

ನವದೆಹಲಿ: ಸಾಮಾನ್ಯವಾಗಿ ಹಾವುಗಳು ಕಂಡರೆ ಭಯಪಡುವುದು ಸಹಜ ಆದರೆ, ಇಲ್ಲೊಬ್ಬ ಬೃಹತ್ ಹೆಬ್ಬಾವಿನ( Python) ಜತೆ ದಿನನಿತ್ಯ ಜೀವನ ಸಾಗಿಸುತ್ತಿದ್ದು, ನೋಡುಗರನ್ನು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದಾನೆ. ಇದೀಗ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಅಶ್ಚರ್ಯಚಕಿತಗೊಳಿಸಿದ್ದಾನೆ.
ಹೌದು, ಇತ್ತೀಚಿಗೆ ಇನ್ಸ್ಟಾಗ್ರಾಮ್ದಲ್ಲಿ ಕಾಣಿಸಿಕೊಂಡ ಈ ವಿಡಿಯೋ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಬೆಚ್ಚಿಬಿಳಿಸಿದೆ. ಈ ವಿಡಿಯೋದಲ್ಲಿ ಓರ್ವ ವ್ಯಕ್ತಿಯೊಬ್ಬ ಪುಸ್ತಕವನ್ನು ಓದುತ್ತಾ ಮಲಗಿದ್ದಾನೆ. ಇದೇ ಸಂದರ್ಭದಲ್ಲಿ ಪಕ್ಕದಲ್ಲಿ ಬಂದ ಬೃಹತ್ ಹೆಬ್ಬಾವು ಅತನ ಪಕ್ಕದಲ್ಲಿ ಶಾಂತವಾಗಿ ಓಡಾಡುತ್ತೆ. ಅಲ್ಲದೆ, ಮತ್ತೊಂದು ಪಕ್ಕದಲ್ಲಿ ನಾಯಿಯೊಂದು ಕೂಡ ಶಾಂತವಾಗಿ ಮಲಗಿದೆ. ಇನ್ನು ಹೋಲ್‌ಸ್ಟನ್ ಎಂಬುವವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊ ಆನ್‌ಲೈನ್‌ನಲ್ಲಿ ತ್ವರಿತಗತಿಯಲ್ಲಿ ಸುಮಾರು ನಾಲ್ಕುನ ಮೀಲಿಯನ್ ವೀಕ್ಷಣೆ ಪಡೆದಿದೆ. ಹೋಲ್‌ಸ್ಟನ್ ಹೆಸರಿನ ವ್ಯಕ್ತಿ ಇಂತಹ ಭಯಾನಕ ಜೀವಿ(ಸರಿಸೃಪ)ಗಳ ಜತೆ ಬದುಕುವ ಧೈರ್ಯಶಾಲಿಯಾಗಿದ್ದಾನೆ ಎಂದು ವರದಿಗಳು ಉಲ್ಲೇಖಿಸಿವೆ.
ಸೋಷಿಯಲ್ ಮೀಡಿಯಾ ಬಳಕೆದಾರರು(ನೆಟ್ಟಿಜನ್) ಈ ವಿಡಿಯೋವನ್ನು ನೋಡಿದ ಮೇಲೆ ಆಶ್ಚರ್ಯವಾಗಿ ತರೇಹವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಕೆಲವರು ಇಂತಹ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಿಂದ ತಗೆದು ಹಾಕಲು ಒತ್ತಾಯಿಸಿದ್ದಾರೆ. ಇದು ಹುಚ್ಚುತನ! ಇಷ್ಟೊಂದು ಬೃಹತ್ ಹಾವಿನ ಜತೆ ಯಾರಾದರೂ ಶಾಂತವಾಗಿರುವುದು ಹೇಗೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಇದು ಅವರಿಗೆ ಸಾಮಾನ್ಯ ವಿಷಯವಾಗಿದೆ ಎಂದು ಹೇಳಿದ್ದಾರೆ,(ಏಜೆನ್ಸಿಸ್).