ್ ಡೋಗ್ರ ಎಂಬ ಈ ಯೋಧ ಸಾಹಸ ಮಾಡಿದಾತ.
ಎಲ್ಲ ಬಂಗೀ ಜಂಪ್ ಮಾಡುವ ವ್ಯಕ್ತಿಗಳು ಸಾಮಾನ್ಯವಾಗಿ ಸಲ್ಪ ಎತ್ತರದ ರಸ್ತೆಗಳು, ಸೇತುವೆಗಳು ಮತ್ತು ಸಲ್ಪ ಎತ್ತರದ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಡೋಗ್ರ ಅವರು ವಿಕಲಚೇತನದಿಂದ(ಪಾಶ್ವವಾಯು) ಕೂಡಿದ್ದರೂ ಸಹ ರಿಷಿಕೇಶದ ಅತಿ ಎತ್ತರದ ಬೆಟ್ಟದಿಂದ ಜಂಪ್ ಮಾಡಿದ್ದಾನೆ. ಅಲ್ಲದೇ, ಇತನ ಸಾಹಸ ಕೈಕಾಲು ಸರಿ ಇದ್ದವರೂ ಕೂಡ ಇವರೆಗೆ ಮಾಡಿಲ್ಲ ಎಂಬುವುದು ಗಮನಾರ್ಹ. ಇವರ ಕನಸನ್ನು ಸಾಧನೆ ಮಾಡವ ಮೂಲಕ ನನಸು ಮಾಡಿಕೊಂಡು ಹಲವರಿಗೆ ಸ್ಫೂರ್ತಿದಾಯಕರಾಗಿದ್ದಾರೆ.
ಇದನ್ನೂ ಓದಿ: ಮನುಷ್ಯರಿಗೂ ಸ್ನಾನ ಮಾಡಿಸೋಕೆ ಬಂತು ಮೆಷಿನ್; 15 ನಿಮಿಷದಲ್ಲಿ ದೇಹ & ಮನಸ್ಸು ಎರಡೂ ಸ್ವಚ್ಛ | Washing Machine
ಡೋಗ್ರಾ ಅವರು ಜಂಪಿಂಗ್ ಮಾಡುತ್ತೀರುವ ವಿಡಿಯೋವನ್ನು ‘ಹಿಮಲಾಯನ್ಬಂಗೀ’ ಎಂಬ ಇನ್ಸ್ಟಗ್ರಾಮ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ”ಮೊದಲಿಗೆ ವಿಲ್ಚೇರ್ ಮತ್ತು ತನ್ನ ಸುರಕ್ಷತೆಯನ್ನು ಸುತ್ತಲಿನ ಸಿಬ್ಬಂದಿಗಳು ಪರಿಶೀಲಿಸುತ್ತಾರೆ. ಬಳಿಕ ಸಣ್ಣ ಕ್ರೇನ್ ಸಹಾಯದಿಂದ ಮತ್ತ ಸಿಬ್ಬಂದಿಯಿಂದ ಅವರನ್ನು ನಿಧಾನವಾಗಿ ಕೆಳಗೆ ಬೀಡಲಾಗುತ್ತದೆ. ಅಲ್ಲಿಂದ ಜಂಪ್ ಮಾಡಿದ ಅಭಯ್, ಮೊದಲು ಭಯಪಡುತ್ತಾನೆ. ಆದರೆ, ಬಳಿಕ ಸಂತೋಷದಿಂದ ಚಿರಿ ಖುಷಿಪಡುತ್ತಾನೆ. ಇವರು ಜಂಪ್ ಮಾಡುವ ರೀತಿ ನೋಡುಗರನ್ನು ಭಯ ಮತ್ತು ಆಶ್ಚರ್ಯಗೊಳಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣಸಿಗತ್ತದೆ”.
ಇದನ್ನೂ ಓದಿ: ‘ಪುಷ್ಪ 2‘ ಕುರಿತು ರಾಮ್ ಗೋಪಾಲ್ ವರ್ಮಾ ವಿಮರ್ಶೆ; ಮೈ ರಿವ್ಯೂನಲ್ಲಿ ನಿರ್ದೇಶಕ ಹೇಳಿದ್ದೇನು? | RamGopal Varma
ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಈ ವಿಡಿಯೋ ಹುಟ್ಟುಹಾಕಿದೆ, ಅನೇಕರು ಡೋಗ್ರಾ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರನು ವೀಕ್ಷಣೆಗಳಿಗಾಗಿ ತುಂಬಾ ಅಪಾಯವನ್ನುಂಟುಮಾಡುವ ಅಗತ್ಯವನ್ನು ನಿಜವಾಗಿಯೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ದಯವಿಟ್ಟು ಈ ಸಾಹಸಗಳನ್ನು ಪ್ರಚಾರ ಮಾಡಬೇಡಿ ಎಂದು ತಮ್ಮದೇ ಶೈಲಿಯಲ್ಲಿ ಬರೆದುಕೊಂಡಿದ್ದಾರೆ. ಹಲವರು ಅವರ ಧೈರ್ಯ ಮತ್ತು ನಿರ್ಣಯವನ್ನು ಶ್ಲಾಘಿಸಿದ್ದು, ನೀವು ಜನರಿಗೆ ಸ್ಪೂರ್ತಿಯಾಗಿದ್ದೀರಿ ಎಂದು ಹೇಳಿದ್ದಾರೆ,(ಏಜೆನ್ಸೀಸ್).
View this post on Instagram
A post shared by India’s highest bungy 117m | Rishikesh (@himalayanbungy)
ಬೃಹತ್ ಹೆಬ್ಬಾವಿನ ಜತೆ ದಿನ ಕಳೆಯುವ ಧೀರ! ನೆಟ್ಟಿಗರನ್ನು ಅಚ್ಚರಿಗೊಳಿಸಿದ ವಿಡಿಯೋ ವೈರಲ್ | Python